ತುರುವೇಕೆರೆ: ಮಂಜುನಾಥ್
ತುರುವೇಕೆರೆ ಪಟ್ಟಣದಲ್ಲಿ ಸುಮಾರು ವರ್ಷದಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ಇಂದು ಬೆಳಗ್ಗೆ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಜಂಟಿಯಾಗಿ ಬೆಳಗಿನ ಜಾವ ಸದ್ದಿಲ್ಲದೆ ಬೀದಿಬದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ನೆಲಸಮಗೊಳಿಸಿದೆ.

ಇನ್ನು ಈ ವ್ಯಾಪಾರವನ್ನೇ ನಂಬಿ ಜೀವನ ಸಾಗಿಸಿ ಬದುಕು ಕಟ್ಟಿಕೊಳ್ಳುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ದಿಢೀರ್ ನೆಲಸಮಗೊಳಿಸಿ ಬೀದಿಬದಿ ವ್ಯಾಪಾರಿಗಳನ್ನು ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಬಡ ವ್ಯಾಪಾರಿಗಳನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಇನ್ನು ವ್ಯಾಪಾರ ಮಾಡಲು ಸ್ಥಳವಿಲ್ಲದೆ ಅಂಗಡಿಗಳು ಇಲ್ಲದೆ ಮುಂದೆ ನಮ್ಮ ಜೀವನ ಹೇಗೆ ನಡೆಸುವುದು ಎಂದು ಚಿಂತಾಕ್ರಾಂತರಾಗಿ ಕುಳಿತಿದ್ದ ವ್ಯಾಪಾರಿಗಳ ನೋವನ್ನು ತಿಳಿದ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಅವರು ಸ್ಥಳಕ್ಕೆ ಆಗಮಿಸಿದ್ದಾರೆ ಇನ್ನು ವ್ಯಾಪಾರಿಗಳ ಗೋಳನ್ನು ಕೇಳಿ ತಕ್ಷಣ ತಾಲೂಕಿನ ದಂಡಾಧಿಕಾರಿಯಯಾದ ವೈ ಎಂ ರೇಣು ಕುಮಾರ್ ಅವರ ಕಚೇರಿಗೆ ತೆರಳಿ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳನ್ನು ಹೇಳಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅಡ್ಡಿಪಡಿಸಬಾರದು ಹಾಗೂ ವ್ಯಾಪಾರ ನಡೆಯುವ.

ಸೂಕ್ತವಾದ ನಿಗದಿತ ಸ್ಥಳವನ್ನು ಗುರುತಿಸಿ ಅವರುಗಳಿಗೆ ಅನುವು ಮಾಡಿ ಕೊಡಬೇಕು .ಇಲ್ಲವಾದಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು ಇನ್ನು ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಮೇಶ್, (ಬಾಣಸಂದ್ರ) ಬಡಾವಣೆ ಶಿವರಾಜು, ಮಂಗಿ ಕುಪ್ಪೆ ಬಸವರಾಜು, ಇನ್ನು ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯ ಬೆನ್ನಿಗೆ ನಿಂತ ತಾಲೂಕಿನ ಸಿಐಟಿಯು ಸತೀಶ್. ವಿವಿಧಪರ ಸಂಘಟನೆಯ ಮುಖಂಡರು ಆಟೋ ಚಾಲಕರು, ಇನ್ನು ಅನೇಕ, ಮುಖಂಡರುಗಳು ಮಾಜಿ ಶಾಸಕ ಎಂ ಟಿ ಕೃಷ್ಣಪ್ಪನವರಿಗೆ ಜೊತೆಯಾಗಿ ನಿಂತರು.