ಪಾವಗಡ: ಇಮ್ರಾನ್
ಪಾವಗಡ ಪಟ್ಟಣದ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪಾವಗಡ ಶಾಖೆ ಹಾಗೂ ಸ್ವಾಮಿ ವಿವೇಕಾನಂದ ಕಾಲೇಜು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಹಾಗೂ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು ಅವರು ಸಾಮಾಜಿಕ ಜೀವ ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕಾಗಿ ಸಂವಿಧಾನ ನೀಡಿರುವ ಅವಕಾಶಗಳನ್ನು ಮೂಲಭೂತ ಹಕ್ಕುಗಳೆಂದು ಕರೆಯಲಾಗುತ್ತದೆ. ಇವು ನಾಗರೀಕರಿಗೆ ನೀಡಿದ ಸಾಂವಿಧಾನಿಕ ಹಕ್ಕುಗಳಾಗಿವೆ. ಮೂಲಭೂತ ಹಕ್ಕುಗಳು ಹಕ್ಕುಗಳಿಗೆ ನ್ಯಾಯಾಂಗದ ರಕ್ಷಣೆ ಇದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು; ಯಾರೇ ಆಗಲಿ ಕಾನೂನಿಗಿಂತ ದೊಡ್ಡವರಲ್ಲ, ಮತ್ತು ಎಲ್ಲರಿಗೂ ಸಮಾನ ರಕ್ಷಣೆ ದೊರಕುವುದೆ ಸಮಾನತೆಯ ಹಕ್ಕು, ಧರ್ಮ, ಕುಲ, ಜಾತಿ, ಲಿಂಗ, ಜನ್ಮ ಸ್ಥಳ ಇವುಗಳ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡುವಂತಿಲ್ಲ.

ಸಮಾಜದಲ್ಲಿ ಬಡವರು, ಮಹಿಳೆಯರು ಮತ್ತು ದುರ್ಬಲರನ್ನು . ಬಡುವರು, ಧರ್ಮ, ಜಾತಿ, ಲಿಂಗದ ಹೆಸರಲ್ಲಿ ಜನರನ್ನು ಶೋಷಣೆಗೆ ಒಳಪಡೆಸ ಬಾರದು. ನಂತರ ಶ್ರೀಕಾಂತ್ ರವೀಂದ್ರ ರವರು ಕಾರ್ಯದರ್ಶಿಗಳು.ತಾಲ್ಲೂಕು ಕಾನೂನು ಸೇವಾ ಸಮಿತಿ.ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಮಾತನಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಮೋದನೆಯನ್ನು ತೊರಲು ಮುಂದಾಗುತ್ತಾರೆ 1948 ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನ ಎಂಬುದಾಗಿ ಜಾರಿಗೊಳಿಸುತ್ತಾರೆ. ಸ್ವತಂತ್ರ ಇದೆ ಎಂಬುದಾಗಿ ಎಲ್ಲಿ ಅಂದರೆ ಅಲ್ಲಿ ಉಗುಳುವುದು. ಯಾವ ರೀತಿಯಲ್ಲಿ ಬೇಕಾದರೂ ಮಾತನಾಡುವುದು ಮಾಡಬಾರದು ಕಾನೂನಿನ ಚೌಕಟ್ಟಿನಲ್ಲಿ ಮನುಷ್ಯ ಜೀವನ ನಡೆಸುವ ನಿಟ್ಟಿನಲ್ಲಿ ತಮ್ಮ.ಹಕ್ಕುಗಳನ್ನು ಉಪಯೋಗಿಸಗೋಳ್ಳಬಹುದಾಗಿದೆ ಎಂದರು.
ನಂತರ ಕುಮಾರಿ ವಿಸ್ಮಿತ ಮೂರ್ತಿ ಅಧಿಕ ನ್ಯಾಯಾಧೀಶರು ಮಾತನಾಡಿ.ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು ನಂತರ ಅವುಗಳನ್ನು ಪಡೆದುಕೊಳ್ಳುವ ಕೆಲಸ ಮಾಡಿ ನಂತರ ಬೇರೆಯವರಿಗೂ ತಿಳಿಸುವ ಕೆಲಸ ಮಾಡಬೇಕು ಮತ್ತು ಯಾವುದೇ ವಸ್ತುಗಳನ್ನು ಬಳಸುವ ಮುಂಚೆ ಉತ್ಪಾದನೆ ಮತ್ತು ಆ ವಸ್ತುಗಳ ಕೊನೆ ದಿನಾಂಕ ಗಮನಿಸಿ ಕೊಳ್ಳ ಬೇಕು.ಚಿಲ್ಲರೆ ಐದು ರೂ ಹತ್ತು ರೂ ನೀಡಬೇಕಾದುದು ಸಹ ಕೇಳ ಪಡೆಯುವುದು ಸಹ ತಮ್ಮ ಹಕ್ಕು ಎಂದರು. ನಂತರ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಇಮ್ರಾನ್ ಉಲ್ಲಾ. ಮಾತನಾಡಿ ಪ್ರತಿದಿನವೂ ನಮ್ಮ ಸುತ್ತುಮುತ್ತಲಿನಲ್ಲಿ ರಷ್ಟು ಮಾನವ ಹಕ್ಕುಗಳು ಉಲ್ಲಂಘನೆ ನಡೆಯುತ್ತಲೇ ಇರುತ್ತವೆ. ಆದರೂ ಸಹ ನೋಡಿ ನೋಡದೆ ಇದ್ದ ಹಾಗೆ ವರ್ತಿಸುತ್ತವೆ ಅದು ದೊಡ್ಡ ಅಪರಾಧ.
ನಾನು ನನ್ನದು ಎಂದುಕೊಂಡು ಇರುವವರೆಗೂ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಲೇ ಇರುತ್ತವೆ.ಅದೇ ನಾವುಗಳು ನಮ್ಮದು ಎಂಬುವ ನಿಟ್ಟಿನಲ್ಲಿ ಜೋತೆ ಕೂಡಿ ಒಟ್ಟಿಗೆ ಹೋದಾಗ ಮಾತ್ರವೇ ಇಂತಹ ಮಾನವ ಹಕ್ಕುಗಳ ನಿರ್ವಹಣೆ ಸಾಧ್ಯ. ನಮ್ಮ ಕಣ್ಣ ಮುಂದೆ ತಪ್ಪು ನಡೆಯುತ್ತಿದ್ದರೆ ಅದು ತಪ್ಪು ಎಂಬುದಾಗಿ ಕೇಳುವಂತಹ ಮನಸ್ಥಿತಿ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಆಗ ಸಮಾಜ ಸುಧಾರಣೆಯಲ್ಲಿ ನಿಮ್ಮದು ಒಂದು ಸೇವೆ ಎಂಬುವ ರೀತಿಯಲ್ಲಿ ಗುರುತಿಸಿಕೊಳ್ಳಬಹುದು. ನಂತರ ವಕೀಲರ ಸಂಘದ ಅಧ್ಯಕ್ಷ ಎಚ್.ಶೇಷನಂದನ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರುಗಳು ಅವರದೇ ಆದ ಒತ್ತಡದಲ್ಲಿ ಕೆಲಸ ಮಾಡುವಂಥದ್ದು ನಾವು ನೋಡಿದ್ದೇವೆ ಅಂತಹದ ಮಧ್ಯದಲ್ಲಿ ಇಂತಹ ಒಂದು ಕಾನೂನು ಅರಿವು ಕಾರ್ಯಕ್ರಮಗಳಲ್ಲಿ ಅವರದೇ ಆದ ವಿಚಾರಗಳನ್ನು ತಿಳಿಸುವಂತಹ ಇಂತಹ ಕಾರ್ಯಕ್ರಮ ಯಶಸ್ವಿಗೊಳಬೇಕಾದರೆ ಮೂದಲು ಮಕ್ಕಳು ತಿಳಿದುಕೊಂಡು ತಮ್ಮ ಪೋಷಕರೂಂದಿಗೆ ವಿಚಾರಗಳನ್ನು ಹಂಚಿಕೊಂಡಗ ಮಾತ್ರ ಇಂತಹ ಕಾರ್ಯಕ್ರಮ ಯಶಸ್ವಿಯಾಗುತ್ತವೆ ಎಂದರು.ಗ್ರಾಹಕರ ಮುಂಜಾಗ್ರತೆ ವಹಿಸುವುದು ಯಾವ ರೀತಿ ನೀವು ಪಡೆಯುವಂತಹ ಯಾವುದೇ ವಸ್ತುಗಳು ಗಮನಿಸಿ ತೆಗೆದುಕೊಂಡು ಅದರ ಬಿಲ್ಲುಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದರು.
ನಂತರ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ನಾಗೇಂದ್ರ ರವರು ಮಾತನಾಡಿ ಪ್ರಪಂಚದಲ್ಲಿ ನಮ್ಮ ದೇಶದ ಕಾನೂನು ವ್ಯವಸ್ಥೆ ಇರುವ ಹಾಗೇ ಬೇರೆ ಯಾವ ರಾಷ್ಟ್ರದಲ್ಲಿ ಇಲ್ಲ.ಅಂತಹ ಉತ್ತಮ ಸಂವಿಧಾನ ಇರುವಂತಹ ದೇಶ ನಮ್ಮದು ಎಂದರು.ಮುಂದಿನ ವರ್ಷ ಬೃಹತ್ ಮಟ್ಟದ ನ್ಯಾಯಾಲಯದ ಕಾರ್ಯಕ್ರಮ ನಮ್ಮ ಕಾಲೇಜಿನಲ್ಲಿ ಹಮ್ಮೀಕೂಳ್ಳುತ್ತೇವೆ ಎಂದರು. ಮಾನವ ಹಕ್ಕುಗಳ ವಿಚಾರವಾಗಿ ಚರ್ಚೆ ಸ್ಪರ್ಧೆಯಲ್ಲಿ ಗೆದ್ದಂತಹ ವಿದ್ಯಾರ್ಥಿಗಳಿಗೆ ನ್ಯಾಯದೀಶರು ಪ್ರಶಸ್ತಿ ಪ್ರದಾನ ಮಾಡಿದರು.
ಈ ವೇಳೆ ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಎ.ಪ್ರಭಾಕರ್ ರೆಡ್ಡಿ ಮಾತನಾಡಿದರು.ಕಾಲೇಜಿನ ಉಪಾ ನಾಗರಾಜಪ್ಪ.ಶಿವಕುಮಾರ್.ಶ್ರೀನಾಥ್.ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸದಸ್ಯರುಗಳಾದ ಮೈಕಲ್.ಗೋವಿಂದಪ್ಪ.ಜಬೀವುಲ್ಲಾ.ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಗಳು ಇದ್ದರು.