Turuvekere: ತುರುವೇಕೆರೆ ಪ್ರೀಮಿಯರ್ ಲೀಗ್ (TPL) ಅಪ್ಪು ಕಪ್ ಕ್ರಿಕೆಟ್ ಪಂದ್ಯಾವಳಿಗೆ ಕ್ಷಣಗಣನೆ.

Janataa24 NEWS DESK

 

 

Turuvekere: Countdown to Turuvekere Premier League (TPL) Appu Cup Cricket Tournament.

 

ತುರುವೇಕೆರೆ: ಇದೇ ತಿಂಗಳು 26, 27, 28, ಮತ್ತು 29 ನೇ ಅಕ್ಟೋಬರ್ 2024 ಈ ನಾಲ್ಕು ದಿನದಲ್ಲಿ ಕನ್ನಡಿಗರ ಕಣ್ಮಣಿ, ಕರ್ನಾಟಕ ರತ್ನ, ಪುನೀತ್ ರಾಜಕುಮಾರ್ ಅವರ ಮೂರನೇ ಪುಣ್ಯ ಸ್ಮರಣೆ ಅಂಗವಾಗಿ ತಾಲೂಕು ಮಟ್ಟದ ಅಪ್ಪು ಕಪ್ಪು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆರ್‌ಎಸ್ ಅಕ್ಷರ ಅಕಾಡೆಮಿಯ ಅಧ್ಯಕ್ಷರಾದ ಸಿ ಎಸ್ ಮೂರ್ತಿ, ತಾಲೂಕು ಈಡಿಗಾ ಸಮಾಜದ ಅಧ್ಯಕ್ಷರು ಆದ ಎಸ್ ಎಲ್ ಎನ್ ರಾಜಣ್ಣ, ಉದ್ಯಮಿಗಳು ಆದ ರಾಘು ಕಲ್ಕೆರೆ, ಶ್ರೀರಂಗ ಎಂಟರ್ಪ್ರೈಸಸ್ ಅಶೋಕ್ ಏನ್, ಹಾಗೂ ವೈ ಸಿ ಸಿ ಕ್ರಿಕೆಟರ್ಸ್ ನವೀನ ಬಾಬು ಇವರ ನೇತೃತ್ವದಲ್ಲಿ ಈ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು, ಇಂದು ಪ್ರೀಮಿಯರ್ ಲೀಗ್ ಲಾಂಛನ ಮತ್ತು ಬಿತ್ತಿ ಪತ್ರವನ್ನು ತಾಲೂಕಿನ ದಂಡಾಧಿಕಾರಿ ಕುಂ ಇ ಅಹಮದ್, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ಶ್ರೇಯ, ರಾಜ್ಯಮಟ್ಟದ ಕ್ರಿಕೆಟ್ ಆಟಗಾರ ನಿಶಾಂತ್, ಇವರು ಬಿಡುಗಡೆಗೊಳಿಸಿದರು.

ಇನ್ನು ಮೇಲ್ಕಂಡಂತೆ ನಾಲ್ಕು ದಿನಗಳು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು ಮೊದಲನೇ ಬಹುಮಾನ 50,000 ಎರಡನೆಯ ಬಹುಮಾನ 25,000 ಮೂರನೆಯ ಬಹುಮಾನ 12,000 ಮತ್ತು ಟ್ರೋಪಿಗಳನ್ನೊಳಗೊಂಡಂತೆ ಅಪ್ಪು ಕಪ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿದ್ದು ಈ ಪಂದ್ಯಾವಳಿಗಳನ್ನು ತುರುವೇಕೆರೆ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ ಇದರ ಜೊತೆಗೆ ಆಕರ್ಷಕ ವೈಯಕ್ತಿಕ ಬಹುಮಾನಗಳು ಸಿಗಲಿದ್ದು, ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರಿಗೂ ವಸತಿ ಸೌಲಭ್ಯ, ಊಟದ ಸೌಲಭ್ಯ ಒದಗಿಸಲಾಗುವುದು ಹಾಗೂ ಭಾಗವಹಿಸುವ ಆಟಗಾರರು ತಪ್ಪದೆ ಅವರ ಆಧಾರ್ ಕಾರ್ಡ್ ಗಳನ್ನು ನೋಂದಣಿ ಮಾಡುವ ಸಮಯದಲ್ಲಿ ಹಾಜರುಪಡಿಸಬೇಕು , ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಆಟದ ತಂಡಗಳ ನೋಂದಣಿಯನ್ನು ಈ ಕೆಳಕಂಡಂತೆ ದೂರವಾಣಿಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ತಂಡಗಳ ನೋಂದಣಿ ಮಾಡಿಸಬೇಕೆಂದು ಆಯೋಜಕರು ಪತ್ರಿಕಾಗೋಷ್ಠಿ ಮೂಲಕ ತಿಳಿಸಿದ್ದಾರೆ,.

 

 

ದೂರವಾಣಿ ಸಂಖ್ಯೆ ಕೆಳಕಂಡಂತಿವೆ.

ನವೀನ್ ಬಾಬು (948092275)

ಅಶೋಕ್ (9743332504)

ವಿನೋದ್ (9611865823)

ಉಮೇಶ್ (9900685128)

B R ಕೃಷ್ಣಸ್ವಾಮಿ (8970758882) ಇನ್ನು ಈ ಪತ್ರಿಕಾಗೋಷ್ಠಿಯಲ್ಲಿ ಆಯೋಜಕರು ಹಾಗೂ ತಾಲೂಕಿನ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Job Alert: SSLC ಪಾಸಾದವರಿಗೆ NABARDನಲ್ಲಿ ಉದ್ಯೋಗಾವಕಾಶ.

 

Leave a Reply

Your email address will not be published. Required fields are marked *