Document

ಗೋಮಾಳ ಜಾಗ ಕಬಳಿಸುವವರಿಗೆ ಸಿಂಹ ಸ್ವಪ್ನ ವಾಗಿ ನಿಂತ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್.

ತುರುವೇಕೆರೆ: ಮಂಜುನಾಥ್

ತುರುವೇಕೆರೆ, ತಾಲೂಕಿನಲ್ಲಿ ನಿನ್ನೆಯಷ್ಟೇ ಭೂ ಅಕ್ರಮ ಮಾಡುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದ ದಂಡಾಧಿಕಾರಿ ವೈ ಎಂ ರೇಣು ಕುಮಾರ್ ರವರು,ಮತ್ತೆ ಇಂದುಕೂಡ ಗೋಮಾಳ ಜಾಗ ಕಬಳಿಸುವವರ ಪಾಲಿಗೆ ಸಿಂಹ ಸ್ವಪ್ನವಾಗಿ ನಿಂತಿದ್ದಾರೆ.

IMG 20221222 WA0003 1

ತಾಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಸಂಚರಿಸಲು ಗ್ರಾಮದಲ್ಲಿ ಸರ್ಕಾರಿ ಗೋಮಾಳ ಜಾಗ ಬಂಡಿದಾರಿ ಇದ್ದು, ಆ ಜಾಗಕ್ಕೆ ಜಯಮ್ಮ ಎಂಬವರು ಸುಮಾರು ಒಂದು ವರ್ಷದಿಂದ ಗ್ರಾಮಸ್ಥರುಗಳಿಗೆ ದಾರಿ ಬಿಡದೆ ದಾರಿಗೆ ಅಡ್ಡಲಾಗಿ ಬೇಲಿ ನಿರ್ಮಿಸಿ ಬೇಲಿ ಸಹ ಬೆಳೆಸಿಕೊಂಡು ಬಂದಿದ್ದಾರೆ, ಇದರ ಸಲುವಾಗಿ ಒಂದು ವರ್ಷದ ಹಿಂದೆ ತಾಲೂಕು ಸರ್ವೆಯರ್ ನಟೇಶ್, ರೆವಿನ್ಯೂ ಇನ್ಸ್ಪೆಕ್ಟರ್ ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಇವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿ, ಈ ಜಾಗ ಗೋಮಾಳ ಜಾಗವಾಗಿದ್ದು ಬಂಡಿ ದಾರಿಯೂ ಕೂಡ ಇದೆ ಎಂಬುದನ್ನು ಅಕ್ರಮವಾಗಿ ಬೇಲಿಯನ್ನು ಹಾಕಿಕೊಂಡು ಇದ್ದ ಮಹಿಳೆ ಜಯಮ್ಮ ಎಂಬುವರಿಗೆ ತಿಳಿಹೇಳಿ ಈ ದಾರಿಯನ್ನು ಗ್ರಾಮಸ್ಥರುಗಳಿಗೆ ಹಾದು ಹೋಗಲು ಅನುವು ಮಾಡಿಕೊಡುವಂತೆ ಹೇಳಿದರು.


ಆದರೂ ಈಕೆ ಯಾರಿಗೂ ಜಗ್ಗದೆ ಅಧಿಕಾರಿಗಳ ಮಾತಿಗೂ ಕಿವಿಗೊಡದೆ ಅಧಿಕಾರಿಗಳಿಗೆ ಜವಾಬ್ ಹೇಳಿ ಕಳುಹಿಸಿದ್ದಳು,
ಆದರೆ ನೆನ್ನೆ ಗ್ರಾಮಸ್ಥರುಗಳು ತಾಲೂಕು ದಂಡಾಧಿಕಾರಿ ಯವರನ್ನು ಭೇಟಿ ಮಾಡಿ, ತಮಗೆ ಆಗುತ್ತಿರುವ ಸಮಸ್ಯೆಯಾದ ಬಂಡಿದಾರಿ ಇರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ, ತಕ್ಷಣ ಎಚ್ಚೆತ್ತ ದಂಡಾಧಿಕಾರಿ ರೇಣು ಕುಮಾರ್ ಅವರು ಇಂದು ಬೆಳಗ್ಗೆ ದಿಢೀರನೆ ಸ್ಥಳಕ್ಕೆ ಈ ಹಿಂದೆ ಸ್ಥಳ ಪರಿಶೀಲನೆ ಮಾಡಿದ್ದ ಅಧಿಕಾರಿಗಳನ್ನೇ ಕರೆದುಕೊಂಡು ಹೋಗಿ, ಸ್ಥಳ ಪರಿಶೀಲನೆ ಮಾಡಿದ್ದಾರೆ ,ನಂತರ ಈ ಬಂಡಿದಾರಿ ಇರುವುದು, ಸರ್ವೆ ನಂಬರ್ 13 ರ ಸರ್ಕಾರಿ ಗೋಮಾಳ ಜಾಗ ಎಂದು ತಿಳಿದ ದಂಡಾಧಿಕಾರಿ, ಕೂಡಲೇ ಸ್ಥಳಕ್ಕೆ ಅಕ್ರಮವಾಗಿ ಬೇಲಿ ಹಾಕಿದ್ದ ಜಯಮ್ಮ ಎಂಬಾಕೆಯನ್ನು ಕರೆಯಿಸಿ ಈ ಜಾಗವನ್ನು ನೀನು ಬಿಟ್ಟುಕೊಡದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿ ಈ ಜಾಗ ನನ್ನದಲ್ಲ ಸರ್ಕಾರಿ ಜಾಗ ಎಂದು ಅರಿತ ಮಹಿಳೆ ಕೊನೆಗೂ ಗ್ರಾಮಸ್ಥರುಗಳಿಗೆ ದಾರಿ ಬಿಡಲು ಒಪ್ಪಿಕೊಂಡಿದ್ದಾರೆ, ನಂತರ ಅಲ್ಲೇ ನಿಂತು ದಂಡಾಧಿಕಾರಿಯವರು ಗ್ರಾಮಸ್ಥರುಗಳಿಗೆ ಹೇಳಿ ಬೇಲಿಯನ್ನು ತೆರವು ಮಾಡಿಸಿ ಓಡಾಡಲು ದಾರಿಯನ್ನ ಬಿಡಿಸಿಕೊಟ್ಟಿದ್ದಾರೆ ,ಇನ್ನು ಈ ಸಂದರ್ಭದಲ್ಲಿ ಗ್ರಾಮಸ್ಥರುಗಳು , ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.

Screenshot 20221222 140300 YouTube 1
Document

Leave a Reply

Your email address will not be published. Required fields are marked *