Document

Badami:  ಪೊಲೀಸ್  ನೇತೃತ್ವದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ತಡೆ ಅರಿವು ಕಾರ್ಯಕ್ರಮ ನೆರವೇರಿತು

JANATAA24 NEWS DESK 

 

 

 

 

Badami:  ಪೊಲೀಸ್  ನೇತೃತ್ವದಲ್ಲಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ತಡೆ ಅರಿವು ಕಾರ್ಯಕ್ರಮ ನೆರವೇರಿತು.

 

Badami

ಬಾದಾಮಿ: ಶ್ರೀ ವೀರಪುಲಿಕೇಶಿ ಶಿಕ್ಷಣ ಸಂಸ್ಥೆಯ ಬಸವ ಮಂಟಪದಲ್ಲಿ ಕಾರ್ಯಕ್ರಮ ಜರುಗಿತು. ಬಾದಾಮಿ ಆರಕ್ಷಕ ಠಾಣೆ ವೃತ್ತ ನಿರೀಕ್ಷಿಕರಾದ ಕರಿಯಪ್ಪ ಬನ್ನೆ ಮಾತನಾಡಿ ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟ ತಡೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಆರಕ್ಷಕ ಇಲಾಖೆಯಿಂದ ಇರುವ QR ಕೋಡ್ ಬಳಸಿ ನೀವುಗಳು ಮಾದಕ ಬಳಕೆ ಹಾಗೂ ಮಾರಾಟ ತಡೆಯಲ್ಲಿ ನೀವು ಕೂಡ ನಮ್ಮ ಇಲಾಖೆ ಜೊತೆ ಕೈ ಜೋಡಿಸಿ ಸಹಕರಿಸಬೇಕು ಎಂದು ಕರೆ ನೀಡಿದರು.

 

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ್ ಮಮದಾಪೂರ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಹಕಾರ ಬಹಳ ಮುಖ್ಯ ಎನ್ನುವುದನ್ನು ವಿವರಿಸಿದರು.

 

ಬಾದಾಮಿ ವೃತ್ತ ನಿರೀಕ್ಷಕ ಕರಿಯಪ್ಪ ಬನ್ನೆ ಯವರನ್ನು ವೇದಿಕೆಯಲ್ಲಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ್ ಮಮದಾಪೂರ ಸನ್ಮಾನ ಮಾಡಿ ಗೌರವಿಸಿದರು.

 

ಇದೇ ಸಂದರ್ಭದಲ್ಲಿ ಬಾದಾಮಿ ಪಿ ಎಸ್ ಐ ಹನಮಂತ ನೇರಳೆ, ಹಾಗೂ ಪ್ರೊಫೆಷನಲ್ ಪಿ ಎಸ್ ಐ,ಹಾಗೂ ಪಿ ಎಸ್ ಐ ರಾಜೇಶ್, ಬಿ ಎ ಎಂ ಎಸ್. ಪ್ರಿನ್ಸಿಪಾಲ್ ದಾನಪ್ಪಗೌಡ್ರ, ಉಪನ್ಯಾಸಕ ಪ್ರಭು ಜವಳಿ, ಬಾದಾಮಿ ಆರಕ್ಷಕ ಠಾಣೆ ಅಧಿಕಾರಿಗಳು ವೇದಿಕೆಯಲ್ಲಿ ಉಪಾಸ್ಥಿತರಿದ್ದರು. ಇನ್ನುಳಿದಂತೆ ಬಾದಾಮಿ ಆರಕ್ಷಕ ಠಾಣೆ ಸಿಬ್ಬ0ದಿಗಳು,ಶ್ರೀ ವೀರಪುಲಿಕೇಶಿ ಕಾಲೇಜು ಹಾಗೂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *