Document

Gubbi: ಪಕ್ಷವನ್ನು ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಬೇಡಿ–ಶಾಸಕ ಎಂ ಟಿ ಕೆ ತೀವ್ರ ಕಿಡಿ.

JANATAA24 NEWS DESK 

 

 

Gubbi: ಪಕ್ಷವನ್ನು ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಬೇಡಿ–ಶಾಸಕ ಎಂ ಟಿ ಕೆ ತೀವ್ರ ಕಿಡಿ.

ಗುಬ್ಬಿ

ಗುಬ್ಬಿ, : ಯಾವ ಶಾಸಕರು ಪಕ್ಷಕ್ಕೆ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡಬಾರದು ಎಂದು ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರಿಗೆ ತಿರುಗೇಟು ನೀಡಿದರು.

 

ತಾಲೂಕಿನ ಸಿ ಎಸ್ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆ ಜೆ ಎಂ‌ ಯೋಜನೆ ಅಡಿಯಲ್ಲಿ 1.35 ಲಕ್ಷ ವೆಚ್ಚದಲ್ಲಿ ಮನೆಮನೆ ನಲ್ಲಿ ಸಂಪರ್ಕ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು

 

ಪಕ್ಷ ತಾಯಿಗೆ ಸಮಾನ, ಪಕ್ಷಕ್ಕೆ ದ್ರೋಹ ಬಗೆದು ಕೆಲವು ಶಾಸಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದು ತೀವ್ರ ಖಂಡನೀಯಯವಾಗಿದ್ದು, ಇಂಥ ಕೆಲಸವನ್ನು ಯಾರು ಮಾಡಬಾರದು ಎಂದ ಅವರು ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಕಾಂಗ್ರೆಸ್ ನವರು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದು ಇದಕ್ಕೆ ಮಧ್ಯಮ ಹಾಗೂ ಅತಿ ಸಣ್ಣ ರೈತರು ಬಲಿಯಾಗುತ್ತಿದ್ದಾರೆ. ತುಮಕೂರು ಜಿಲ್ಲೆಯ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿಚಾರವಾಗಿ ಈಗಾಗಲೇ ಸರ್ಕಾರಕ್ಕೆ ಕೌಂಟರ್ ನೀಡಿದ್ದು ಯಾವುದೇ ಕಾರಣಕ್ಕೂ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಯೋಜನೆ ಮಾಡಲು ಬಿಡುವುದಿಲ್ಲ ಎಂದು ತೀವ್ರ ಕಿಡಿಕಾರಿದರು.

 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಈಶ್ವರ ಗೌಡ, ಸಾವಿತ್ರಮ್ಮ, ಅರುಣ, ದೇವರಾಜ್, ಲಕ್ಷ್ಮೀದೇವಮ್ಮ, ಎಇಇ ನಾಗೇಂದ್ರಪ್ಪ,

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆರ್. ಯುವರಾಜ್, ಕಾರ್ಯದರ್ಶಿ ಎಂ.ಆರ್. ವಿಜಯ್ ಕುಮಾರ್ ಬಿಲ್ ಕಲೆಕ್ಟರ್ ಗಂಗಾಧರ್, ಮುಖಂಡರಾದ ನವೀನ್ ಕುಮಾರ್, ಬಾಬು, ಮಹದೆವ್ ಗುತ್ತಿಗೆದಾರರು ಜಗದೀಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *