Janataa24 NEWS DESK

ಚಾಲುಕ್ಯರ ಅಧಿದೇವತೆ ನವಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಮಹರ್ಷಿ ವಾಣಿ ಕಾರ್ಯಕ್ರಮದ ರುವಾರಿ ಆನಂದ ಗುರೂಜಿ ಇಂದು ಭೇಟಿ ನೀಡಿ ವಿಶೇಷ ಕಾರ್ಯಕ್ರಮ ನೆರವೇರಿಸಿದರು.
ಮಹರ್ಷಿ ವಾಣಿ ಕಾರ್ಯಕ್ರಮದಿಂದ ಮನೆ ಮಾತಾಗಿರುವ ಶ್ರೀ ಆನಂದ ಗುರೂಜಿ ಇಂದು ಚಾಲುಕ್ಯರ ಅಧಿದೇವತೆ ನವಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಸುಕ್ಷೇತ್ರ ಶ್ರೀ ಬನಶಂಕರಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಆನಂದ ಗುರೂಜಿ ದೇವಸ್ಥಾನದ ಪುಣ್ಯ ಪುಷ್ಕರಣಿ ಪದ್ಮ ತೀರ್ಥ ಕೊಳದಲ್ಲಿ ಇಳಿದು ಚೊಳಚಗುಡ್ಡ ಪೂಜಾರರಾದ ಉದಯ ಪೂಜಾರ ಅರ್ಚಕರಾದಿಯಾಗಿ ಮಂತ್ರ ಪಠಣಗೈಯುತಾ ಕುಂಭಕ್ಕೆ ನೀರು ತುಂಬಿಕೊಂಡು ದೇವಸ್ಥಾನದ ಪ್ರಾಂಗಣದಲ್ಲಿ ಆನಂದ ಗುರೂಜಿ ಹಾಗೂ ಅವರ ಪುತ್ರ ಶರ್ಮಾ ಗುರೂಜಿ Probably ಬೆಂಗಳೂರಿನ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು ಸರ್ವ ಸದಸ್ಯರೂ ಕೂಡ ಜೊತೆಗೆ ಹೆಜ್ಜೆ ಹಾಕುತ್ತಾ ನಡೆದು, ದೇವಸ್ಥಾನದ ಪ್ರಾಂಗಣದ ನಾಗಪ್ಪ ನ ಪ್ರತಿಮೆಗೆ ಕುಂಬದ ನೀರಿನಿಂದ ವಿಶೇಷ ನಾಗ ಪೂಜೆ ಸಲ್ಲಿಸಿ, ತಾಯಿ ಆದಿಶಕ್ತಿ ನವಶಕ್ತಿ ಜಗನ್ಮಾತೆ ಶಾಖ0ಭರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿ ದೇವಿಯ ಮಹಿಮೆಯನ್ನು ಕೊಂಡಾಡಿದರು.ಇದೇ ಸಂದರ್ಭದಲ್ಲಿ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಚೇರಮನ್ ಮಲ್ಲಾರಭಟ್. ಶಂಕರಭಟ್ ಪೂಜಾರ ಆನಂದ್ ಗುರೂಜಿಯವರಿಗೆ ಹಾಗೂ ಅವರ ಕುಟುಂಬ ವರ್ಗದವರು ಹಾಗೂ ಬೆಂಗಳೂರು ಬನಶಂಕರಿ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಸೇರಿದಂತೆ ಇವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ವ್ಯಕ್ತಪಡಿಸಿದರು.ಚೊಳಚಗುಡ್ಡದ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯವರನ್ನು ಹಾಗೂ ಎಲ್ಲಾ ಅರ್ಚಕ ವರ್ಗದವರ ಕಾರ್ಯ ಕ್ಷಮತೆ ಬಗ್ಗೆ ಕೊಂಡಾಡಿ ಜಗನ್ಮಾತೆ ನಿಮ್ಮೆಲ್ಲರನ್ನು ರಕ್ಷಿಸಲಿ,, ನಿಮ್ಮ ಈ ಕಾರ್ಯ ಇಡೀ ರಾಜ್ಯ ಅಷ್ಟೇ ಅಲ್ಲಾ ರಾಷ್ಟ್ರವೇ ಮೆಚ್ಚುವಂತದ್ದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿದ್ದ ನೂರಾರು ಭಕ್ತರನ್ನು ಉದ್ದೇಶಿಸಿ ಮಾತನಾಡಿ ಭಕ್ತರ ಸಮಸ್ಯೆಗಳನ್ನು ಆಲಿಸಿ ಉತ್ತರ ಕರ್ನಾಟಕದ ಜನತೆ ಎಂದರೆ ನನಗೆ ಅಚ್ಚುಮೆಚ್ಚು ನೀವು ತೋರಿಸುವ ಪ್ರೀತಿ ವಾತ್ಸಲ್ಯಕ್ಕೆ ನಾನು ಎಂದಿಗೂ ಖುಣಿಯಾಗಿದ್ದೇನೆ ಎಂದು ತಿಳಿಸಿದರು..
ಇದೇ ಸಂದರ್ಭದಲ್ಲಿ ಬೆಂಗಳೂರಿನ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧಕ್ಷರಾದ ಬಸವರಾಜ್. ಎ. ಎಚ್.ಹಾಗೂ ಕೆ. ಪದ್ಮಾ ಕಾರ್ಯನಿರ್ವಾಹಕ ಅಧಿಕಾರಿ ಬೆಂಗಳೂರು, ಮತ್ತು ಬೆಂಗಳೂರಿನ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರುಗಳು ಮತ್ತು. ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೊಳಚಗುಡ್ಡದ ಅರ್ಚಕರು ಇದೇ ಸಂದರ್ಭದಲ್ಲಿ ಹಾಜರಿದ್ದರು.
ವರದಿ
ಬಾಗಲಕೋಟೆ:- ರಾಜೇಶ್. ಎಸ್. ದೇಸಾಯಿ