Janataa24 NEWS DESK

ತುರುವೇಕೆರೆ: ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಜಡೆಯ ಮಜರೆ ಗ್ರಾಮವಾದ ತಿಮ್ಲಾಪುರ ಎಂಬ ಗ್ರಾಮಕ್ಕೆ ಇಂದು ಸುಮಾರು 17 ಲಕ್ಷ ರೂ ವೆಚ್ಚದ ಜಲಜೀವನ್ ಮಿಷನ್ ಯೋಜನೆಯಡಿ,
ಗ್ರಾಮದಲ್ಲಿರುವ ಸುಮಾರು 40 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಕಾಮಗಾರಿಗೆ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ಕೃಷ್ಣಸ್ವಾಮಿ ಅವರು ಚಾಲನೆ ನೀಡಿದರು.
ಇದರ ಜೊತೆಗೆ ಇದೇ ಗ್ರಾಮದಲ್ಲಿ ಸುಮಾರು 10 ಸಾವಿರ ಲೀಟರ್ ಸಾಮರ್ಥ್ಯವುಳ್ಳ ಓವರ್ ಹೆಡ್ ಟ್ಯಾಂಕ್ ಕಾಮಗಾರಿಗು ಕೂಡ ಚಾಲನೆ ನೀಡಿದರು.
ಈ ಗ್ರಾಮವು ಸುಮಾರು 10 ವರ್ಷದಿಂದಲೂ ಕೂಡ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಕೇವಲ ಒತ್ತುವ ಬೋರ್ ವೆಲ್ ನಲ್ಲಿ ನೀರನ್ನು ಉಪಯೋಗಿಸುತ್ತಿದ್ದು.
ಇನ್ನು ಮುಂದಿನ ದಿನಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿಗಾಗಿ ಯಾರು ಪರೀತಪಿಸಬಾರದೆಂದು ಈ ಕಾಮಗಾರಿಯನ್ನು ಇಂದಿನಿಂದ ಆರಂಭ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಯಾದವ ಮುಖಂಡರಾದ ಕೃಷ್ಣಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಮಹೇಶ್, ಜಯಲಕ್ಷ್ಮಮ್ಮ, ಸಿದ್ದಗಂಗಮ್ಮ ರಾಜಣ್ಣ, ನೂರಯಾಷ್ ಕಾಲಿದ್ ಪಾಷ , ಗುತ್ತಿಗೆದಾರರಾದ ವಿರೂಪಾಕ್ಷ ,ಪಂಚಾಯಿತಿ ನೀರು ವಿತರಕ ಶಿವರಾಂ, ಉಪಸ್ಥಿತರಿದ್ದರು.