Janataa24 NEWS DESK
ಪಾವಗಡ


ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಈ ಬಾರಿಯ ವಿಧಾನ ಸಭಾ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಕೆಗೆ ಜನ ಸಾಗರವೇ ಹರಿದು ಬಂದಿತ್ತು.
ಪಾವಗಡ 2023ನೇ ಸಾಲಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ನಾಮ ಪತ್ರಕ್ಕೆ ಕೆ.ಪಿ.ಸಿ.ಸಿ.ಅಧ್ಯಕ್ಷ ಕನಕಪುರ ಬಂಡೆ ಎಂದೇ ಹೆಸರುವಾಸಿಯಾದ ಡಿ.ಕೆ.ಶಿವಕುಮಾರ್ ಜೊತೆ ಕೆ.ಪಿ.ಸಿ.ಸಿ.ಕಾರ್ಯದರ್ಶಿ ಬಿ.ಎನ್.ಚಂದ್ರಪ್ಪ.ಆಂದ್ರಪ್ರದೇಶದ ಕಾಂಗ್ರೆಸ್ ಅದ್ಯಕ್ಷ ರಘುವೀರ್ ರೆಡ್ಡಿ.ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ. ಅಭ್ಯರ್ಥಿ ಹೆಚ್.ವಿ.ವೆಂಕಟೇಶ್. ಶಾಸಕರ ಹಿರಿಯ ಮಗ ಹೆಚ್.ವಿ.ಕುಮಾರ್ ಸ್ವಾಮಿ,ಯುವ ಮುಖಂಡ ನಾನಿ ಬಾಗಿ.

ಸುಮಾರು ಒಂದು ಗಂಟೆ ವೇಳೆ ಸಮಯಕ್ಕೆ ಸರಿಯಾಗಿ ಹೆಲಿಕ್ಯಾಪ್ಟರ್ ಮೂಲಕ ಬಂದಿಳಿದ ಕೂಡಲೇ ಡಿ.ಕೆ.ಶಿವಕುಮಾರ್ ನೋಡಲು ಅಭಿಮಾನಿಗಳು ಎಲಿಕ್ಯಾಪ್ಟರ್ ಬಳಿ ನುಕುನುಗ್ಗುಲು.

ನಂತರ ಜೂನಿಯರ್ ಕಾಲೇಜ್ ಮೈದಾನದಿಂದ ಬೃಹತ್ ಪ್ರಮಾಣದ ಕಾರ್ಯಕರ್ತರೊಂದಿಗೆ ಮೆರವಣಿಗೆಯ ಮೂಲಕ ಅಂಬೇಡ್ಕರ್ ವೃತ್ತ ದಿಂದ ಶನಿಮಹಾತ್ಮ ವೃತ್ತದವರೆಗೆ ಮೆರವಣಿಗೆ ಮಾಡಿ ನಂತರ ಕಾರ್ಯಕರ್ತರು ಬೃಹತ್ ಆಕಾರದ ಹೂವಿನ ಹಾರ ಕ್ರೇನ್ ಮೂಲಕ ಹಾಕಲಾಯಿತು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೆ.ಪಿ.ಸಿ.ಸಿ.ಅದ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ವೇಳೆಯಲ್ಲಿಯೂ ಸಹ ಸೇರದಂತ ಜನ ಇಲ್ಲಿ ಸೇರಿರುವುದು ನೋಡಿ ತುಂಬಾ ಖುಷಿ ತಂದಿದೆ ಎಂದರು.

ಈ ಬಾಗದಲ್ಲಿ ಸೋಲಾರ್ ನಿರ್ಮಾಣ ಮಾಡಿ ಇಡಿ ಪ್ರಪಂಚವೇ ನಿಮ್ಮ ಊರಿಗೆ ತಿರುಗಿ ನೋಡಿದಂತೆ ಮಾಡಿದ ನನಗೆ ನಿವುಗಳು ಆ ರುಣ ತೀರಿಸಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಿ ಎಂದರು.
ಈ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಅಲ್ಲ ನಾನು ಈ ಭಾಗದಲ್ಲಿ ಚುನಾವಣೆ ಸ್ಪರ್ಧೆ ಮಾಡಿದ್ದೇನೆ ಎಂಬುದಾಗಿ ತಿಳಿದು ಮತ ಹಾಕಿ ಎಂದರು.
ಈಗಾಗಲೇ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,ಸವದಿ ಇತರೆ 20ರಿಂದ 25 ಬೇರೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡಿದ್ದೆವೆ ಇದಕ್ಕೆ ಅವರೆ ಸಾಕ್ಷಿ ಕಾಂಗ್ರೆಸ್ ಸಿದ್ಧಾಂತಗಳು ನಂಬಿ ನಮ್ಮ ಪಕ್ಷಕ್ಕೆ ಬಂದಿದ್ದರೆ.

ಈ ಭಾಗದ ಶಾಸಕ ವೆಂಕಟರಮಣಪ್ಪ ಮತ್ತು ಮಗ ವೆಂಕಟೇಶ್ ನಿಂದ ಏನಾದರೂ ತಪ್ಪಾಗಿದ್ದರೆ ಅದು ಹೊಟ್ಟೆಯಲ್ಲಿ ಹಾಕಿಕೊಳ್ಳಿ ಎಂದರು.
ಮೋದಿ ಕೊಟ್ಟ ಮಾತಿನಂತೆ ಹದಿನೈದು ಲಕ್ಷ ತಮ್ಮ ಅಕೌಂಟ್ ಬಂದು ಸೇರಿಲ್ಲ,ನಿರುದ್ಯೋಗ ಹೋಗಲಾಡಿಸಿಲ್ಲ,ದಿನೇ ದಿನೆ, ಬೆಳೆಯುತ್ತಿರುವ ಬೆಲೆ ಏರಿಕೆ ಇದೇ ಬಿಜೆಪಿಯವರ ಸಾಧನೆ ಎಂದರು.
ನಮ್ಮ ಸರ್ಕಾರ ಬಂದ ಜೂನ್ ತಿಂಗಳಿಂದ ಮಹಿಳೆಯರ ಅಕೌಂಟ್ ಖಾತೆಗೆ ಎರಡು ಸಾವಿರ ರೂಪಾಯಿ. ಇನ್ನೂರು ಯೂನಿಟ್ ವಿದ್ಯುತ್ ಪೂರೈಕೆ ಉಚಿತ. ವಿದ್ಯಾರ್ಥಿಗಳಿಗೆ ನಿರುದ್ಯೋಗ ಬತ್ಯೆ ಮೂರು ಸಾವಿರ ಪಡೆಯಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಕಾಂಗ್ರೆಸ್ ಬಹುಮತ ನೀಡಿ ಎಂದರು.
ಈ ವೇಳೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರ,ಮತ್ತು ಮುಖಂಡರು ಭಾಗವಹಿಸಿದ್ದರು.
ವರದಿ
ಪಾವಗಡ:ಇಮ್ರಾನ್ ಉಲ್ಲಾ.