Janataa24 NEWS DESK
ಗುಬ್ಬಿ :ತಾಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ಲಭ್ಯವಿದ್ದು ಈ ಭಾರಿ ಬಿಜೆಪಿ ಸರ್ಕಾರ ರಚನೆ ಮಾಡುವುದು ಶತಸಿದ್ದ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅ.ನ.ಲಿಂಗಪ್ಪ ತಿಳಿಸಿದರು.

ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಅಳಿಲಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಪರವಾಗಿ ಭಾನುವಾರ ಮನೆ ಮನೆ ಪ್ರಚಾರ ಮಾಡಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಬಂದರೆ ಅಭಿವೃದ್ದಿ ಸಾಧ್ಯ.ಕಳೆದ 50 ವರ್ಷಗಳಲ್ಲಿ ಆಗದ ಕೆಲಸಗಳನ್ನು ಕೇವಲ 5ವರ್ಷದಲ್ಲಿ ಮಾಡಿ ತೋರಿಸುವ ಮೂಲಕ ಗುಬ್ಬಿ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡುವುದೆ ನಮ್ಮ ಧ್ಯೇಯ ಎಂದರು.ಕಾಂಗ್ರೇಸ್ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಯಾವುದೇ ವಿಶ್ವಾಸವಿಲ್ಲ ಕಾಂಗ್ರೇಸ್ ಪಕ್ಷದಲ್ಲಿ ಮನೆ ಒಂದು ಮೂರು ಬಾಗಿಲು ಎಂಬಂತಾಗಿದೆ.ಕಾಂಗ್ರೇಸ್ 70 ರಿಂದ 80 ಸ್ಥಾನ ಪಡೆಯುವುದು ಕಷ್ಠವಾಗಿದೆ ಎಂದ ಅವರು ಗುಬ್ಬಿಯಲ್ಲಿ ಮತದಾರರು ಬದಲಾವಣೆ ಬಯಸಿದ್ದು ಈ ಭಾರಿ ಎಸ್.ಡಿ.ದಿಲೀಪ್ ಕುಮಾರು ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಮುಖಂಡರಾದ ಶಿವಕುಮಾರಸ್ವಾಮಿ , ಸಿದ್ದರಾಮಣ್ಣ , ಕಿರಣ್ , ಅವಿನಾಷ್ , ದಿಲೀಪ್ , ಗೋವಿಂದರಾಜು ,ರಾಜಪ್ಪ , ಮೋಹನ್ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ
ಗುಬ್ಬಿ: ಶ್ರೀಕಾಂತ್