Janataa24 NEWS DESK
Turuvekere: ತಹಸೀಲ್ದಾರ್ ಅಹಮದ್ ಅವರಿಂದ ಅಪರಿಚಿತ ಯುವತಿಗೆ ರಕ್ಷಣೆ.
ತುರುವೇಕೆರೆ: ತುರುವೇಕೆರೆ ತಾಲೂಕು ದಂಡಾಧಿಕಾರಿಯಾದ ಕುಂ.ಈ. ಅಹಮದ್ ಅವರಿಗೆ “ಅಪರಿಚಿತ ಯುವತಿಗೆ ರಕ್ಷಣೆ ನೀಡಿ” ಎಂದು ಮಾಯಸಂದ್ರ ಗ್ರಾಮದ ಗ್ರಾಮಸ್ಥರು ಮನವಿ ಮಾಡಿದ್ದಾರೆ. ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಕಳೆದ ತಿಂಗಳುಗಳಿಂದ ಆಕಸ್ಮಿಕವಾಗಿ ಹದಿಹರೆಯದ ಅಪರಿಚಿತ ಯುವತಿಯೊಬ್ಬಳು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು, ದಿನನಿತ್ಯ ಈಕೆ ರಸ್ತೆಯಲ್ಲಿ ಭಿಕ್ಷೆ ಬೇಡುವುದು. ತುತ್ತು ಅನ್ನ ಮತ್ತು ಬಟ್ಟೆಗಾಗಿ ಪರದಾಡುವುದು ಕಂಡು ಬಂದಿದೆ. ಆಕೆಯ ಮನಸ್ಥಿತಿ ಮತ್ತು ಆರೋಗ್ಯವು ಸಹಾ ಸರಿ ಇಲ್ಲ, ಪ್ಯಾರಲಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಅವಳ ವಾರಸುದಾರರು ಸಹ ಇಂದಿಗೂ ಹುಡುಕಿಕೊಂಡು ಬಂದಿಲ್ಲ, ಪ್ರತಿದಿನ ರಾತ್ರಿ ಆಗುತ್ತಿದ್ದಂತೆ ಮಾಯಸಂದ್ರದ ಬಸ್ ತಂಗುದಾಣದಲ್ಲಿ ಮಲಗುತ್ತಾಳೆ.
ಬೆಳಗ್ಗೆಯಿಂದ ಭಿಕ್ಷೆ ಬೇಡಿದ ಹಣವನ್ನು ಯಾರೋ ಅಪರಿಚತರು ಬಂದು ಕಿತ್ತುಕೊಂಡು ಹೋಗುತ್ತಾರೆ. ರಾತ್ರಿ ವೇಳೆ ಕುಡುಕರು ಆಕೆಯನ್ನು ಎಳೆದುಕೊಂಡು ಹೋಗುವ ಲಕ್ಷಣಗಳು ಕಂಡುಬರುತ್ತಿವೆ, ಕಾಲ ಸ್ಥಿತಿ ಸರಿ ಇಲ್ಲದ ಕಾರಣ ಹೆಣ್ಣು ಮಗಳಿಗೆ ಏನಾದರೂ ತೊಂದರೆಗಳು ಆದರೆ ಯಾರು ಹೊಣೆ ಎಂದು ಅಭಿಪ್ರಾಯಪಟ್ಟ ಗ್ರಾಮಸ್ಥರು ಕೂಡಲೇ ಸಂಬಂಧಪಟ್ಟ ತಾಲೂಕು ಆಡಳಿತ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆಯವರು ಯುವತಿಗೆ ಸೂಕ್ತ ರಕ್ಷಣೆ, ವಾರಸುದಾರರನ್ನು ಪತ್ತೆ ಮಾಡಿ,
ಪೋಷಕರಿಗೋ ಅಥವಾ ಬಾಲ ಭವನದ ವಶಕ್ಕೆ ನೀಡಬೇಕೆಂದು ಮಾಯಸಂದ್ರ ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಪತ್ರಿಕಾ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ. ಕೂಡಲೇ ತಾಲೂಕು ದಂಡಾಧಿಕಾರಿ ಅಹಮದ್ ರವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಆಶಾ ಎಂಬ ಯುವತಿಯನ್ನೂ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ, ಒಟ್ಟಾರೆ ಆಶಾ ಎಂಬ ಯುವತಿಯ ರಕ್ಷಣೆ ಮಾಡಿ ಶಿರಾ ತಾಲೂಕಿನ ಕೋರಾ ದಲ್ಲಿರುವ ನಿರಾಶ್ರಿತ ಆಶ್ರಮಕ್ಕೆ ಕಳುಹಿಸಿಕೊಡಲಾಯಿತು, ಇದೇ ಸಂದರ್ಭದಲ್ಲಿ ಟಿ ಹೆಚ್ ಓ ರಂಗನಾಥ್, ಶ್ರೀಮತಿ ಪೂಜಾ, ಕೃಷಿ ಸಹಾಯಕ ನಿರ್ದೇಶಕರು ತುರುವೇಕೆರೆ, ಶ್ರೀಮತಿ ಲೀಲಾವತಿ ಶಿಶು ಅಭಿವೃದ್ಧಿ ಯೋಜನೆ ತುರುವೇಕೆರೆ ಮತ್ತು ಮಾಯಸಂದ್ರ ಮೇಲ್ವಿಚಾರಕಿ , ಸಖಿ ಒನ್ ಸ್ಟಾಪ್ ಸೆಂಟರ್ ತಿಪಟೂರಿನ ಘಟಕ ಆಡಳಿತ ಅಧಿಕಾರಿ ರಶ್ಮಿ, ಆಪ್ತ ಸಮಾಲೋಚಕಿ ಮಮತಾ, ತಹಸೀಲ್ದಾರ್ ವಾಹನ ಚಾಲಕ ರವಿಕುಮಾರ್, ಉಪಸ್ಥಿತರಿದ್ದರು, ಒಟ್ಟಾರೆ ಆಶಾ ಎಂಬ ಯುವತಿಯ ರಕ್ಷಣೆಗೆ ಮನವಿ ಮಾಡಿ ಸಹಕರಿಸಿದ ಗ್ರಾಮ ಪಂಚಾಯಿತಿಯ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಶಾ – ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಸ್ಥಳೀಯ ಗ್ರಾಮಸ್ಥರಿಗೆ ಪತ್ರಿಕಾ ಮಾಧ್ಯಮದ ಪರವಾಗಿ ಧನ್ಯವಾದಗಳು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.