Janataa24 NEWS DESK

ತುರುವೇಕೆರೆ: ತುರುವೇಕೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಯಲ್ಲಿ ಇಂದು ಬಹಳ ವಿಶೇಷವಾಗಿ ದಸರಾ ಮಹೋತ್ಸವ ಆಚರಿಸಿದರು.

ಇನ್ನೂ ವಿಶೇಷತೆ, ಕೆಲ ದಿನಗಳ ಹಿಂದಷ್ಟೇ ನೂತನವಾಗಿ ತುರುವೇಕೆರೆ ಪೊಲೀಸ್ ಠಾಣೆಗೆ ಸಿಪಿಐ ಆಗಿ ನಿಯೋಜನೆಗೊಂಡಿರುವ ಲೋಹಿತ್ ಅವರಿಗೆ ಹಾಗೂ ಈಗಾಗಲೇ ಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿರುವ ಗಣೇಶ್ ಅವರಿಗೆ ಠಾಣೆಯ ಸಿಬ್ಬಂದಿಗಳಿಂದ ಶಾಲನ್ನು ಹೊದಿಸಿ ದಸರಾ ಹಬ್ಬದ ಶುಭಾಶಯವನ್ನು ಕೋರಿ
ಜೊತೆಗೆ ನೂತನವಾಗಿ ಆಗಮಿಸಿರುವ ಸಿಪಿಐ ಲೋಹಿತ್ ಅವರಿಗೆ ಸ್ವಾಗತಿಸಿದರು, ಇದೇ ವೇಳೆ ತುರುವೇಕೆರೆ ಪೊಲೀಸ್ ಠಾಣೆಯ ಅಧಿಕಾರಿಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು ದಸರಾ ಮಹೋತ್ಸವ ಆಚರಿಸಿದ್ದರು.

ನಮ್ಮ ಸುದ್ದಿ ವಾಹಿನಿಯ ಪರವಾಗಿ ತುರುವೇಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೆ ದಸರಾ ಹಬ್ಬದ ಶುಭಾಶಯಗಳು ಕೋರೋಣ.

ವರದಿ
ತುರುವೇಕೆರೆ: ಮಂಜುನಾಥ್