Turuvekere: ಅಟ್ರಾಸಿಟಿ ಕೇಸಿನಲ್ಲಿ ರಾಜಿ ಮಾಡುವುದಿಲ್ಲ–DYSP ಓಂ ಪ್ರಕಾಶ್.

Janataa24 NEWS DESK

 

Turuvekere: ಅಟ್ರಾಸಿಟಿ ಕೇಸಿನಲ್ಲಿ ರಾಜಿ ಮಾಡುವುದಿಲ್ಲ–DYSP ಓಂ ಪ್ರಕಾಶ್.

 

 

 

ತುರುವೇಕೆರೆ: ಅಟ್ರಾಸಿಟಿ ಪ್ರಕರಣಗಳಲ್ಲಿ ರಾಜಿ ಮಾಡುವುದಿಲ್ಲ ಎಂದು ಕುಣಿಗಲ್ ಉಪ ವಿಭಾಗದ ಡಿ.ವೈ.ಎಸ್.ಪಿ. ಓಂ ಪ್ರಕಾಶ್ ಹೇಳಿದರು.

 

ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ತುರುವೇಕೆರೆ ವೃತ್ತಕ್ಕೆ ಸಂಬಂಧಪಟ್ಟಂತೆ, ಭಾನುವಾರ ಬೆಳಗ್ಗೆ ಆಯೋಜಿಸಿದ್ದ ‌ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ತಾಲೂಕಿನ ದಲಿತ ಮುಖಂಡರ ಹಲವಾರು ಸಮಸ್ಯೆಗಳನ್ನು ಆಲಿಸಿ ಬಳಿಕ ಮಾತನಾಡಿದ ಅವರು, ಪೊಲೀಸ್ ಇಲಾಖೆಯು ನಿಮ್ಮ ರಕ್ಷಣೆಗಾಗಿ ಸದಾ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಂದರ್ಭದಲ್ಲಿ ತಾವು ದೌರ್ಜನ್ಯಕ್ಕೆ ಒಳಗಾದರೆ ಕೂಡಲೇ ಸ್ಥಳೀಯ ಠಾಣೆಗೆ ನಿರ್ಭಯವಾಗಿ ಬಂದು ಠಾಣೆಗೆ ದೂರನ್ನು ನೀಡಿ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.

 

ನಾವು ಕಾನೂನಾತ್ಮಕವಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ, ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಮ್ಮ ಸಹಕಾರವು ಸಹಾ ಅತ್ಯಮೂಲ್ಯ. ನೊಂದವರು ಘಟನೆಗೆ ಸಂಬಂಧಪಟ್ಟಂತೆ ಸಂಕ್ಷಿಪ್ತವಾಗಿ ವಿವರಣೆಯನ್ನು ದೂರಿನಲ್ಲಿ ನೀಡುವುದು ಸೂಕ್ತವಾದಂತದ್ದದ್ದು. ನೀವು ನೀಡುವ ದೂರಿನಲ್ಲಿ ಕೆಲವೊಂದು ಎನ್.ಸಿ ಮತ್ತು ಎಫ್.ಐ. ಆರ್.ಆಗುವ ಸಾರಾಂಶಗಳು ಇರುತ್ತವೆ. ಅಟ್ರಾಸಿಟಿ ಅಂತಹ ಪ್ರಕರಣಗಳಲ್ಲಿ, ಹಾಗೂ ಗಾಂಜಾ, ಇಟ್ ಅಂಡ್ ರನ್, ಸೇರಿದಂತೆ ಠಾಣೆಗೆ ಬರುವಂತಹ ಯಾವುದೇ ಪ್ರಕರಣಗಳನ್ನು ನಿರ್ಲಕ್ಷ ಮಾಡದೆ ಗಂಭೀರವಾಗಿ ಪರಿಗಣಿಸಿ ಇಲಾಖೆಯು ಕರ್ತವ್ಯ ನಿರ್ವಹಿಸುತ್ತಿದೆ.

 

ತಾಲೂಕಿನಲ್ಲಿ ಈಗಾಗಲೇ ಗಾಂಜಾ ಪ್ರಕರಣಗಳನ್ನು ಮತ್ತು ಗಾಂಜಾ ಮಾರಾಟಗಾರರನ್ನು ಬಂಧಿಸಿ ಎಡೆಮುರಿ ಕಟ್ಟಲಾಗಿದೆ. ತಾಲೂಕಿನಲ್ಲಿ ಗಾಂಜಾ ಮಾರಾಟಗಾರರು ನುಸುಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಇಲಾಖೆಯವರು ಸದಾ ಕಣ್ಗಾವಲಿನ ಕಾರ್ಯಪ್ರವೃತ್ತರಾಗಿದ್ದಾರೆ.

 

ತಾಲೂಕಿನಲ್ಲಿ ಯಾವುದೇ ಇತ್ತೀಚಿಗೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ, ಮತ್ತು ಶಾಂತಿ ಕದಡುವ ಪ್ರಯತ್ನ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಾರೆ ‌ ಖುದ್ದಾಗಿ ನನಗೆ ಮಾಹಿತಿ ನೀಡಿ ಮತ್ತು ಯಾವುದೇ ಪ್ರಕರಣಗಳ ಸಂಬಂಧ ಠಾಣೆಗಳಲ್ಲಿ ನಿರ್ಲಕ್ಷ ತೋರಿದರೆ ನೇರವಾಗಿ ನನಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಖಡಕ್ ಉತ್ತರ ನೀಡಿದರು ಹಾಗೂ ದಲಿತ ಮುಖಂಡರುಗಳ ಹಲವಾರು ‌ಸಮಸ್ಯೆಗಳ ಸಂಬಂಧ ಮುಂದಿನ ದಿನಗಳಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾದ ಕಾರ್ಯವಾಗಲಿದೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಟ್ಟು,ಅವರಿಗೂ ಸೂಕ್ತ ರಕ್ಷಣೆ ಒದಗಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ಸಂಕ್ಷಿಪ್ತವಾಗಿ ಉತ್ತರ ನೀಡುವ ಮೂಲಕ ಪ್ರತಿಕ್ರಿಸಿದರು.

 

ಸಿ.ಪಿ.ಐ ಲೋಹಿತ್ ರವರು ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಎಸ್ಸಿ- ಎಸ್ಟಿ ಪ್ರಕರಣಗಳು ದಾಖಲಾಗಿರುವುದು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ , ಗಾಂಜಾದಂತಹ ಪ್ರಕರಣಗಳಲ್ಲಿ ಹಾಸನ-ಅರಸೀಕೆರೆ, ನಾಗಮಂಗಲದ ಮೂಲ ಮಾರಾಟಗಾರರನ್ನು ಹಿಡಿದು ಬಂಧಿಸಿ ಜೈಲಿಗಟ್ಟಿದ್ದೇವೆ. ತಮ್ಮಗಳ ಸಲಹೆಯಂತೆ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟದ ಕುರಿತು ನೇರವಾಗಿ ನಾವೇ ಸ್ವತಃ ರೇಡ್ ಮಾಡುವ ಮೂಲಕ ಅಕ್ರಮ ಮದ್ಯ ಮಾರಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಟ್ರಾಫಿಕ್ ಸಮಸ್ಯೆ, ಇಟ್ ಅಂಡ್ ರನ್ ಪ್ರಕರಣವನ್ನು ನಿರ್ಲಕ್ಷಿಸಿಲ್ಲ, ಅಟ್ರಾಸಿಟಿ ಪ್ರಕರಣಗಳಲ್ಲಿ ನಿರ್ದಿಷ್ಟ ಕಾರಣವಿಲ್ಲದೆ ಬಿ ರಿಪೋರ್ಟ್ ಹಾಕಿರುವುದಿಲ್ಲ. ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿದ್ದರೆ ನಮಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು.ಮುಂದಿನ ದಿನಗಳಲ್ಲಿ ತಮ್ಮ ಅಹವಾಲುಗಳ ಕುರಿತಾಗಿ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ತಿಳಿಸಿದರು.

 

ಈ ವೇಳೆ ತಾಲೂಕಿನ ಹಲವಾರು ದಲಿತ ಮುಖಂಡರುಗಳು, ಜಾಮೀನು ವ್ಯಾಜ್ಯ. ಪಿ.ಟಿ.ಸಿ.ಎಲ್ ಸಂಬಂಧಿಸಿದ ದೂರುಗಳು, ಟ್ರಾಫಿಕ್ ಕಿರಿಕಿರಿ, ಮೂಲಭೂತ ಸೌಲಭ್ಯದ ಕೊರತೆಗಳು, ಅಪಘಾತ ಸಂಬಂಧಿಸಿದ ದೂರುಗಳು, ನ್ಯಾಯಾಲಯಕ್ಕೆ ಎಫ್.ಎಸ್.ಎಲ್ ವರದಿ ಮತ್ತು ಠಾಣೆಯಲ್ಲಿ ಅಮಾನತ್ತು ಪಡಿಸಿಕೊಂಡಿರುವ ಮೂಲ ದಾಖಲಾತಿಗಳು ಲಭ್ಯವಿಲ್ಲದಿರುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಬಹು ಮುಖ್ಯವಾಗಿ ಅಟ್ರಾಸಿಟಿ ಪ್ರಕರಣಗಳಲ್ಲಿ ದೂರುದಾರರ ವಿರುದ್ಧ ಕಠಿಣವಾದ ಸೆಕ್ಷನ್ ಗಳನ್ನು ಹಾಕುವ ಮೂಲಕ ಕೌಂಟರ್ ಕೇಸ್ ಮಾಡುತ್ತಿರುವುದು ನೋವಿನ ಸಂಗತಿ, ಅನ್ಯಾಯವಾಗುತ್ತಿರುವ‌ ಕಾರಣ ದೌರ್ಜನ್ಯಕ್ಕೆ ಒಳಗಾದವರಿಗೆ ಮತ್ತೊಂದು ದೌರ್ಜನ್ಯ ಮಾಡಿದಂತೆ ಆಗುತ್ತಿದೆ. ಅಟ್ರಾಸಿಟಿ ಪ್ರಕರಣಗಳನ್ನು ದಾಖಲಿಸಿದ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರ ನಿರ್ಲಕ್ಷಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು? ಮತ್ತು ಅಕ್ರಮ ಮಧ್ಯ ಮಾರಾಟ, ಕುಡುಕರ ಹಾವಳಿ, ಗಾಂಜಾ ಸಂಬಂಧಿಸಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮುಂತಾದ ಸಮಸ್ಯೆಗಳ ದೂರಿನ ಸುರಿಮಳೆಗೈದರು.

 

 

ಸಭೆಯಲ್ಲಿ ತುರುವೇಕೆರೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಸಂಗಪ್ಪ ಮೇಟಿ. ಮೂರ್ತಿ ಮತ್ತು ದಂಡಿನ ಶಿವರ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್, ಸಿಬ್ಬಂದಿಗಳಾದ ಎ.ಎಸ್. ಐ ಶಂಕರಪ್ಪ, ಮಂಜಣ್ಣ. ಹಾಗೂ ಸಿಬ್ಬಂದಿಗಳಾದ ದಿನೇಶ್, ಮಧು, ಅರುಣ್ ಕುಮಾರ್. ಅನಿಲ್ ಕುಮಾರ್, ತಿಮ್ಮರಾಜು, ಸೇರಿದಂತೆ ತಾಲೂಕಿನ ದಲಿತಪರ ಸಂಘಟನೆಗಳ ಮುಖಂಡರಾದ ನೆಮ್ಮದಿ ಗ್ರಾಮ ಮೂರ್ತಿ. ಡೊಂಕಿಹಳ್ಳಿ ರಾಮಣ್ಣ. ಕೃಷ್ಣ ಮಾದರ್. ಹುಲ್ಲೇಕೆರೆ ಜಗದೀಶ್. ಬೀಚನಹಳ್ಳಿ ರಾಮಣ್ಣ. ಪುಟ್ಟರಾಜು. ರಾಯಣ್ಣ. ಮಹೇಶ್. ಚಂದ್ರಯ್ಯ. ಬೋರಪ್ಪ. ಮಂಜುನಾಥ್. ಹಟ್ಟಪ್ಪ ಸೇರಿದಂತೆ ನವರು ಮುಂತಾದ ದಲಿತ ಮುಖಂಡರುಗಳು ಯುವ ಮುಖಂಡರುಗಳು ಪಾಲ್ಗೊಂಡಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.


 

Leave a Reply

Your email address will not be published. Required fields are marked *