Document

ಗುಬ್ಬಿಯಲ್ಲಿ ದಲಿತರ ಕುಂದು ಕೊರತೆ ಸಭೆ ನಡೆಸಿದ ತಹಶೀಲ್ದಾರ್

Janataa24 NEWS DESK

IMG 20230618 WA0014

ಗುಬ್ಬಿ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಹಶೀಲ್ದಾರ್ ಬಿ ಆರತಿ ಅಧ್ಯಕ್ಷತೆಯಲ್ಲಿ ದಲಿತರ ಕುಂದು ಕೊರತೆ ಸಭೆ ನಡೆಯಿತು.



ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ನಿಟ್ಟೂರ್ ನಿಂದ ಅಂಕಸಂದ್ರ ಮಾರ್ಗದಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಪಿಡಬ್ಲ್ಯೂಡಿ ಇಲಾಖೆ ರಸ್ತೆ ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗಲವಾಡಿ ಗ್ರಾಮದಲ್ಲಿ ಎ ಕೆ ಕಾಲೋನಿಗೆ ಸ್ಮಶಾನ ಮುಂಜೂರು ಮಾಡಬೇಕೆಂದು. ಜಾತಿ ಪ್ರಮಾಣ ಪತ್ರದಲ್ಲಿ ಎ ಕೆ ಎಂಬುದು ಎ ಡಿ ಎಂದು ಲೋಪ ದೋಷ ಕಂಡು ಬರುತ್ತಿದ್ದು ಕೂಡಲೇ ಸರಿಪಡಿಸಬೇಕು.
ತಾಲೂಕಿನಲ್ಲಿ ದಲಿತರ ಮಾರಣಹೋಮ ಮಾಸುವ ಮುನ್ನ ಮತ್ತೊಂದು ಹೆಣ್ಣು ಮಗಳ ಮರ್ಯಾದೆ ಹತ್ಯೆ ನಡೆದಿರುವುದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದ ಸಂ ಸ ಉಸ್ತುವಾರಿ ಸಂಚಾಲಕರಾದ ಜಿ ಹರಿವೇಂದ್ರ ಕೃಷ್ಣಪ್ಪ, ಅದಲಗೆರೆ ಈಶ್ವರಯ್ಯ ಮಾತನಾಡಿ ಹರಿವೇಸಂದ್ರ ಗ್ರಾಮದಲ್ಲಿರುವ ಇಟ್ಟಿಗೆ ಫ್ಯಾಕ್ಟರಿಯನ್ನು ಜನರ ಆರೋಗ್ಯದ ದೃಷ್ಟಿಯಿಂದ ಸ್ಥಳಾಂತರಿಸುವಂತೆ ಮನವಿ ಮಾಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ದಲಿತರ ಸಮಸ್ಯೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ಎನ್ಎ ನಾಗರಾಜ್, ನಾಗಭೂಷಣ್, ಕಿಟ್ಟಿದ ಕುಪ್ಪೆ ನಾಗರಾಜ್, ಮಾತನಾಡಿ ಕರಡಿ ಕಲ್ಲು ಗ್ರಾಮದಲ್ಲಿ ಮುನಿಯಪ್ಪ ಮತ್ತು ಕರಿಯಣ್ಣನವರ ಜಮೀನು ಮಂಜೂರು ಮಾಡಿಕೊಡಲು ತಾಲೂಕ ಆಡಳಿತ ನಿರ್ಲಕ್ಷ ವಹಿಸುತ್ತಿದ್ದು ಇದೇ ಜಮೀನಿನ ವಿಚಾರವಾಗಿ ಮುನಿಯಪ್ಪನವರ ಕುಟುಂಬವನ್ನು ಹೊಡೆದು ಎದುರಿಸಿ ಪೋಲಿಸ್ ಸುಮೋಟೋ ಕೇಸ್ ದಾಖಲಿಸಿದೆ. ನ್ಯಾಯ ಒದಗಿಸಬೇಕಾದ ಪೊಲೀಸ್ ಇಲಾಖೆ ಆ ಕುಟುಂಬವನ್ನು ಬೀದಿ ಪಾಲು ಮಾಡಿದೆ ದರ್ಪದಲ್ಲಿ ಮೆರೆದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದರು.

ಕುಂದುರನಹಳ್ಳಿ ನಟರಾಜ್ ಮಾತನಾಡಿ ಕುಂದರನಹಳ್ಳಿ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಚರಂಡಿ ನೀರು ತುಂಬಿ ಜನರು ತುಂಬಾ ಸಮಸ್ಯೆ ಎದುರಿಸುತ್ತಿದ್ದು ಅಧಿಕಾರಿಗಳು ಭೇಟಿ ನೀಡಿ ಸರ್ವೆ ಮಾಡಿಸಿ ಚರಂಡಿ ನೀರು ಸರಾಗವಾಗಿ ಹೋಗಲು ಅನುವು ಮಾಡಬೇಕು ಎಂದು ತಿಳಿಸಿದರು.

ಕೋಟೆ ಕಲ್ಲೇಶ್, ಕಡಬ ಶಂಕರ್,ಸಿಎಸ್ ಪುರ ಬೆಟ್ಟಸ್ವಾಮಿ ಮಾತನಾಡಿ ಎಂ ಎನ್ ಕೋಟೆ ಗ್ರಾಮದಲ್ಲಿ ಎಸ್ ಸಿ ಕಾಲೋನಿ ಪಕ್ಕದಲ್ಲಿರುವ ಎಂ ಎಸ್ ಐ ಎಲ್ (ಮಧ್ಯದ ಅಂಗಡಿ) ಇಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಅಬಕಾರಿ ಇಲಾಖೆಯವರು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಸಮಸ್ಯೆಗಳನ್ನು ತಿಳಿಸಲು ಅಧಿಕಾರಿಗಳು ಜನಸಾಮಾನ್ಯರ ಕೈಗೆ ಸಿಗುವುದಿಲ್ಲ ಸಿಎಸ್ ಪುರ ಗ್ರಾಮದಲ್ಲಿ ಹರಿಜನ ಕಾಲೋನಿ ಗೆ ಸಂಬಂಧಿಸಿದ ಜಾಗವನ್ನು ಬೇರೆಯವರಿಗೆ ಈ ಸ್ವತ್ತು ಮಾಡಿಸಿಕೊಟ್ಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಬಸವರಾಜ್ ಮಾತನಾಡಿ ಆಶಾ ಕಿರಣ ಗ್ರಾಮೀಣ ಅಭಿವೃದ್ಧಿ ಎಜುಕೇಷನ್ ಸೊಸೈಟಿ (ರಿ ) ನೂರಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳನ್ನು ಒಳಗೊಂಡಿದ್ದು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ತರಬೇತಿ, ಸಭೆ, ಸಮಾರಂಭ, ಆರ್ಥಿಕ ಚಟುವಟಿಕೆ ನಿರ್ವಹಿಸಲು ತಾಲೂಕ್ ಕೇಂದ್ರದಲ್ಲಿ ಒಂದು ಮಹಿಳಾ ಭವನ ನಿರ್ಮಿಸಲು ಖಾಲಿ ನಿವೇಶನ ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಅಂಬೇಡ್ಕರ್ ಸೇನೆ ತಾಲೂಕ್ ಅಧ್ಯಕ್ಷ ಎಂ ಡಿ ಶಿವಣ್ಣ ಮಾತನಾಡಿ ಚೇಳೂರು ಹೋಬಳಿ ಬಿದರಿ ಗ್ರಾಮ ಪಂಚಾಯಿತಿ ಮಾದಾಪುರ ಮಜರೆ ಮಾದಾಪುರ ಓಬಳಿ ಪಾಳ್ಯಕ್ಕೆ ಹೋಗುವ ರಸ್ತೆಯ ಕರಾಬು ತೆರವುಗೊಳಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಸಭೆ ಮಾಡಿ ಈ ವರವಿಗೂ ಯಾವುದೇ ದಲಿತರ ಸಮಸ್ಯೆ ಬಗೆಹರಿಸಿಲ್ಲ ಎಂದು ತಹಶೀಲ್ದಾರ್ ವಿರುದ್ಧ ದಲಿತ ಮುಖಂಡರು ಪ್ರತಿಭಟಿಸಿದರು.
ಸಮಸ್ಯೆಯನ್ನು ಆಲಿಸಿದ ತಹಶೀಲ್ದಾರ್ ಬಿ ಆರತಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.


ಸಭೆಯಲ್ಲಿ ಬಿಇಒ ಸೋಮಶೇಖರ್ ತಾ ಪಂ ಇಒ ಪರಮೇಶ್ ಕುಮಾರ್ , ಪ ಪಂ ಮುಖ್ಯಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೀಣಾ, ಪಿಎಸ್ಐ ಮುತ್ತುರಾಜ್,ಇತರರು ಹಾಜರಿದ್ದರು.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *