Janataa24 NEWS DESK

ಪಾವಗಡ
ಬಡವರಪರ ಕೆಲಸ ಮಾಡುತ್ತಿರುವ ಹೆಚ್.ವಿ.ವೆಂಕಟೇಶ್ ಗೆ ಅತಿಹೆಚ್ಚು ಮತಗಳನ್ನು ನೀಡಿ ಗೆಲ್ಲಿಸುವ ಹೊಣೆ ಈ ಭಾಗದ ಜನರದ್ದು ರಾಜ್ಯ ಉಸ್ತುವಾರಿ ಮಯೂರಜಯಕುಮಾರ್.
ಪಾವಗಡ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಅವರು ಬರುವ ಮಂಗಳವಾರ 18 ರಂದು ಈ ಭಾಗದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು. ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ರಾಜ್ಯ ಕೆ.ಪಿ.ಸಿ.ಸಿ.ಅದ್ಯಕ್ಷ ಡಿ.ಕೆ.ಶಿವಕುಮಾರ್.ಈ ಭಾಗದ ಮಾಜಿ ಸಚಿವ ಹಾಲಿ ಶಾಸಕರಾದ ವೆಂಕಟರಮಣಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ,ಇತರೆ ಮುಖಂಡರು ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಪಾವಗಡ ತಾಲ್ಲೂಕಿನ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಚ್.ವಿ. ವೆಂಕಟೇಶ್ ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ ಎಂದು ರಾಜ್ಯ ಉಸ್ತುವಾರಿ ಸಮಿತಿಯ ಕಾರ್ಯದರ್ಶಿ ಹಾಗೂ ಚುನಾವಣಾ ವಿಕ್ಷಕರಾದ ಮಯೂರ್‌ಜಯಕುಮಾರ್ ತಿಳಿಸಿದರು.
ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯ ಪ್ರಕಾರ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸುವುದು ಗ್ಯಾರಂಟಿ ಅದೇ ರೀತಿ ಎಚ್.ವಿ. ವೆಂಕಟೇಶ್ ಅತ್ಯಧಿಕ ಮತಗಳಿಂದ ಜಯಗಳಿಸುತ್ತಾರೆ ಎಂದು ತಿಳಿಸಿದರು.
ಜಿಲ್ಲಾದ್ಯಕ್ಷ ಚಂದ್ರಶೇಖರ್ ಗೌಡ ಮಾತನಾಡಿ, ಜಿಲ್ಲೇಯ 11 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸುತ್ತಾರೆ, 18 ರಂದು ಪಾವಗಡ ಕ್ಕೆ ಡಿ.ಕೆ. ಶಿವಕುಮಾರ್ ಆಗಮಿಸುತ್ತಾರೆ, ತಾಲ್ಲೂಕಿನಲ್ಲಿ ಸ್ವಲ್ಪ ಅಸಮ್ಮತಿ ಇದ್ದರೂ ಸಹ ಎಲ್ಲವೂ ಸರಿಹೋಗುತ್ತದೆ, ಮಾಜಿ ಶಾಸಕ ಸೋಮ್ಲಾನಾಯ್ಕ, ಮತ್ತು ಪುತ್ರಿ ಗಾಯಿತ್ರಿ ಬಾ¬ಯವರನ್ನು ಮನೆಯಲ್ಲಿ ಬೇಟಿ ಮಾಡಿದ್ದೇವೆ ಹಾಗೂ ಕೊರ್ಟನರಸಪ್ಪ ರ ಮನೆಗೂ ಸಹ ಬೇಟಿ ನೀಡಿದ್ದು ಮಾತುಕತೆ ನಡೆಸಲಾಗಿದೆ, ಮತ್ತು ಟಿಕೆಟ್ ಅಕಾಂಕ್ಷಿಗಳಾಗಿದ್ದ ಜೊತೆಯಲ್ಲಿ ಮಾತನಾಡಿದ್ದು, ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ಪಕ್ಷಗಳಿಂದ ಕಾಂಗ್ರೆಸ್ ಪಕ್ಷ ಸೆರ್ಪಡೆಯಾಗುತ್ತಿದ್ದಾರೆ, ಸಣ್ಣಪುಟ್ಟ ಬಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಮಾಡಲಾಗುತ್ತಿದೆ , ಜಿಲ್ಲೆಯ 10 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿದ್ದು ಕೊನೆಯದಾಗಿ ಪಾವಗಡ ಬಂದಿದ್ದು, ಗೆಲ್ಲಲು ಬೇಕಾಗುವ ಕಾರ್ಯತಂತ್ರಗಳನ್ನು ರೂಪಿಸಿದ್ದೇವೆ, ರಾಜ್ಯದಲ್ಲಿ 160 ಕ್ಷೇತ್ರಗಳಲ್ಲಿ ಪಾವಗಡವೂ ಸೇರಿ ಗೆಲುವು ಸಾದಿಸಲಿದ್ದೇವೆ ಎಂದು ತಿಳಿಸಿದರು

ಅಭ್ಯರ್ಥಿ ಎಚ್.ವೆ. ವೆಂಕಟೇಶ್ ಮಾತನಾಡಿ, ಉಸ್ತುವಾರಿಯಾದ ಮಯೂರಜಯಕುಮಾರ್ ಪಾವಗಡಕ್ಕೆ ಬೇಟಿ ನೀಡಿದ್ದು, 18 ರಂದು ನಾಮಪತ್ರ ಸಲ್ಲಿಸಲಾಗುತ್ತಿದ್ದು ಡಿ.ಕೆ. ಶಿವಕುಮಾರ್ ಹೆಲಿಕಾಪ್ಟರ್ ಮೂಲಕ ಪಾವಗಡಕ್ಕೆ ಆಗಮಿಸಲಿದ್ದು, ಅಂದು 50 ರಿಂದ 60 ಸಾವಿರ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಶಶಿಹುಲಿಕುಂಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ ಬಾಬು, ಪುರಸಬಾ ಸದಸ್ಯರಾದ ಪಿ.ಎಚ್. ರಾಜೇಶ್, ತೆಂಗಿನಕಾಯಿರವಿ, ಮುಖಂಡ ವೆಂಕಮ್ಮನಹಳ್ಳಿನಾಣಿ, ಮಾಜಿ ಪುರಸಭಾದ್ಯಕ್ಷ ಎ.ಶಂಕರರೆಡ್ಡಿ, ಅಲ್ಪ ಸಂಖ್ಯಾತ ರಾಜ್ಯ ಪ್ರಧಾನ ಕಾರ್ಯದರ್ಶಿ ಷಾ. ಬಾಬು, ಮುಖಂಡರಾದ ಕೋಳಿಬಾಲಾಜಿ, ಅವಿನಾಶ್, ಮತ್ತಿತರರು ಹಾಜರಿದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ