Document

ಡಿಕೆ ಸುರೇಶ್ ವಿರುದ್ಧ ಸಿಡಿದ ಮುನಿರತ್ನ–ರಾಜಕೀಯದಲ್ಲಿ `ಡೆತ್’ ಚಾಲೆಂಜ್

Janataa24

NEWS DESK

images281129
HonnasiriMahindrapost02
ಜಾಹೀರಾತು/Advertisement

ನಾನು ಒಕ್ಕಲಿಗ ಮಹಿಳೆಗೆ ಹೊಡೆಯಿರಿ’ ಅಂತಾ ಹೇಳಿದ್ದೇನೆ ಎನ್ನುವುದನ್ನು ಪ್ರೂವ್ ಮಾಡಿದ್ರೆ ನಾನು ನೇಣು ಹಾಕಿಕೊಳ್ಳುತ್ತೇನೆ.

ಬೆಂಗಳೂರು: ರಾಜಕೀಯ ರಣಾಂಗಣದಲ್ಲಿ ಇದುವರೆಗೆ ಆಣೆ-ಪ್ರಮಾಣ ರಾಜಕೀಯ ಕಾಮನ್ ಆಗಿತ್ತು. ದೇವರ ಮೇಲೆ ಆಣೆ-ಪ್ರಮಾಣ ಮಾಡೋದು ಸಹಜವಾಗಿತ್ತು. ಆದರೀಗ `ಡೆತ್ ಚಾಲೆಂಜ್’ ಶುರುವಾಗಿದೆ.

D K SURESH 1

`ನಾನು ಒಕ್ಕಲಿಗ ಮಹಿಳೆಗೆ ಹೊಡೆಯಿರಿ’ ಅಂತಾ ಹೇಳಿದ್ದೇನೆ ಎನ್ನುವುದನ್ನು ಪ್ರೂವ್ ಮಾಡಿದ್ರೆ ನಾನು ನೇಣು ಹಾಕಿಕೊಳ್ಳುತ್ತೇನೆ. ಇಲ್ಲದಿದ್ರೆ ಡಿ.ಕೆ ಸುರೇಶ್ (DK Suresh) ನೇಣು ಹಾಕಿಕೊಳ್ತಾರಾ ಎಂದು ತೋಟಗಾರಿಕಾ ಸಚಿವ ಮುನಿರತ್ನ (Munirathna) ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್‌ಗೆ ಸವಾಲ್ ಎಸೆದಿದ್ದಾರೆ.

HonnasiriMahindrapost02 1
ಜಾಹೀರಾತು/Advertisement

ಮುನಿರತ್ನ ಪ್ರಚೋದನಕಾರಿ ಭಾಷಣ ಮಾಡಿರುವ ಬಗ್ಗೆ ಸಂಸದ ಡಿ.ಕೆ ಸುರೇಶ್ ವೀಡಿಯೋವೊಂದನ್ನ ರಿಲೀಸ್ ಮಾಡಿದ್ದರು. ಈ ಸಂಬಂಧ ಸಚಿವ ಮುನಿರತ್ನ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಸಂಸದ ಡಿ.ಕೆ ಸುರೇಶ್ ನನ್ನ ಬಗ್ಗೆ ಕೆಲ ಪದಬಳಕೆ ಮಾಡಿದ್ದಾರೆ. ಅವರ ಮೇಲೆ ನನಗೆ ಬಹಳ ಗೌರವ ಇದೆ. 7 ವರ್ಷ ಅವರ ಜೊತೆಯಿದ್ದೆ. ಇದೇ ಸುರೇಶ್ ನನಗೆ 5 ಭಾಷೆಗಳಲ್ಲಿ ಮಾತನಾಡುವಂತೆ ಹೇಳುತ್ತಿದ್ದರು. ಉರ್ದು, ತಮಿಳು, ತೆಲುಗಿನಲ್ಲಿ ಮಾತನಾಡಿ ಸರ್ ವೋಟು ಬರುತ್ತೆ ಅಂತಾ ಹೇಳಿದ್ದರು. ಆದರೀಗ ಅವರೇ ಈ ರೀತಿ ಹೇಳ್ತಿರೋದು ಸರಿಯಲ್ಲ. ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಅಂತಾ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Document

Leave a Reply

Your email address will not be published. Required fields are marked *