Turuvekere: ಕೋಳಘಟ್ಟ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸತತ ಐದು ದಿನಗಳಿಂದಲೂ ಆಹೋರಾತ್ರಿ ಧರಣಿ. 

Janataa24 NEWS DESK 

 

Turuvekere: ಕೋಳಘಟ್ಟ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸತತ ಐದು ದಿನಗಳಿಂದಲೂ ಆಹೋರಾತ್ರಿ ಧರಣಿ.

 

ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ ಕೊಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮಕಲ್ಲು ಗಣಿಗಾರಿಕೆಯ ವಿರುದ್ಧ ಕೋಳಘಟ್ಟ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ದೊಂದಿಗೆ ಮತ್ತು ತುರುವೇಕೆರೆ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಹಕಾರದೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಇದೇ ವೇಳೆ ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನ್ ಮಾತನಾಡಿ, 2019ರಿಂದ ಅಕ್ರಮ ಕಲ್ಲು ಗಣಿಗಾರಿಕೆ ಪ್ರಾರಂಭಗೊಂಡಿದ್ದು.

ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದ್ದು ಈಗಾಗಲೇ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುವ ಸಂದರ್ಭದಲ್ಲಿ ಬರುವಂತಹ ಧೂಳಿನಿಂದ ಈಗಾಗಲೇ ಓರ್ವ ವ್ಯಕ್ತಿ ಅಸ್ತಮಾ ಕಾಯಿಲೆಯಿಂದ ಮರಣ ಹೊಂದಿರುವುದು ಸಹ ತಿಳಿದುಬಂದಿದ್ದು, ಇದಕ್ಕೂ ಮುನ್ನ ಅದೆಷ್ಟೋ ಬಾರಿ ಕಲ್ಲು ಗಣಿಗಾರಿಕೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿವಿಧ ಪರ ಸಂಘಟನೆಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ಜೊತೆಗೂಡಿ ಕಲ್ಲು ಗಣಿಗಾರಿಕೆಯ ವಿರುದ್ಧ ಆಹೋರಾತ್ರಿ ಧರಣಿ ನಡೆಸಿದರು ಜೊತೆಗೆ ಕೋಳಘಟ್ಟ ಗ್ರಾಮದಿಂದ ತುರುವೇಕೆರೆ ತಾಲೂಕು ಕಚೇರಿಯವರೆಗೂ ಪಾದಯಾತ್ರೆ ಮಾಡಿ ಸುಮಾರು ದಿನಗಳ ಕಾಲ ಹಗಲು ರಾತ್ರಿ ಎನ್ನದೆ ಜಾನುವಾರುಗಳೊಂದಿಗೆ ಅಕ್ಕಪಕ್ಕ ಗ್ರಾಮಸ್ಥರುಗಳು ವಿವಿಧ ಸಂಘಟನೆಗಳು ಮತ್ತು ರಾಜಕೀಯ ಮುಖಂಡರುಗಳ ಸಹಕಾರದೊಂದಿಗೆ ಧರಣಿ ಮಾಡಿದ್ದ ಫಲವಾಗಿ ತಾತ್ಕಾಲಿಕವಾಗಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನೆಪ ಮಾತ್ರಕ್ಕೆ ಸ್ಥಗಿತಗೊಳಿಸಲಾಗಿತ್ತು.

ಇದೇ ತಿಂಗಳು ಐದನೇ ತಾರೀಖಿನಿಂದ ಕರ್ನಾಟಕ ರಾಜ್ಯ ರೈತ ಸಂಘ ವಿವಿಧ ತಾಲೂಕಿನ ಮುಖಂಡರುಗಳ ನೇತೃತ್ವದಲ್ಲಿ ತುರುವೇಕೆರೆ ತಾಲೂಕಿನ ಕೋಳಘಟ್ಟ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರುಗಳು ಮಹಿಳೆಯರು ಮತ್ತು ಮಕ್ಕಳೆನ್ನದೆ ಇದರ ಜೊತೆಗೆ ಅಹೋರಾತ್ರ ಧರಣಿಗೆ ತಾಲೂಕಿನ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಸಂಘಟನೆಯೂ ಕೂಡ ಬೆಂಬಲ ಸೂಚಿಸಿದ್ದು, ಅದರಂತೆ ಒಟ್ಟುಗೂಡಿ ಸತತವಾಗಿ ಐದು ದಿನಗಳಿಂದಲೂ ಧರಣಿ ನಡೆಸುತ್ತಿದ್ದರು ಸಹ ಇದಕ್ಕೆ ಸಂಬಂಧಪಟ್ಟಂತೆ ಯಾವೊಬ್ಬ ಜಿಲ್ಲಾಡಳಿತದ ಅಧಿಕಾರಿಗಳಾಗಲಿ ತಾಲೂಕು ಆಡಳಿತದ ಅಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸದೆ ಬೇಜವಾಬ್ದಾರಿ ಮೆರೆದಿದ್ದಾರೆ, ಈಗಾಗಲೇ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಪರಿಣಾಮವಾಗಿ ಕೊಳಗಟ್ಟ ಮತ್ತು ಅಕ್ಕಪಕ್ಕ ಗ್ರಾಮಸ್ಥರು, ಚಿಕ್ಕ ಪುಟ್ಟ ಮಕ್ಕಳು ವಯಸ್ಸಾದ ತಂದೆ ತಾಯಿಗಳು ಜಾನುವಾರುಗಳು ಇವೆಲ್ಲದಕ್ಕೂ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ ಅನಾರೋಗ್ಯ ಸಮಸ್ಯೆಗಳಿಂದ ಪರಿತಪಿಸುವಂತಾಗಿದೆ ಕಲ್ಲು ಗಣಿಗಾರಿಕೆಯಿಂದ ಬರುವಂತಹ ಧೂಳಿನ ರಾಸಾಯನಿಕಗಳಿಂದ ಈ ವರ್ಷದಲ್ಲಿ ಅಸ್ತಮಾ ಮತ್ತು ಹೃದಯಘಾತದಿಂದ ಮುಂದಿನ ದಿನಗಳಲ್ಲಿ ಎಷ್ಟು ರೈತ ವರ್ಗದ ಜನತೆ ಸಾಯುತ್ತಾರೋ ಎಂಬ ಭಯದ ವಾತಾವರಣದಲ್ಲಿ ಬದುಕುವಂತಹ ಪರಿಸ್ಥಿತಿ ಬಂದಿದೆ ಎಂದರು. ಮುಂದುವರೆದು ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಧನಂಜಯ್ ಮಾತನಾಡಿ ಈ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಬರುವಂತಹ ರಾಸಾಯನಿಕ ತುಂಬಿರುವ ಧೂಳಿನಿಂದಾಗಿ ಪ್ರಾಣಿ ಪಕ್ಷಿಗಳ ಪೀಳಿಗೆಯ ನಶಿಸಿ ಹೋಗುವಂತಹ ಸಂದರ್ಭವೂ ಸಹ ಸನಿಹದಲ್ಲಿದೆ.

ಜೊತೆಗೆ ಅಕ್ಕಪಕ್ಕದ ಕೆರೆಕಟ್ಟೆಗಳಿಗೆ ರಾಸಾಯನಿಕ ಮಿಶ್ರಣವಾಗಿ ನೀರು ಕಲುಷಿತವಾಗುವ ಸಾಧ್ಯತೆ ಕೂಡ ಹೆಚ್ಚು, ಆದರೂ ಸಹ ಕ್ರಷರ್ ಮಾಲೀಕರು ಅಧಿಕಾರ ಹಣ ರಾಜಕೀಯ ಉಪಯೋಗಿಸಿ ರೈತರ ಮೇಲೆ ದೈಹಿಕ ಹಲ್ಲೆಗಳನ್ನು ನಡೆಸಲು ಮುಂದಾಗುತ್ತಾರೆ, ಇದಲ್ಲದೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ರೈತಾಪಿ ವರ್ಗ ಅಲೆಯುವಂತೆ ಮಾಡಿದ್ದು ಬೆಳೆಗಳಿಗೂ ಹಾನಿ ಉಂಟು ಮಾಡುತ್ತಿದ್ದಾರೆ ಇವೆಲ್ಲರ ದುಷ್ಪರಿಣಾಮದಿಂದ ಅನಾಹುತಗಳಿಂದ ಎಚ್ಚೆತ್ತುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ತುರುವೇಕೆರೆ ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಕೊಳಘಟ್ಟ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಸಹಕಾರದೊಂದಿಗೆ

 

ದಿನಾಂಕ 5/5/2025 ರಿಂದ ನಿರ್ದಿಷ್ಟವಾದಿ ಆಹೋರಾತ್ರಿ ಧರಣಿ ಕುಳಿತು ನ್ಯಾಯಕ್ಕಾಗಿ ಮಹಿಳೆಯರು, ಮಕ್ಕಳು, ಚಳಿಗಾಳಿ, ಮಳೆ, ಎನ್ನದೆ ಕ್ರಿಮಿ ಕೀಟಗಳ ಭಯದೊಂದಿಗೆ ಧರಣಿ ನಡೆಸುತ್ತಿದ್ದು, ಈಗಾಗಲೇ ಅಕ್ರಮ ಕಲ್ಲು ಗಣಿಗಾರಿಕೆಯ ವಿಷಯ ಜಿಲ್ಲಾಧಿಕಾರಿಯವರಿಗೆ ತಿಳಿಸಿದ್ದು ಜಿಲ್ಲಾಧಿಕಾರಿಯವರು ತಿಪಟೂರು ಉಪ ವಿಭಾಗ ಅಧಿಕಾರಿ ಗಳಿಗೆ ಸೂಚನೆಯನ್ನು ನೀಡಿದ್ದು ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು ಅಕ್ರಮ ಕಲ್ಲು ಗಣಿಗಾರಿಕೆಯ ನಡೆಯುತ್ತಿರುವ ಸ್ಥಳವನ್ನು ಪರಿಶೀಲಿಸಿ ರೈತರ ಸಮಸ್ಯೆಗಳ ಮತ್ತು ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಕೂಡಲೇ ವಿವರಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು ಸಹ ಸತತ ಐದು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣೀಯ ಸ್ಥಳಕ್ಕೆ ಯಾವೊಬ್ಬ ತಾಲೂಕು ಮಟ್ಟದ ಅಧಿಕಾರಿಗಳಾಗಲಿ ಜಿಲ್ಲಾ ಮಟ್ಟದ ಅಧಿಕಾರಿಗಳಾಗಲಿ ಭೇಟಿ ನೀಡಿರುವುದಿಲ್ಲ ಇವರು ಲಂಚ ಎಂಬ ಹಣದ ವ್ಯಾಮೋಹಕ್ಕೆ ಏನಾದರೂ ಬಿದ್ದಿದ್ದಾರೆ ಎಂಬುದು ರೈತಾಪಿ ವರ್ಗಗಳಾದ ನಮ್ಮಗಳಿಗೆ ಅನುಮಾನ ಮೂಡಿದೆ.

 

 

ಇದಲ್ಲದೆ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳದಿಂದ ಕೆಲವೇ ದೂರದಲ್ಲಿ ಸುಪ್ರಸಿದ್ಧ ಇತಿಹಾಸ ಪ್ರಸಿದ್ಧವಾದ ಮಲ್ಲಾಘಟ್ಟ ಕೆರೆಗೆ ಈ ಕಲ್ಲು ಗಣಿಗಾರಿಕೆಯಿಂದ ಬರುವಂತಹ ಕಲುಷಿತವಾದ ನೀರನ್ನು ಕೆರೆಗೆ ಹರಿಸಿದರೆ ಆರೋಗ್ಯದ ಮೇಲೆ ಅನಾಹುತಗಳು ನಡೆಯಬಹುದು, ಹಾಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು, ರೈತ ವರ್ಗದವರು, ರಾಜಕೀಯ ಮುಖಂಡರುಗಳು, ವಿವಿಧ ಸಂಘಟನೆಗಳು,ಬಂಡವಾಳ ಶಾಹಿಗಳು ಸೇರಿ ನ್ಯಾಯಕ್ಕಾಗಿ, ಮತ್ತು ರೈತ ವಿರೋಧಿ ಶಕ್ತಿಗಳನ್ನು ಹೊರಹಾಕಿ ಮತ್ತು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಹಕರಿಸಬೇಕಾಗಿ ಸಹಕರಿಸಬೇಕೆಂದರು, ಕೂಡಲೇ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಾರದೆ ಇದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅಕ್ರಮ ತುರುವೇಕೆರೆ ತಾಲೂಕಿನ ಕೋಳಗಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ವಿರುದ್ಧ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

 

ಇದೇ ಸಂದರ್ಭದಲ್ಲಿ, ರೈತ ಮುಖಂಡರುಗಳಾದ ಉಮೇಶ್ ಕಲ್ಲು ಬೋರನಹಳ್ಳಿ, ದಲಿತ ಮುಖಂಡ ಕೇಶವ, ರಾಜೀವ, ರೈತ ಸಂಘದ ತಾಲೂಕು ಅಧ್ಯಕ್ಷರಾದ ಗಂಗಾಧರಯ್ಯ, ಚಿಕ್ಕನಾಯಕನಹಳ್ಳಿ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ತೋoಟರಾದ್ಯ, ಗೌರವಾಧ್ಯಕ್ಷರಾದ ಮಾರಿಮುತ್ತು, ರೈತ ಸಂಘದ ಮಹಿಳಾ ಮುಖಂಡರುಗಳಾದ, ಗೌರಮ್ಮ, ಶಿಲ್ಪ, ಭಾಗ್ಯಮ್ಮ ,ರೂಪ, ಕಲಾ, ಸಾವಿತ್ರಮ್ಮ, ಗಂಗಮ್ಮ, ನೂರಾರು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.

ವರದಿ: ಮಂಜುನಾಥ್  ತುರುವೇಕೆರೆ.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Gubbi: ಕೊಂಡ್ಲಿ ಗ್ರಾ, ಪಂ,ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ತೆಕ್ಕೆಗೆ.

 

 

https://youtube.com/@janataa24?si=XsFcych2GMH0O6Gv

 

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

Leave a Reply

Your email address will not be published. Required fields are marked *