Turuvekere: ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಿವೇಕ ಸಂಭ್ರಮ

Janataa24 NEWS DESK

Turuvekere: ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ವಿವೇಕ ಸಂಭ್ರಮ ಸಮಾರೋಪ ಸಮಾರಂಭ.
Turuvekere,

ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು ವತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಾರ್ಷಿಕ ಸಮಾರಂಭ ಸಮಾರಂಭವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕಿನ ಶಾಸಕರಾದ ಎಂಟಿ ಕೃಷ್ಣಪ್ಪ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಕಾಂತರಾಜು, ಹಾಗೂ ತಿಪಟೂರು ಸ!! ಪ!! ಪೂ!! ಬಾ !! ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ್, ಸಿದ್ದಗಂಗಾ ವಿದ್ಯಾಸಂಸ್ಥೆಯ ನೋಡಲ್ ಅಧಿಕಾರಿ ಪ್ರಕಾಶ್, ತುರುವೇಕೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾಗ್ಯಮ್ಮ, ಸದಸ್ಯರಾದ ಯಜಮಾನ ಮಹೇಶ್, ಶ್ರೀಮತಿ ಶೀಲಾ ಶಿವಪ್ಪ ನಾಯಕ, ಹಾಗೂ ಜನತಾ 24 ನ್ಯೂಸ್ ತಾಲೂಕು ವರದಿಗಾರರಾದ ಮಂಜುನಾಥ್ ಕೆ ಎ, ವಿಶೇಷ ಆಹ್ವಾನಿತರಾದ ಪ್ರಭಾಕರ್ ರೆಡ್ಡಿ, ಡಾ. ಬಾಲ ಗುರುಮೂರ್ತಿಅವರು ದೀಪ ಬೆಳಗಿಸಿ ಶ್ರೀ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೊದಲಿಗೆ ಕಾಲೇಜಿನ ಉಪನ್ಯಾಸಕರು ಹಾಗೂ ಬೋಧಕೇತರರ ಹಾಗೂ ಹಿಂದೂ ಸಂಪ್ರದಾಯದ ನೃತ್ಯದ ಮೂಲಕ ಕುಮಾರಿ ಮೇಘನಾ ಸಿಎಂ ಅವರಿಂದ ನೃತ್ಯದೊಂದಿಗೆ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು, ನಂತರ ಪ್ರಾಸ್ತಾವಿಕ ನುಡಿಯನ್ನು ಪ್ರಾಂಶುಪಾಲರಾದ ಕಾಂತರಾಜು ನಡೆಸಿಕೊಟ್ಟರು. ಇದೇ ವೇಳೆ ಕಾರ್ಯಕ್ರಮ ಉದ್ದೇಶಿಸಿ ತುರುವೇಕೆರೆ ತಾಲೂಕಿನ ಶಾಸಕರಾದ ಎಂ ಟಿ ಕೃಷ್ಣಪ್ಪ ಅವರು ಮಾತನಾಡಿ, ಶ್ರೀ ಸ್ವಾಮಿ ವಿವೇಕಾನಂದರು ಈ ರಾಷ್ಟ್ರದಲ್ಲಿ ಯುವಜನತೆಗೆ ಮಾರ್ಗದರ್ಶಿಗಳಾಗಿ ಈ ರಾಷ್ಟ್ರದ ಯುವಶಕ್ತಿ ಬೆಳೆಯಬೇಕೆಂದರೆ ಸ್ವಾಮಿ ವಿವೇಕಾನಂದರ ಕೊಡುಗೆ ಅಪಾರ ಇವರು ರಾಷ್ಟ್ರ ನಿರ್ಮಾಣಕ್ಕಾಗಿ ಕೆಲಸ ಮಾಡಲು ಮತ್ತು ಮಾನವ ಇತಿಹಾಸ ಸೇವೆ ಮಾಡಲು ಯುವಜನತೆಯನ್ನು ಪ್ರೇರೇಪಿಸಿದ್ದರು ಕೂಡ, ಹಾಗೂ ಹೇಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶವನ್ನು ತಾಯ್ನಾಡಿನ ಹಿರಿಮೆಯನ್ನು ಪಶ್ಚಿಮ ದೇಶಗಳಿಗೆ ತೋರಿಸಿಕೊಟ್ಟು ಜೊತೆಗೆ ನಿರ್ಬಯತೆ, ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಪರಿಣಿತರಾಗಿದ್ದರು ಆದ್ದರಿಂದ ಇವರ ಜನ್ಮದಿನವಾದ ಜನವರಿ 12ರಂದು ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುತ್ತಿದೆ ಎಂದರು, ಜೊತೆಗೆ ತಾಲೂಕಿಗೆ ಹಾಗೂ ನಮ್ಮ ಜಿಲ್ಲೆಗೆ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಗೆ ಕೀರ್ತಿ ತರುವುದು ಮತ್ತು ಹೆಚ್ಚಿನ ಅಂಕಗಳನ್ನು ಪಡೆದು ಉನ್ನತ ಮಟ್ಟದ ಶಿಕ್ಷಣಕ್ಕಾಗಿ ಕಾಲೇಜಿನಲ್ಲಿ ಯಾವುದೇ ಜಾತಿ ತಾರತಮ್ಯವಿಲ್ಲದೆ ಎಲ್ಲಾ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಪಾಠ ಪ್ರವಚನ ಕೇಳುವಂತೆ ಮಾಡುವುದರ ಹಿಂದೆ ಬಹಳಷ್ಟು ಶ್ರಮ ನಿಮ್ಮಗಳಿಗಿಂತ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರ ಪಾತ್ರ ಬಹಳ ಮುಖ್ಯ ವಿದ್ಯಾರ್ಥಿಗಳಾದ ನಿಮ್ಮಗಳಿಗೆ ಉತ್ತಮ ಶಿಕ್ಷಣ ಕೊಡುವುದರ ಮೂಲಕ ಮತ್ತೆ ಕಾಲೇಜಿನ ಫಲಿತಾಂಶದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಇವರುಗಳ ಶ್ರಮ ಬಹಳ ಅಪಾರ ಹಾಗಾಗಿ ಮೊದಲಿಗೆ ಪ್ರಾಂಶುಪಾಲರಿಗೆ ಈ ಕಾಲೇಜಿನ ಉಪನ್ಯಾಸಕರಿಗೆ ನನ್ನ ಅಭಿನಂದನೆಗಳನ್ನ ತಿಳಿಸುತ್ತೇನೆ ಎಂದರು. ಮುಂದುವರೆದು ಮಾತನಾಡಿದ ವಿಶೇಷ ಉಪನ್ಯಾಸ ನೀಡಲು ಆಗಮಿಸಿದ ಎಂಡಿ ಶಿವಕುಮಾರ್ ಮಾತನಾಡಿ ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದರು, ಹೇಳಿ ಎದ್ದೇಳಿ ನಿಲ್ಲಬೇಡಿ ಗುರಿ ಸಿಗುವ ತನಕ ಎಂಬ ಕರೆಕೊಟ್ಟ ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಯದ ಭಾರತೀಯ ಯಾರಿದ್ದಾರೆ, ಸ್ವಾಮಿ ವಿವೇಕಾನಂದರ ಭಾಷಣಗಳು ಅದೆಷ್ಟೋ ಯುವಕರನ್ನು ಕ್ಷಣಕಾಲ ರೋಮಾಂಚನಗೊಳಿಸಿದೆ ವಿವೇಕಾನಂದರು ಶಿಕಾಗೋ ವಿಶ್ವಧರ್ಮ ಸಂಸತ್ತಿನಲ್ಲಿ ಮಾಡಿದ ಭಾಷಣದ ಮೂಲಕ ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿಸಿ ಅದೆಷ್ಟೋ ಲೇಖನಗಳು ಪುಸ್ತಕಗಳು ಅವರನ್ನು ಕುರಿತಾದ ಅಭಿಮಾನದ ಮೆಚ್ಚುಗೆಯ ಆರಾಧನೆಯ ಧ್ವನಿಗಳು ಸ್ವಾಮಿ ವಿವೇಕಾನಂದರು ಭಾಗವಹಿಸಿದ್ದ ವೇದಿಕೆಗಳಿಂದ ವೇದಾಂತ ಕೇಸರಿಯಾಗಿ ಪಾಶ್ಚಾತ್ಯವನ್ನು ಹಿಂದೂ ಧರ್ಮದ ಬೋಧನೆಯ ಮೂಲಕ ಎಚ್ಚರಿಸಿದ ವೀರ ಸನ್ಯಾಸಿಯಾಗಿ ಹಲವರಿಗೆ ಸಮಾಜ ಸುಧಾರಕರಾಗಿ ಇನ್ನೂ ಹಲವರಿಗೆ ವಿಶ್ವಧರ್ಮ ಬೋಧಕರಾಗಿ ಕಂಡಿದ್ದಾರೆ ಎಂದರು ಹಾಗಾಗಿ ವಿದ್ಯಾರ್ಥಿಗಳು ಹಠಮಾಡಿ ಕುಳಿತು ಪಾಠಗಳನ್ನು ಓದುವುದಕ್ಕೆ ಇಚ್ಛಾಶಕ್ತಿ ನಿಮ್ಮಲ್ಲಿ ಇರಬೇಕು ಶಾಲೆಗಳಲ್ಲಿ ಉಪಾಧ್ಯಾಯರು ಹೇಳುವುದನ್ನು ಗಮನವಿಟ್ಟು ಕೇಳಿದರೆ ನಿಮ್ಮಗಳ ಜ್ಞಾನ ದಾಹವನ್ನು ತಣಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳುತ್ತಾ ಇಂತಹದ್ದೇ ಮನಸ್ಥಿತಿ ಹೊಂದಿದ್ದ ಏಕೈಕ ವ್ಯಕ್ತಿ ಸ್ವಾಮಿ ವಿವೇಕಾನಂದರು ಜೊತೆಗೆ ಅವರು ಹಾಡಿದ ಮಾತಿಗಿಂತ ಬರೆದ ಬರಹಗಳಿಗಿಂತ ಶತಪಾಲು ದೊಡ್ಡದು ಅವರ ಜೀವನ ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಎಂ ಡಿ ಶಿವಕುಮಾರ್ ಅವರು ವಿಶೇಷ ಉಪನ್ಯಾಸ ನೀಡುವುದರ ಮೂಲಕ ಶ್ರೀ ಸ್ವಾಮಿ ವಿವೇಕಾನಂದರು ನಡೆದು ಬಂದ ಇನ್ನು ಅನೇಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿದರು, ಒಟ್ಟಾರೆ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸುಮಾರು 830ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಬಣ್ಣ ಬಣ್ಣದ ಉಡುಗೆ ತೊಡುಗೆಗಳೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು. ವಿಧವೇಳೆ ಕಾಲೇಜಿನ ಉಪನ್ಯಾಸಕ ಮತ್ತು ಬೋಧಕೆತರ ಉಪನ್ಯಾಸಕರಗಳಾದ ಮಹದೇವ್ ಎಮ್ ಎನ್, ವಿಮಲಾ, ಲಾವಣ್ಯ, ಡಾ. ಚಂದ್ರು, ತೇಜು, ರೇಖಾ, ಸುಮನ್, ಹಂಸ, ಹಾಗೂ ವಿದ್ಯಾರ್ಥಿನಿ ವಿದ್ಯಾರ್ಥಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Leave a Reply

Your email address will not be published. Required fields are marked *