JANATAA24 NEWS DESK
Tumkur: ತ್ರೋಬಾಲ್ ಚಾಂಪಿಯನ್-ಶಿಪ್ ನಲ್ಲಿ ಭಾರತಕ್ಕೆ ಕೀರ್ತಿ ತಂದ ತುರುವೇಕೆರೆ ಉಲ್ಲಾಸ್. ಸರ್ಕಾರದಿಂದ ಸಿಗುವುದೇ ಸ್ಪೋರ್ಟ್ಸ್ ಕೋಟಾದ ಅವಕಾಶ.

ತುರುವೇಕೆರೆ: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತೂಬಿನಕಟ್ಟೆ ಗ್ರಾಮದ ವಾಸಿಗಳಾದ ನಾರಾಯಣಪ್ಪ ಜಲಜಾಕ್ಷಿ ದಂಪತಿಗಳ ಮಗನಾದ ಉಲ್ಲಾಸ್ ಎಂಬ ಯುವಕ ತನ್ನ ಕಠಿಣ ಪರಿಶ್ರಮ ಮತ್ತು ಅಚಲ ಸಂಕಲ್ಪದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಗೋಲ್ಡನ್ ಮೆಡಲ್ ಗೆದ್ದಿರುವುದು ಪ್ರೇರಣದಾಯಕ ಸಾಧನೆಯಾಗಿದೆ,
ಬಾಲ್ಯದಿಂದಲೇ ಕ್ರೀಡೆಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಉಲ್ಲಾಸ್, ಅಜ್ಜ ಅಜ್ಜಿ ಅಪ್ಪ ಅಮ್ಮನ ಕಟ್ಟುನಿಟ್ಟಿನ ಶಿಸ್ತು ಮತ್ತು ಮಾರ್ಗದರ್ಶನದಲ್ಲಿ ಬೆಳೆದು. ಅವರ ಹಿತವಚನಗಳು ಜೀವನ ಮೌಲ್ಯಗಳ ಸ್ಪೂರ್ತಿಗೆ ಶಕ್ತಿಯಾಗಿದ್ದು, ಇಂದಿಗೂ ಅವರ ಜೊತೆ ಕಳೆದ ಕ್ಷಣಗಳನ್ನು ಸ್ಮರಿಸುತ್ತಾರೆ. ಕುಟುಂಬದ ಬೆಂಬಲವೂ ಇವರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಉಲ್ಲಾಸ್ ತನ್ನ 10ನೇ ತರಗತಿಯನ್ನು SBG ವಿದ್ಯಾಲಯ ಮಾಯಸಂದ್ರ ಟಿಬಿ ಕ್ರಾಸ್ ನಲ್ಲಿ ಪೂರ್ಣಗೊಳಿಸಿ, ಶಾಲೆಯಲ್ಲಿ ಓದುತ್ತಿದ್ದಾಗಲೇ ಕಬಡ್ಡಿ , ಖೋ-ಖೋ, ಥ್ರೋ ಬಾಲ್ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೊದಲು ಮತ್ತು ದ್ವಿತೀಯ ಸ್ಥಾನಗಳನ್ನು ಗಳಿಸುತ್ತಿದ್ದರು. ವಿಶೇಷವಾಗಿ ಥ್ರೋ ಬಾಲ್ ನಲ್ಲಿ ಹೆಚ್ಚಿನ ಅವಕಾಶಗಳು ದೊರಕಿದ ಹಿನ್ನೆಲೆಯಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡೂ ನಂತರದ ವಿದ್ಯಾಭ್ಯಾಸ. ಪಿಯುಸಿಯನ್ನು ಶ್ರೀ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿ,ತುಮಕೂರು ವಿಶ್ವವಿದ್ಯಾನಿಲಯ ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜ್ ತಿಪಟೂರಿನಲ್ಲಿ ಬಿಕಾಂ ಪದವಿ ಪಡೆದಿದ್ದಾನೆ, ಓದು ಮತ್ತು ಕ್ರೀಡೆ ಎರಡನ್ನೂ ಸಮನ್ವಯಗೊಳಿಸಿಕೊಂಡು
ಇಂಟರ್ ಕಾಲೇಜ್ ಯುನಿವರ್ಸಿಟಿ ತುಮಕೂರು ನಲ್ಲಿ, ಪ್ರಥಮ ಸ್ಥಾನ ಪಡೆದು ನಂತರ ಸುವರ್ಣ ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ ಗಮನ ಸೆಳೆದು. ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ . 2024-2025ರ ಫೆಬ್ರವರಿ 4th to 7th ರವರೆಗೆ ಮಧ್ಯಪ್ರದೇಶ ಭೂಪಾಲ್ ನಲ್ಲಿ ನಡೆದ 46 ಸೀನಿಯರ್ ನ್ಯಾಚುರಲ್ ತ್ರೋಬಾಲ್ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು,ಇದಾದ ಬಳಿಕ ಉಲ್ಲಾಸ್ ರವರಿಗೆ ಭಾರತ ತಂಡದಲ್ಲಿ ಅವಕಾಶ ದೊರಕಿತ್ತು,ಸುವರ್ಣ ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ನಲ್ಲಿ ಕೋಚ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಟೂರ್ನಿಯಲ್ಲಿ ನೇಪಾಳ ವಿರುದ್ಧವೇ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿ ಗೋಲ್ಡ್ ಮೆಡಲ್ ಸಾಧಿಸಿತು, ಭಾರತದ ತಂಡದ ಗೆಲುವಿನಲ್ಲಿ ಉಲ್ಲಾಸ್ ರವರ ಪಾತ್ರ ಪ್ರಮುಖವಾದದ್ದ ಎನ್ನಬಹುದು ಈ ಗೆಲುವು ಭಾರತ ತಂಡದ ಸಂಪೂರ್ಣ ಪರಿಶ್ರಮದ ಪಲವೇ ಸರಿ,ಒಟ್ಟಾರೆ ಉಲ್ಲಾಸ್ ರವರ ಜೀವನದ ದೊಡ್ಡ ಕನಸು ಭಾರತವನ್ನು ಪ್ರತಿನಿಧಿಸುವುದು ಎಂಬುದು ಮೇಲ್ನೋಟಕ್ಕೆ ಕಾಣ ತೊಡಗಿದ್ದು ಕರ್ನಾಟಕ ಸರ್ಕಾರವೇನಾದರೂ ಸ್ಪೋರ್ಟ್ಸ್ ಕೋಟಾದಲ್ಲಿ, ಅಥವಾ ಸ್ಪಾನ್ಸರ್ಶಿಪ್ ಕಲ್ಪಿಸಿದರೆ ಭಾರತ ದೇಶದ ಪರವಾಗಿ ಪ್ರತಿನಿಧಿಸಲು ಸಿದ್ಧವಾಗಿದ್ದಾನೆ, ಭಾರತದ ತಂಡದಲ್ಲಿ ಪ್ರತಿನಿಧಿಸಿ ಚಿನ್ನದ ಪದಕ ಪಡೆದ ಉಲ್ಲಾಸ್ ಗೆ ತುರುವೇಕೆರೆ ತಾಲೂಕಿನ ನಿಕಟಪೂರ್ವ ಶಾಸಕ ಮಸಾಲ ಜೈರಾಮ್ ತಮ್ಮ ಫಾರಂ ಹೌಸ್ ನಲ್ಲಿ ಅಭಿನಂದಿಸಿದ್ದಾರೆ,
ಇದೇ ವೇಳೆ ಮಾತನಾಡಿದ ಉಲ್ಲಾಸ್ ,ನನ್ನ ಈ ಸಾಧನೆಗೆ ಬೆಂಬಲವಾಗಿ ನಿಂತ ನನ್ನ ಕುಟುಂಬಸ್ಥರು ಸ್ನೇಹಿತರು ಹಾಗೂ ನನ್ನ ಕೋಚ್ಗಳಾದ “ಗಿರಿಧರ್ , ಉದಯ್, ಕುಮಾರ್ , ಹಂಸರೇಖಾ ,ಕಾಂತರಾಜು ” ಹಾಗೂ ಎಲ್ಲಾ ಶಿಕ್ಷಕ ವೃಂದಕ್ಕೆ ಮಾಧ್ಯಮದ ಮೂಲಕ ಕೃತಜ್ಞತೆ ಸಲ್ಲಿಸಿದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.