Document

ಗುಬ್ಬಿ BJPಗೆ ಎದುರಾಳಿ ಜೆಡಿಎಸ್ ಪಕ್ಷವೇ ಹೊರತು ಕಾಂಗ್ರೆಸ್ ಪಕ್ಷವಲ್ಲ

JANATAA24 NEWS DESK

ಗುಬ್ಬಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಗೆ ಎದುರಾಳಿಯು ಜೆಡಿಎಸ್ ಪಕ್ಷವೇ ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಹೆಬ್ಬಾಕ ರವಿ ಕುಮಾರ್ ತಿಳಿಸಿದರು.

ಗುಬ್ಬಿ: ಇಂದು ತಾಲೂಕಿನ ಬಿಜೆಪಿ ಕಚೇರಿಯಲ್ಲಿ
ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡ ಕಾಡುಗೊಲ್ಲ ಮುಖಂಡರ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದವರು ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ
ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟನೆ ಮಾಡಿದ್ದೇವೆ ಅಭ್ಯರ್ಥಿಯು ಆಯ್ಕೆಯಾಗಿದೆ.

IMG 20230416 WA0180



ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಲಿದ್ದೇವೆ ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಆಗಮಿಸಲಿದ್ದಾರೆ. ಪಕ್ಷವುಅಭ್ಯರ್ಥಿಗಳ ಮಾನ ದಂಡವನ್ನು ಹಾಗೂ ಜನಾಭಿಪ್ರಾಯವನ್ನು ಪರಿಶೀಲಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಕಳೆದ ಎರಡು ಮೂರು ದಿನಗಳಿಂದ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿವೆ.

ಪಕ್ಷದ ಹಿರಿಯ ನಾಯಕರುಗಳು ಅತೃಪ್ತ ಅಭ್ಯರ್ಥಿ ಬೆಟ್ಟಸ್ವಾಮಿಯವರಿಗೆ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು ಅವರ ವೈಯಕ್ತಿಕ ಕಾರಣದಿಂದ ಪಕ್ಷ ತೊರೆದು ಹೋಗಿದ್ದಾರೆ ನನ್ನ ಮನಸ್ಸಿಗೂ ಸಹ ನೋವಾಗಿದೆ ಚಂದ್ರಶೇಖರ್ ಬಾಬು ರವರು ಪಕ್ಷದಲ್ಲಿರುವ ಸಾಧ್ಯತೆ ಇದೆ
ನಮ್ಮ ಕಾರ್ಯಕರ್ತರು ಯಾವುದೇ ವ್ಯಕ್ತಿ ಹಿಂದೆ ಹೋಗುವುದಿಲ್ಲ ಪ್ರತಿನಿತ್ಯವೂ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ವಿನಹ ಪಕ್ಷ ತೆರೆದು ಯಾವ ಕಾರ್ಯಕರ್ತರು ತೆರಳುತ್ತಿಲ್ಲ ಯಾವ ಒಬ್ಬ ಅಭ್ಯರ್ಥಿಯೇ ಪಕ್ಷ ತೊರೆದು ಹೋದರೆ ನಾಷ್ಟ ವಾಗುತ್ತದೆ ವಿನಹ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮಾಜಿ ಶಾಸಕರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಹಾಗಾಗಿ ಬಿಜೆಪಿ ಪಕ್ಷವು ಜಾತ್ಯತೀತ ಪಕ್ಷವಾಗಿರುವುದರಿಂದ ಈ ಬಾರಿ ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಎದುರಾಳಿಯೇ ಹೊರೆತು ಕಾಂಗ್ರೆಸ್ ಪಕ್ಷವಲ್ಲ ಈ ಬಾರಿ ಗೆಲುವು ಸಾಧಿಸುತ್ತೇವೆ ತಿಳಿಸಿದರು.

IMG 20230416 WA0182



ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್ ಅವರು ಮಾತನಾಡಿ ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಬಿಜೆಪಿ ಪಕ್ಷ ತೊರೆದು ಹೋಗುವರು ಬರೀ ಕೈಯಲ್ಲಿ ಹೋಗಬೇಕೆ ವಿನಹ ಯಾವುದೇ ಮತಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಕಾರ್ಯಕರ್ತರು ಮುಖಂಡರುಗಳು ಪಕ್ಷದಲ್ಲಿ ಇದ್ದರೆ ಹಾಗಾಗಿ ಈ ಬಾರಿ ಗೆಲುವು ಸಾಧಿಸುತ್ತೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಪಂಚಾಕ್ಷರಯ್ಯ, ಯಾದವ್ ಮುಖಂಡರಾದ ಶಂಕ್ರಣ್ಣ ಶಿವಕುಮಾರ್ ಗುಡ್ಡದಳ್ಳಿ ಬಸವರಾಜ್ ಇತರರು ಇದ್ದರು

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *