ಗುಂಡ್ಲುಪೇಟೆ: ಕಾಂತರಾಜು
ಗುಂಡ್ಲುಪೇಟೆ ತಾಲ್ಲೂಕಿನ ಪಡುಗೂರು ಗ್ರಾಮದ ಶ್ರೀ ಮದ್ಧಾನೇಶ್ವರ ಪ್ರೌಢಶಾಲೆ ಶಿಕ್ಷಕರಿಂದ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಪೋಷಕರ ಸಭೆಯನ್ನು ಮೂಡುಗೂರು ಗ್ರಾಮದ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ನಡೆಸಿದರು.

ಈ ಸಂದರ್ಭದಲ್ಲಿ ಪಡುಗೂರು ಗ್ರಾಮದ ಶ್ರೀ ಮದ್ಧಾನೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಂ. ಭವಾನಿ ಶಂಕರ್ ಮಾತನಾಡುತ್ತಾ, ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟ ಈ ಹಂತದಲ್ಲಿ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬದಲಾವಣೆಯನ್ನು ಹೊಂದುವ ಹಂತವಾಗಿದ್ದು ಪೋಷಕರು ಮತ್ತು ಶಿಕ್ಷಕರು ಇಬ್ಬರು ಸೇರಿ ಸರಿಯಾದ ದಾರಿ ತೋರಿದರೆ ವಿದ್ಯಾರ್ಥಿಗಳ ಹಾದಿ ಸುಗಮ ವಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ಓದಿನ ಜೀವನದ ಬಗ್ಗೆ ಸಾಕಷ್ಟು ಶ್ರಮವಹಿಸಿ ಮಾರ್ಗದರ್ಶನ ಮಾಡುತ್ತಾರೆ ಇದರ ದೆಸೆಯಲ್ಲೇ ಗ್ರಾಮೀಣ ಭಾಗದಲ್ಲಿ ಪೋಷಕರ ಪಾತ್ರವು ಬಹು ದೊಡ್ಡದ್ದು ಈಗಾಗಿ ಪಡುಗೂರು ಗ್ರಾಮದ ಶ್ರೀ ಮದ್ಧಾನೇಶ್ವರ ಪ್ರೌಢಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಅವರ ಗ್ರಾಮಗಳಿಗೆ ಹೋಗಿ ಪೋಷಕರ ಸಭೆ ಕರೆದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರಗತಿ ಬಗ್ಗೆ ತಿಳಿಸಿ ಪರೀಕ್ಷೆಗೆ ಉಳಿದ ದಿನಗಳಲ್ಲಿ ಇನ್ನೂ ಹೇಗೆ ಹೆಚ್ಚು ಅಂಕಗಳಿಸಬಹುದು ಎಂದು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಳ್ಳಲು ಈ ಸಭೆಯನ್ನು ಹಮ್ಮಿಕೊಂಡು ಸಾಗುತ್ತಿದ್ದೆವೇ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಗ್ರಾಮದ ಗೌಡಿಕೆ ಮಲ್ಲಪ್ಪ, ಶಿಕ್ಷಕರಾದ ರವಿಕುಮಾರ್, ಪರಮೇಶ್ವರಪ್ಪ, ಪಾರ್ವತಮ್ಮ, ದಿವ್ಯ, ಮಹದೇವಮ್ಮ, ಲತಾ ಹಾಗೂ ಮೂಡುಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಯೊಗಾನಂದ, ಶಿಕ್ಷಕಿ ಚಂದ್ರಕಲಾ, ಹಾಗೂ ಪೋಷಕರು ಮತ್ತಿತರರು ಉಪಸ್ಥಿತರಿದ್ದರು.
Nam gramake bandu namma makkali suchane kottidira Idu sumba makkali oleyadu matu poshakarigu
Tq sir