ಗುಂಡ್ಲುಪೇಟೆ: ಕಾಂತರಾಜು
ಗುಂಡ್ಲುಪೇಟೆ: ತಾಲೂಕಿನ ಬೆಂಡರವಾಡಿ ಗ್ರಾಮದ ರಾಮಸ್ವಾಮಿ ಹಾಗೂ ನಾಗಲಕ್ಷ್ಮೀ ದಂಪತಿಗಳ ಪುತ್ರ ಆನಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಪೂರ್ಣಗೊಳಿಸಿರುವ ಹಿನ್ನೆಲೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಬೆಂಡರವಾಡಿ ಗ್ರಾಮದ ಆನಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ಸಿ.ಟಿ.ಗುರುಪ್ರಸಾದ್ ಅವರ ಮಾರ್ಗದರ್ಶನದಲ್ಲಿ ‘ಗುಂಡ್ಲುಪೇಟೆ ತಾಲೂಕಿನ ಕೆರೆಗಳ ಜಾನಪದೀಯ ಅಧ್ಯಯನ’ ಎಂಬ ವಿಷಯದಲ್ಲಿ ಕೆರೆ ಮತ್ತು ಜನಪದ ಸಹ ಸಂಬಂಧ, ಗ್ರಾಮೀಣ ಪ್ರದೇಶದ ಆರ್ಥಿಕ ಜೀವನ, ಕೆರೆಗಳ ಜನಪದ ಸಾಹಿತ್ಯಗಳ ತಳ ಸ್ಪರ್ಶೀಯ ಸಂಶೋಧನೆ ಕೈಗೊಂಡು ಮಹಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುತ್ತಾರೆ.

ಇವರ ಈ ಸಂಶೋಧನೆಯನ್ನು ಅಂಗೀಕರಿಸಿ ಕನ್ನಡ ವಿಶ್ವವಿದ್ಯಾಲಯ ಆನಂದ ಅವರಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ವರದಿಗಾರ ಬಸವರಾಜು. ಎಸ್. ಪ್ರಜಾವಾಣಿ ಪತ್ರಿಕೆ ತಾಲ್ಲೂಕು ವರದಿಗಾರ ಎಂ. ಮಲ್ಲೇಶ್. ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡರಾಜು , ರವಿ ಆಯುರ್ವೇದ ಆಸ್ಪತ್ರೆ, ಶಿವಕುಮಾರ್ ದೇವರಹಳ್ಳಿ , ಪುರಸಭಾ ಸದಸ್ಯ ರಾಜಗೋಪಾಲ್ ಹಾಲಹಳ್ಳಿ, ಗಿರೀಶ್ ಲಕ್ಕೂರು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ತಾಲ್ಲೂಕು ಅಧ್ಯಕ್ಷ ಆರ್ ಸೋಮಣ್ಣ , ಬೆಂಡರವಾಡಿ ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮತ್ತಿತರರು ಶುಭಾಶಯಗಳ ತಿಳಿಸಿದ್ದಾರೆ.