Document

ತೆಲಂಗಾಣ ರಾಜ್ಯದ ಚುನಾವಣಾ ವೀಕ್ಷಕರಾಗಿ ಕೆ. ಪಿ. ಸಿ. ಸಿ. ರಾಜ್ಯ ಮಾಧ್ಯಮ ವಕ್ತಾರ ಮಹಾಂತೇಶ. ಲಕ್ಶ್ಮಣ ಹಟ್ಟಿ ನೇಮಕ.

Janataa24 NEWS DESK

IMG 20231115 WA0002

ಬಾದಾಮಿ: ಯುವಮುಖಂಡ, ಕೆ.ಪಿ.ಸಿ.ಸಿ ರಾಜ್ಯ ವಕ್ತಾರ ಮಹಾಂತೇಶ. ಲಕ್ಷ್ಮಣ ಹಟ್ಟಿ ಇವರನ್ನು ತೆಲಂಗಾಣ ರಾಜ್ಯದ ನಾಗಕರ್ನೂಲ್ ವಿಧಾನಸಭೆ ಕ್ಷೇತ್ರದ ಚುನಾವಣೆಯ ವೀಕ್ಷಕರನ್ನಾಗಿ ನೇಮಕ ಮಾಡಿ ತೆಲಂಗಾಣ ರಾಜ್ಯದ ಎಐಸಿಸಿ ಪ್ರಭಾರಿ ಮಾನಿಕರಾವ ಟಕಾರಿ ಆದೇಶ ಹೊರಡಿಸಿದ್ದಾರೆ.

image editor output image531307351 1700035064811



ತೆಲಂಗಾಣ ರಾಜ್ಯದ ನಾಗಕರ್ನೂಲ್ ವಿಧಾನಸಭಾ ಕ್ಷೇತ್ರದ ಮಂಡಲ ವೀಕ್ಷಕರಾಗಿ ನೇಮಕ ಮಾಡಲು ಶಿಫಾರಸ್ಸು ಮಾಡಿದ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಸಾಧಿಸಲಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಮಹಾಂತೇಶ. ಲಕ್ಷ್ಮಣ ಹಟ್ಟಿ ತಿಳಿಸಿದ್ದಾರೆ.

IMG 20231115 WA0004


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈಗಾಗಲೇ ಕೇಂದ್ರದಲ್ಲಿ ಬಿಜೆಪಿ ಕಳೆದ 10 ವರ್ಷಗಳಲ್ಲಿ ಯಾವ ರೀತಿ ಆಡಳಿತ ನಡೆಸಿದೆ. ಬೆಲೆ ಏರಿಕೆ, ನಿರುದ್ಯೋಗ, ರೈತಪರ ಯಾವುದೇ ಯೋಜನೆ ನೀಡದೇ ಕೇವಲ ರಾಮಮಂದಿರದ ವಿಷಯ ಇಟ್ಟುಕೊಂಡು ಮತ ಪಡೆಯುತ್ತಿದೆ ಎಂದು ಆರೋಪಿಸಿರುವ ಮಹಾಂತೇಶ ಹಟ್ಟಿ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಸರಳ ಬಹುಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




ವರದಿ

ಬಾಗಲಕೋಟೆ: ರಾಜೇಶ್. ಎಸ್. ದೇಸಾಯಿ

Document

Leave a Reply

Your email address will not be published. Required fields are marked *