Tumkur Metro: ಬಜೆಟ್ ನಲ್ಲಿ ಮಹತ್ವದ ಘೋಷಣೆ ತುಮಕೂರಿನವರೆಗು ಮೆಟ್ರೋ ಗೆ ಚಾಲನೆ

ಗೃಹ ಸಚಿವ ಡಾ. ಜಿ ಪರಮೇಶ್ವರ್ ರವರ ಕನಸು ನನಸು.

bangaloretotumkurmetro7211543835244509594

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಜನರ ಒಡನಾಡಿಯಾಗಿರುವ ನಮ್ಮ ಮೆಟ್ರೋ ಕುರಿತು ಮಹತ್ವದ ಘೋಷಣೆ ಹೊರಬಿದ್ದಿದೆ. ಈ ಕುರಿತು ನಿಮಗೆ ಎಂದೇ ವಿವರ ಇಲ್ಲಿದೆ.

ಕರ್ನಾಟಕ ಬಜೆಟ್ 2024ರಲ್ಲಿ ಮೆಟ್ರೋ ರೈಲಿನ ಕುರಿತು ಮಹತ್ವದ ಘೋಷಣೆ ಮಾಡಲಾಗಿದೆ. ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸೇವೆ ಆರಂಭದ ಕುರಿತು ಬಜೆಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಬೆಂಗಳೂರು BIEC ಯಿಂದ ತುಮಕೂರಿನವರೆಗೆ ನಮ್ಮ ಮೆಟ್ರೋ ಸ್ಥಾಪನೆಗೆ ಕರ್ನಾಟಕ ಬಜೆಟ್ನಲ್ಲಿ ಪ್ರಸ್ತಾವನೆ ಮಾಡಲಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ನಮ್ಮ ಮೆಟ್ರೋ ವಿಸ್ತರಣೆಯ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಾಡಲಾಗಿದೆ.

ಅಲ್ಲದೇ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿಯವರೆಗೆ ನಮ್ಮ ಮೆಟ್ರೋ ಸ್ಥಾಪನೆಗೆ ಸಹ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡಲಾಗಿದೆ.

ರಾಜ್ಯ ರಾಜಧಾನಿಗೆ ಕರ್ನಾಟಕ ಬಜೆಟ್‌ನಲ್ಲಿ (Karnataka Budget 2024) ಭರ್ಜರಿ ಬಹುಮಾನವೇ ದೊರೆತಿದೆ. ಬೆಂಗಳೂರನ್ನು (Bengaluru News) ಆಧರಿಸಿ ಹಲವು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ಬೆಂಗಳೂರಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡಲು ಜಪಾನ್ ಸರ್ಕಾರದ ಸಹಯೋಗದೊಂದಿಗೆ ನಗರದ 28 ಜಂಕ್ಷನ್ ನಲ್ಲಿ Area Traffic Signal Control System ಅಳವಡಿಕೆ ಮಾಡುವ ಕುರಿತು ಸಹ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ನಮ್ಮ ಮೆಟ್ರೋದ ಫೇಸ್ 3ಗೆ 15,611 ಕೋಟಿ ಅನುದಾನ ಮೀಸಲು ಇಡುವ ಕುರಿತು ಸಹ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ಜಾಲ ಇನ್ನಷ್ಟು ವಿಸ್ತರಣೆ ಆಗುವ ಎಲ್ಲ ಲಕ್ಷಣಗಳು ದಟ್ಟವಾಗಿದೆ.

Leave a Reply

Your email address will not be published. Required fields are marked *