Document

ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲು ಹಳಿತಪ್ಪಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ

ಬಿಹಾರ್: ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲಿನ 53 ಭೋಗಿಗಳು ಹಳಿ ತಪ್ಪಿದ ನಂತರ ಬಿಹಾರದ ಗಯಾ-ಧನ್ ಬಾದ್ ವಿಭಾಗದಲ್ಲಿ ಸಂಪೂರ್ಣ ರೈಲು ಸಂಚಾರ ಸ್ಥಗಿತಗೊಂಡಿದೆ ಎಂದು ರೈಲ್ವೆ ಇಲಾಖೆಯು ತಿಳಿಸಿದೆ.
ಧನ್-ಬಾದ್ ರೈಲ್ವೆ ವಿಭಾಗದ ಕೊಡರ್ಮ ಮತ್ತು ಮನ್ಪುರ್ ರೈಲು ನಿಲ್ದಾಣಗಳ ನಡುವಿನ ಗುರ್ಪ ನಿಲ್ದಾಣದಲ್ಲಿ ಇಂದು ಬೆಳಗ್ಗೆ 6:24ಕ್ಕೆ ಅಪಘಾತವು ಸಂಭವಿಸಿದೆ ನಂತರ ರೈಲು ಸಂಚಾರವು ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಗೂಡ್ಸ್ ರೈಲಿನ ಕಲ್ಲಿದ್ದಲು ತುಂಬಿದ ಭೋಗಿಗಳು ಹಳಿ ತಪ್ಪಿದ ನಂತರ ಹಳಿಗಳ ದುರಸ್ತಿ ಕಾರ್ಯಚರಣೆ ನಡೆಯುತ್ತಿದೆ.

Document

Leave a Reply

Your email address will not be published. Required fields are marked *