ಚೊಳಚಗುಡ್ಡ ಗ್ರಾಮ-ದೇವತೆಯ ಕೊನೆಯ ವಾರದ ಉಡಿ ತುಂಬಿ ಗ್ರಾಮಸ್ಥರು ಪ್ರಸನ್ನರಾದರು

Janataa24 NEWS DESK

IMG 20230503 WA0004


ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಗ್ರಾಮ ದೇವತೆಯ ಕೊನೆಯ ವಾರದ ಉಡಿ ತುಂಬಿ ಗ್ರಾಮಸ್ಥರು ಪ್ರಸನ್ನರಾದರು

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಗ್ರಾಮ ದೇವತೆಗೆ ಪ್ರತಿ ವರ್ಷದಂತೆ ಈ ಸಲವೂ ವಾರ ಹಿಡಿದು ಅವತ್ತು ಅಷ್ಟ ದೇವಾನುದೇವರುಗಳಿಗೆ ಗ್ರಾಮಸ್ತರು ಮಡಿಯಿಂದ ನೀರು ಹಾಕಿ ಪೂಜೆ ಸಲ್ಲಿಸಿ ನಂತರ ಗ್ರಾಮಸೇವತೆಗೆ ಗ್ರಾಮದ ಸುಮಂಗಲೆಯರೆಲ್ಲ ಗ್ರಾಮದೇವತೆಗೆ ಉಡಿ ತುಂಬಿ ಪೂಜೆ ಸಲ್ಲಿಸಿ ಆರತಿ ಬೆಳಗಿದ ನಂತರವೇ ಅಷ್ಟ ದೇವರುಗಳಗೆ ಡೊಳ್ಳು ಬಾರಿಸುತ್ತ ಮೆರವಣಿಗೆ ಮೂಲಕ ಮುತ್ತೈದೆಯರು ಜೊತೆಗೂಡಿ ಪೂಜೆ ಸಲ್ಲಿಸಿ ಬರುವುದು ತಲೆತಲಂತರದಿಂದ ನಡೆದು ಬಂದ ಸಂಪ್ರದಾಯವನ್ನು ಇಂದಿಗೂ ಕೂಡ ಮುಂದುವರಿಸಿಕೊಂಡು ಹೋಗುತ್ತಿದೆ ಚೊಳಚಗುಡ್ಡ ಗ್ರಾಮದವರು.

ಗ್ರಾಮದೇವತೆ ಪೂಜಾ ಕಾರ್ಯಕ್ರಮದಲ್ಲಿ ಯುವ ಮುಖಂಡ ವೀರಣ್ಣ. ಎನ್. ಸಾತನ್ನವರ,ಮನೋಹರ್ ಈಳಗೇರ,,ಹಿರಿಯರಾದ ಗುರುಪಾದಪ್ಪ ವಾಲಿ, ಎಂ.ಟಿ. ಗಾರವಾಡ ಗುರುಗಳು, ಮುತ್ತಣ್ಣ. ಎಸ್. ಹುಂಬಿ, ಬಸವರಾಜ್ ಸರಗನಾಚಾರಿ, ಪ್ರಕಾಶ್ ಧನ್ನೂರ್, ಶರಣಪ್ಪ. ಗಂಗಾಲ, ನಿಜಲಿಂಗಪ್ಪ. ಹೊಸಗೌಡ್ರ, ರಾಜೇಶ್. ಎಸ್. ದೇಸಾಯಿ, ಬಸವರಾಜ್. ಎನ್. ಪಾಟೀಲ ಸೇರಿದಂತೆ ಗ್ರಾಮಸ್ಥರು ಯುವಕರು ಭಾಗವಹಿಸಿದ್ದರು.

ವರದಿ

ಬಾಗಲಕೋಟೆ: ರಾಜೇಶ್. ಎಸ್ ದೇಸಾಯಿ

Leave a Reply

Your email address will not be published. Required fields are marked *