Janataa24 NEWS DESK

ತಿಪಟೂರು: ದಾದಾಸಾಹೇಬ ಡಾ|ಎನ್ ಮೂರ್ತಿ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಕೆ ಬಿ ಕ್ರಾಸ್ ಬಳಿ ಇರುವ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ ಪುನಶ್ಚೇತನ ಸಭೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ಮತ್ತು ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಹಾಗೂ ಗುಬ್ಬಿ ತಾಲೂಕಿನ ಹೊಸ ಪದಾಧಿಕಾರಿಗಳ ನೇಮಕಾತಿ ಜೊತೆಗೆ, ಸಂಘಟನೆ ಸದಸ್ಯತ್ವ ಹೆಚ್ಚಿಸಿ ಬಲಪಡಿಸುವ ಬಗ್ಗೆ ಈ ಸಭೆಯನ್ನ ಆಯೋಜನೆ ಮಾಡಲಾಗಿತ್ತು.

ಇನ್ನು ಈ ಸಭೆಯನ್ನು ಜಿಲ್ಲಾಧ್ಯಕ್ಷರಾದ ಪಿ ಎನ್ ರಾಮಯ್ಯ, ಹಾಗೂ ತುರುವೇಕೆರೆ ತಾಲೂಕು ಅಧ್ಯಕ್ಷ ಎನ್ ಅಟ್ಟಯ್ಯ, ತಿಪಟೂರು ತಾಲೂಕು ಅಧ್ಯಕ್ಷ ಟಿ ರಾಜು, ಜಿಲ್ಲಾ ಸಂಘಟನಾ ಅಧ್ಯಕ್ಷ ಪುಟ್ಟಸ್ವಾಮಿ ಚಿಗ್ಗಾವಿ, ಇವರು ಡಾ// ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಇದೆ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷರಾದ ಪಿ ಎನ್ ರಾಮಯ್ಯ ಅವರು, ಶತಮಾನಗಳಿಂದ ಶೋಷಣೆಗೆ ಒಳಪಟ್ಟು ಜೀತದಾಳಾಗಿ ಜೀವಿಸುತ್ತಾ ,ಬಹು ಜನರ ವಿಮೋಚನೆ ಸಾಧ್ಯವಿಲ್ಲ,
ಇನ್ನಾದರೂ ಸಾಮಾಜಿಕ ನ್ಯಾಯಕ್ಕಾಗಿ ಸಿದ್ದರಾಗಬೇಕು, ಈಗಲೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಎಸ್ ಸಿ /ಎಸ್ ಟಿ ಜನಾಂಗದ ನ್ಯಾಯಾಧೀಶರು ಇಲ್ಲ,
ಇಂದಿನ ವ್ಯವಸ್ಥೆ ಹಿಡಿದ ಕೈಗನ್ನಡಿಯಾಗಿದೆ, ಇದರ ಬಗ್ಗೆ ಬಹುಜನ ಎಸ್ ಸಿ ,ಎಸ್ಟಿ ಜನಾಂಗದವರು ಯೋಚಿಸಬೇಕಾಗಿದೆ, ಜಾತಿಯತೆ, ಅಸ್ಪೃಶ್ಯತೆ, ಇಂದಿಗೂ ನಿರ್ಮೂಲನೆಯಾಗಿಲ್ಲ.

ದೌರ್ಜನ್ಯಗಳು ಇನ್ನು ಹೆಚ್ಚುತ್ತಿದೆ ,ಮುಂದಿನ ದಿನಗಳಲ್ಲಿ ಭವ್ಯ ನವ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕಿ, ಡಾ. ಬಿ ಆರ್ ಅಂಬೇಡ್ಕರ್ ಕನಸನ್ನು ನನಸು ಮಾಡಬೇಕು ಎಂದರು,.
ಇದೇ ವೇಳೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮಮ್ಮ, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಹಾಗೂ ತುರುವೇಕೆರೆ ,ತಿಪಟೂರು, ಚಿಕ್ಕನಾಯಕನಹಳ್ಳಿ, ಮತ್ತು ಗುಬ್ಬಿ ತಾಲೂಕಿನ ಎಲ್ಲಾ ಡಿ ಎಸ್ ಎಸ್ ಕಾರ್ಯಕರ್ತರು ಈ ಸಭೆಯಲ್ಲಿ ಹಾಜರಿದ್ದರು.
ವರದಿ
ತಿಪಟೂರು: ಮಂಜುನಾಥ್