JANATAA24 NEWS DESK
IT CORRIDOR: ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಕೆಆರ್ ಪುರಂ 20Km ರಸ್ತೆ ಅಭಿವೃದ್ಧಿಗೆ 400 ಕೋಟಿ❗️

ಬೆಂಗಳೂರು: ಟ್ರಾಫಿಕ್.. ಟ್ರಾಫಿಕ್ ಟ್ರಾಫಿಕ್. ಎಂದು ಗೂಗಲ್ನಲ್ಲಿ ಸರ್ಚ್ ಮಾಡಿದ್ರೆ ಮೊದ್ಲು ಕಾಣ್ಸೋದೇ ಸಿಲ್ಕ್ಬೋರ್ಡ್ ಜಂಕ್ಷನ್. ಕೆಆರ್ಪುರಂ.!
ಹೇಳಿ ಕೇಳಿ ಈ ಏರಿಯಾ ಐಟಿ ಕಾರಿಡಾರ್. ಬಹಳಷ್ಟು ಐಟಿ ಕಂಪನಿಗಳಿರೋದು ಇಲ್ಲೇ. ಆದ್ರೆ ಇಲ್ಲಾಗ್ತಿರೋ ಟ್ರಾಫಿಕ್ ಸಮಸ್ಯೆಗೆ ಮುಕ್ತಿನೇ ಇಲ್ವಾ ಅಂತ ಪ್ರಶ್ನೆ ಮಾಡಿ ಮಾಡಿ ಸುಸ್ತಾದ ಐಟಿ ಕಂಪನಿಗಳು ಅಸಮಾಧಾನಗೊಂಡು ನಗರ ಬಿಟ್ಟು ಹೋಗೋ ಮಾತುಗಳನ್ನೂ ಆಡಿದ್ರು. ಗುಂಡಿ. ಟ್ರಾಫಿಕ್ನಿಂದ ಕಿರಿಕಿರಿ ಹೆಚ್ಚಾಗ್ತಿದೆ ಅಂತ ಕಿಡಿಕಾರಿದ್ರು.
ಈ ಬೆನ್ನಲ್ಲೇ ಇದೀಗ ಬೆಂಗಳೂರು ಐಟಿ ವಲಯಕ್ಕೆ ಸಿಎಂ & ಡಿಸಿಎಂ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಬೆಂಗಳೂರೂ ಐಟಿ ಕಾರಿಡಾರ್ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬರೋಬ್ಬರಿ 400 ಕೋಟಿ ರೂ. ಘೋಷಣೆ ಮಾಡಿದೆ.
ಐಟಿ ಕಾರಿಡಾರ್ ಅಭಿವೃದ್ಧಿಗೆ ₹400 ಕೋಟಿ
ಸಿಲ್ಕ್ಬೋರ್ಡ್ ಜಂಕ್ಷನ್ನಿಂದ KR ಪುರಂ ರಸ್ತೆ ಅಭಿವೃದ್ಧಿಗೆ ನಿರ್ಧಾರ
ಐಟಿ ಕಾರಿಡಾರ್ನ ರಸ್ತೆ ವಿಶ್ವದರ್ಜೆ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಮುಂದು
₹400 ಕೋಟಿ ಘೋಷಿಸಿ, ಯೋಜನೆಗೆ ಚಾಲನೆ ನೀಡಿದ ಡಿಸಿಎಂ ಡಿಕೆಶಿ
ಐಟಿ ಕಂಪನಿಗಳು ಇರುವ ಭಾಗದ ರಸ್ತೆಗಳ ಅಭಿವೃದ್ಧಿಗೆ ಡಿಸಿಎಂ ಮುಂದು
20km ಉದ್ದದ ರಸ್ತೆಯನ್ನ 400 ಕೋಟಿ ಮೊತ್ತದಲ್ಲಿ ಅಭಿವೃದ್ಧಿಗೆ ನಿರ್ಧಾರ
ಕಾಮಗಾರಿಗೆ 18-24 ತಿಂಗಳು, 2027ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ .
ಈಗಾಗಲೇ ಔಟರ್ ರಿಂಗ್ ರೋಡ್ನಲ್ಲಿ ಬೆಳಗ್ಗೆ 8ರಿಂದ 11 ಮತ್ತು ಸಂಜೆ 5ರಿಂದ 10ರವರೆಗೆ ಹೆವೀ ಟ್ರಾಫಿಕ್ ಜಾಮ್ ಆಗುತ್ತಿದೆ. ಇಲೆಕ್ಟ್ರಾನಿಕ್ ಸಿಟಿ, ಮನ್ಯಾತಾ ಟೆಕ್ ಪಾರ್ಕ್, ಬಾಗ್ಮನೆ ಟೆಕ್ ಪಾರ್ಕ್ಗಳಿಗೆ ತೆರಳುವ ಲಕ್ಷಾಂತರ ಐಟಿ ಉದ್ಯೋಗಿಗಳು ದಿನನಿತ್ಯ 2-3 ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಾಯಬೇಕಿದೆ. ಈ ಹೊಸ ಹೊರವರ್ತುಲ ರಸ್ತೆ ಜಾರಿಗೆ ಬಂದರೆ ಸಿಲ್ಕ್ಬೋರ್ಡ್-ಕೆಆರ್ ಪುರಂ ನಡುವಿನ ಪ್ರಯಾಣ ಸಮಯ 90 ನಿಮಿಷದಿಂದ 30-35 ನಿಮಿಷಕ್ಕೆ ಇಳಿಕೆ ಆಗಲಿದೆ, ಔಟರ್ ರಿಂಗ್ ರೋಡ್ನ ಒತ್ತಡ 30-40% ಕಡಿಮೆ ಆಗೋದಂತು ಪಕ್ಕಾ!
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.