ಪಾವಗಡ: ಇಮ್ರಾನ್ ಉಲ್ಲಾ
ಪಾವಗಡ ತಾಲೂಕಿನ ವೈ ಎನ್ ಹೊಸಪೇಟೆ ಹೋಬಳಿಯ ದೊಡ್ಡ ಹಳ್ಳಿ ಗ್ರಾಮದಲ್ಲಿನ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ ಉದ್ಘಾಟನೆ ಮುನ್ನ ಶಾಲೆಗೆ ಕಿಡಿಗೇಡಿಗಳು ನುಗ್ಗಿ ನಾಮಫಲಕ ದಂಸ ಮಾಡಿದ ಘಟನೆ ನಡೆದಿದೆ.

ಶುಕ್ರವಾರದಂದು ಮಾಜಿ ಸಚಿವ ಹಾಲಿ ಶಾಸಕರಾದ ವೆಂಕಟರಮಣಪ್ಪ ನವರಿಂದ ಉದ್ಘಾಟನಾ ಮಾಡಬೇಕಿತ್ತು ಸುಮಾರು 11 ಗಂಟೆ ಸಮಯದಲ್ಲಿ ಮುಂಚಿತವಾಗಿ ಶಾಲೆ ವಸತಿ ಶಾಲೆ ಉದ್ಘಾಟನೆ ಮುನ್ನ ಕಿಡಿಗೇಡಿಗಳು ಶಾಲೆ ಒಳಗೆ ನುಗ್ಗಿ ನಾಮಫಲಕವನ್ನು ನುಚ್ಚುನೂರಾಗಿ ಮಾಡಿರುವ ಘಟನೆ ನಡೆದಿದೆ.
ಪಾವಗಡ ತಾಲೂಕಿನ ಚಿಕ್ಕಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಇದಕ್ಕೆ ನಿಕರವಾದ ಕಾರಣ ನಾಮ ಫಲಕದಲ್ಲಿ ಸ್ಥಳೀಯ ಮುಖಂಡರ ಹೆಸರು ಹಾಕದ ಕಾರಣ ಕಿಡಿಗೇಡಿಗಳು ಈ ಕೃತ್ಯ ಕಾರಣ ಎಂಬುದಾಗಿ ತಿಳಿದುಬಂದಿದೆ.
ಪ್ರವೇಶವಿಲ್ಲದ ಶಾಲೆಗೆ ಖಾಸಗಿ ವ್ಯಕ್ತಿಗಳು ನಾಮಫಲಕ ಧ್ವಂಸ ಮಾಡಿರುವುದು ಕಾನೂನು ಬಾಹಿರವಾಗಿದೆ.. ಈ ಬಗ್ಗೆ ಶಾಸಕರು ವೈಎನ್ ಹೊಸಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಗೌಡರಿಗೆ ಪ್ರಕರಣಕ್ಕೆ ಸೂಚಿಸಿದ್ದಾರೆ ಆರೋಪಿಗಳ ಹುಡುಕ ಈಗಾಗಲೇ ವೈ.ಎನ್.ಹೊಸಕೋಟೆ ಪೋಲಿಸರು ಮುಂದಾಗಿದ್ದಾರೆ.