JANATAA24 NEWS DESK
Gubbi: ಬೆಟ್ಟಿಂಗ್ ದಂದೆಗೆ ಯುವಕ ಬಲಿ.

ಗುಬ್ಬಿ: ತಾಲೂಕಿನ ಸಿ ಎಸ್ ಪುರ ಹೋಬಳಿಯ ಅಂಕಳಕೊಪ್ಪ ಗ್ರಾಮದ ನಾರಾಯಣಸ್ವಾಮಿ (25) ಯುವಕ ಐಪಿಎಲ್ ಬೆಟ್ಟಿಂಗ್ ದಂದೆಗೆ ಸಿಲುಕಿ ನೇಣಿಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸಿ ಎಸ್ ಪುರ ಹೋಬಳಿ ಅಂಕಳ
ಕೊಪ್ಪ ಗ್ರಾಮದ ಬೆಟ್ಟಪ್ಪನವರ ಪುತ್ರ ನಾರಾಯಣಸ್ವಾಮಿ ವೃತ್ತಿಯಲ್ಲಿ ಕೊರಿಯರ್ ಕೆಲಸ ಮಾಡುತ್ತಿದ್ದು ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದನು, ಈತ ಈ ಹಿಂದೆ ನಡೆದ ಐ ಪಿ ಎಲ್ ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾನೆ.
ಈ ಘಟನೆ ಸಂಬಂಧಪಟ್ಟ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಶವವನ್ನು ಇರಿಸಲಾಗಿದ್ದು ಸ್ಥಳಕ್ಕೆ ನಿಕಟಪೂರ್ವ ಶಾಸಕ ಮಸಾಲೆ ಜಮರಾಮ್ ಭೇಟಿ ನೀಡಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಇಂದಿನ ಯುವ ಪೀಳಿಗೆ ಐಪಿಎಲ್ ಸೇರಿದಂತೆ ಆನ್ಲೈನ್ ಗೇಮ್ ಗಳಲ್ಲಿ ಬೆಟ್ಟಿಂಗ್ ಕಟ್ಟಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಂಡವಾಳಿಶಾಹಿಗಳು ಐಪಿಎಲ್ ಅಂತಹ ದೊಡ್ಡ ಕ್ರೀಡೆಯನ್ನು ನಡೆಸುತ್ತಿರುವುದರಿಂದ ಯುವ ಸಮುದಾಯ ದಾರಿ ತಪ್ಪುತ್ತಿದೆ. ಸರ್ಕಾರ ಎಚ್ಚೆತ್ತು ಕೂಡಲೇ ಕಡಿವಾಣ ಹಾಕಬೇಕು ಹಾಗೂ ಪೋಷಕರು ತಮ್ಮ ಮಕ್ಕಳ ಚಲನ ವಲನದ ಬಗ್ಗೆ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
https://www.janataa24.com/operation-sindor-pok-9-terrorist/