Turuvekere: DSS ಮತ್ತು ವಿವಿಧಪರ ಸಂಘಟನೆ ವತಿಯಿಂದ ವಕೀಲ ರಾಕೇಶ್ ವಿರುದ್ಧ ಅಕ್ಟೋಬರ್ 13 ರಂದು ಬೃಹತ್ ಪ್ರತಿಭಟನೆ.

Janataa24 NEWS DESK 

 

Turuvekere: DSS ಮತ್ತು ವಿವಿಧಪರ ಸಂಘಟನೆ ವತಿಯಿಂದ ವಕೀಲ ರಾಕೇಶ್ ವಿರುದ್ಧ ಅಕ್ಟೋಬರ್ 13 ರಂದು ಬೃಹತ್ ಪ್ರತಿಭಟನೆ.

 

ತುರುವೇಕೆರೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಗವಾಯಿ ಅವರ ಮೇಲೆ ಹಿರಿಯ ವಕೀಲನೊಬ್ಬ ಶೂ ಎಸೆದಿದ್ದು ಇದು ಸಂವಿಧಾನಕ್ಕೆ ಮಾಡಿದಂತ ಅಪಚಾರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ತಾಲೂಕು ಘಟಕದ ಅಧ್ಯಕ್ಷ ಬಿ ಆರ್ ಕೃಷ್ಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ಅವರು ದಿನಾಂಕ 13.10:25 ರಂದುಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ವರೆವಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿ.

ಇದೊಂದು ಘೋರ ಕೃತ್ಯ ಖಂಡನೀಯವಾಗಿದ್ದು ಇದು ಸಮ ಸಮಾಜ ತಲೆ ತಗ್ಗಿಸುವಂತಹ ಹಾಗೂ ಸಂವಿಧಾನದ ಮೇಲೆ ಆದಂತಹ ದಾಳಿಯಾಗಿದ್ದು 144 ಕೋಟಿ ಭಾರತೀಯರ ಮೇಲೆ ಆದಂತಹ ಅಪಮಾನ ತಾಲೂಕಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

 

ಕುರುಬ ಸಮಾಜದ ಮುಖಂಡ ಕಲ್ಕೆರೆ ರಾಘು ಮಾತನಾಡಿ ರಾಷ್ಟ್ರದಲ್ಲಿ ಎಲ್ಲಾ ಜಾತಿ ವರ್ಗಗಳಲ್ಲಿಯೂ ತುಂಬಾ ಬಡವರು ಇದ್ದಾರೆ ಅವರುಗಳಿಗೆ ಏನಾದರೂ ರಕ್ಷಣೆ ಸಿಗುತ್ತಿದೆ ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದಂತ ಸಂವಿಧಾನದಿಂದ ಮಾತ್ರ, ವಿಪರ್ಯಾಸವೆಂದರೆ ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದಾಗ ದಲಿತರು ಮಾತ್ರ ಹೋರಾಟ ಮಾಡುತ್ತಾರೆ, ಅಪಾಯದ ಅಂಚಿನಲ್ಲಿ ಇರುವ ಸಂವಿಧಾನದ ರಕ್ಷಣೆಗೆ ಎಲ್ಲಾ ಭಾರತೀಯ ಮುಂದಾಗಬೇಕು ಹಿರಿಯ ವಕೀಲರಾಗಿ ಈ ವ್ಯಕ್ತಿ ಮಾಡಿರುವ ಕೃತ್ಯ ಘನ ಘೋರವಾದಂತದ್ದು ಇದು ಖಂಡನೀಯ.

ಈತನ ತಲೆಯಲ್ಲಿ ಅಜ್ಞಾನ ತುಂಬಿಕೊಂಡಿದ್ದು ಈ ರೀತಿಯ ಅಪಚಾರ ಮಾಡಿದ್ದಾನೆ ಬಹುಸಂಖ್ಯಾತ ದೇಶದ ದಲಿತರು,ಹಿಂದುಳಿದವರು ಸ್ವಾಭಿಮಾನದಿಂದ ಬದುಕಬೇಕು ಎಲ್ಲರಿಗೂ ಗೌರವದಿಂದ ಬದುಕುವಂತೆ ಮಾಡಬೇಕು,ಈ ರೀತಿ ನಡವಳಿಕೆಗಳನ್ನು ಪ್ರತಿಯೊಬ್ಬರು ವಿರೋಧಿಸಬೇಕು ಇದರ ವಿರುದ್ಧ ಹೋರಾಟಕ್ಕೆ ಜಾತ್ಯತೀತವಾಗಿ ಕೈ ಜೋಡಿಸಬೇಕು ನಾನು ಕೂಡಾ ಕುರುಬ ಸಮಾಜದ ಪರವಾಗಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದೇನೆ ಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಬೀಚನಹಳ್ಳಿ ರಾಮಕೃಷ್ಣ,ತಾಲೋಕು ಛಲವಾದಿ ಮಹಾಸಭಾ ಅಧ್ಯಕ್ಷ ಡೊಂಕಿಹಳ್ಳಿ ರಾಮಣ್ಣ, ಟೌನ್ ಬ್ಯಾಂಕ್ ನಿರ್ದೇಶಕ ಬಡಾವಣೆ ಶಿವರಾಜ್,ಬಿಗನೇನಹಳ್ಳಿ ಪುಟ್ಟರಾಜು, ಪುರ ರಾಮಚಂದ್ರಯ್ಯ, ಜಯ ಕರ್ನಾಟಕ ವೇದಿಕೆಯ ವೆಂಕಟೇಶ್, ಆಟೋ ಸಂಘದ ಅಧ್ಯಕ್ಷ ಗಂಗಾಧರ್, ಬೀಚನಹಳ್ಳಿ ಮಹಾದೇವಯ್ಯ, ಹೆಗ್ಗೆರೆ ನರಸಿಂಹಯ್ಯ, ಬುಗುಡನಹಳ್ಳಿ ರಂಗನಾಥ್, ಬುಗುಡನಹಳ್ಳಿ ರವೀಶ್, ಮಾಚೇನಹಳ್ಳಿಮಂಜುಳಾ ,ನಂದಿನಿ, ಸಾವಿತ್ರಮ್ಮ, ವಸಂತ್ ಬೊಮ್ಮೇನಹಳ್ಳಿ ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು

 

ವರದಿ : ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *