JANATAA24 NEWS DESK
Lokayukta Raid: 1,15,000 ನಗದು ಲಂಚ ಸ್ವೀಕರಿಸುತ್ತಿದ್ದ ತುಮಕೂರು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಲಿಂಗರಾಜು ಮತ್ತು ಸಹಾಯಕ ಪ್ರಸಾದ್ ಲೋಕಾಯುಕ್ತ ಬಲೆಗೆ.

ತುಮಕೂರು: ನಗರದ ವಿಜಯನಗರ ಬಡಾವಣೆ ವಾಸಿಯಾದ ಪಿರ್ಯಾದಿ ಶ್ರೀ ಚನ್ನಬಸವೇಶ್ವರ.ಎಂ.ಎಸ್ ರವರು ವಸಂತನರಸಾಪುರ 2ನೇ ಹಂತದಲ್ಲಿ ಮೆಸರ್ಸ್॥ ಶಿವಲಿಂಗ ಇಂಡಸ್ಟ್ರೀಸ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ, ಕಳೆದ ಒಂದು ವರ್ಷದಿಂದ ಎಲೆಕ್ನಿಕಲ್ ಕಂಟ್ರೋಲ್ ಪ್ಯಾನಲ್ ತಯಾರು ಮಾಡುವ ಸಣ್ಣ ಉದ್ದಿಮೆ ನಡೆಸುತ್ತಿದ್ದಾರೆ. ಮೊದಲ ಬಾರಿಗೆ ಉದ್ದಿಮೆ ಪ್ರಾರಂಭಿಸುವವರಿಗೆ ಸರ್ಕಾರದಿಂದ ಸಹಾಯಧನ ನೀಡುವುದರಿಂದ, ಸಹಾಯಧನ ಮಂಜೂರಾತಿ ಕೋರಿ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ತುಮಕೂರು ರವರಿಗೆ ಪಿರ್ಯಾದಿ ಅರ್ಜಿ ಸಲ್ಲಿಸಿದ್ದರು.
ಪಿರ್ಯಾದಿ ಶ್ರೀ ಚನ್ನಬಸವೇಶ್ವರ.ಎಂ.ಎಸ್ ರವರಿಗೆ 18 ಲಕ್ಷ 75 ಸಾವಿರ ಸಹಾಧನ ಮಂಜೂರು ಮಾಡಲು ಜಂಟಿ ನಿರ್ದೇಶಕ ಲಿಂಗರಾಜು.ಡಿ.ಕೆ ಮತ್ತು ಅವರ ಸಹಾಯಕ ಪ್ರಸಾದ್.ಎನ್.ಎಸ್ ರವರು ಒಟ್ಟು 1.25,000=00 ರೂ ಲಂಚಕ್ಕೆ ಒತ್ತಾಯಿಸಿ, ಮುಂಗಡವಾಗಿ 10,000=00 ರೂ ಸ್ವೀಕರಿಸಿರುತ್ತಾರೆ.
ಪಿರ್ಯಾದಿ ಶ್ರೀ ಚನ್ನಬಸವೇಶ್ವರ.ಎಂ.ಎಸ್ ರವರಿಗೆ ಲಂಚ ನೀಡಲು ಇಷ್ಟವಿಲ್ಲದೇ, ದಿನಾಂಕ: 11/12/2025 ರಂದು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಪೊಲೀಸ್ ಉಪಾಧೀಕ್ಷಕರಾದ ಡಾ॥ ಸಂತೋಷ್.ಕೆ.ಎಂ ರವರು ಠಾಣಾ ಮೊ.ನಂ:13/2025 ಕಲಂ-7(a) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ-1988 (ತಿದ್ದುಪಡಿ-2018) ರಂತೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.
ಸಮಯದಲ್ಲಿ ತುಮಕೂರು ನಗರದ ಕಛೇರಿಯ ಮುಂಭಾಗ ಆರೋಪಿ-2 ಇದೇ ದಿನ ಮದ್ಯಾಹ್ನ 01.50 ಗಂಟೆ ಬಿ.ಹೆಚ್.ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಸಾದ್.ಎನ್.ಎಸ್ ರವರು 1,15,000=00 ಲಂಚವನ್ನು ಪಿರ್ಯಾದಿ ಶ್ರೀ ಚನ್ನಬಸವೇಶ್ವರ.ಎಂ.ಎಸ್ ರವರಿಂದ ಸ್ವೀಕರಿಸುವಾಗ ಟ್ರ್ಯಾಪ್ ಆಗಿದ್ದು, ತನಿಖಾಧಿಕಾರಿ ಡಾ| ಸಂತೋಷ್.ಕೆ.ಎಂ. ಪೊಲೀಸ್ ಉಪಾಧೀಕ್ಷಕರು ರವರ ನೇತೃತ್ವದ ತಂಡ ಆರೋಪಿ-1 ಲಿಂಗರಾಜು.ಡಿ.ಕೆ ಮತ್ತು ಅವರ ಸಹಾಯಕ ಪ್ರಸಾದ್.ಎನ್.ಎಸ್ ಇಬ್ಬರನ್ನೂ ವಶಕ್ಕೆ ಪಡೆದಿರುತ್ತದೆ.
ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ.ಎ.ವಿ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಸಂತೋಷ್.ಕೆ.ಎಂ ಮತ್ತು ಶ್ರೀ ಮಂಜುನಾಥ.ಎಂ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಶ್ರೀ ಕೆ.ಸುರೇಶ, ಶ್ರೀ ಬಿ.ಮೊಹಮ್ಮದ್ ಸಲೀಂ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಲಂಚ ಸ್ವೀಕರಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ.
ಈ ಹಿಂದೆ ಮೈಸೂರು ಜಿಲ್ಲಾ ಡಿಐಸಿ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಲಿಂಗರಾಜು ಡಿಕೆ ರವರು ಎಸಿಬಿ(Anti Corruption Bureau)ಬಲೆಗೆ ಬಿದ್ದಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.