Janataa24 NEWS DESK

ಪ್ರತಿ ಕ್ರಿಕೆಟಿಗನ ಕನಸು, ಟೀಮ್ ಇಂಡಿಯಾ(Team India) ಪರ ಆಡುವುದು. ಅದಕ್ಕಿಂತ ಮುಖ್ಯವಾಗಿ ಟೆಸ್ಟ್ ತಂಡವನ್ನ ಪ್ರತಿನಿಧಿಸುವುದು. ಅಂಥಹ ಕನಸಿನ ಟೆಸ್ಟ್ ಕ್ಯಾಪ್ ಪಡೆದುಕೊಳ್ಳುವುದು ಎಂಥಹ ಕ್ರಿಕೆಟರ್ಗೂ ಭಾವನಾತ್ಮಕ ಕ್ಷಣವಾಗಿರುತ್ತೆ. ಅದ್ರಲ್ಲೂ ದಿಗ್ಗಜ ಅನಿಲ್ ಕುಂಬ್ಳೆ(Anil Kumble) ಯಾವಾಟ ಟೆಸ್ಟ್ ಕ್ಯಾಪ್ ನೀಡಿದ್ರೂ, ಆ ಅವಿಸ್ಮರಣೀಯ ಗಳಿಗೆಯಲ್ಲಿ ಸರ್ಫರಾಜ್ ಖಾನ್ (SarfarazKhan) ಕಣ್ಣಲ್ಲಿ ನೀರು ತುಂಬಿತ್ತು.
ರಾಜ್ಕೋಟ್ ಟೆಸ್ಟ್ ಪಂದ್ಯದ(Test Cricket) ಮೊದಲ ದಿನದಾಟ ಎಲ್ಲರ ಗಮನ ಸೆಳೆದಿದ್ದು ಸರ್ಫರಾಜ್ ಖಾನ್. ಪಂದ್ಯದ ಆರಂಭಕ್ಕೂ ಮುನ್ನ ಡೆಬ್ಯು ಕ್ಯಾಪ್ ಪಡೆದು ಕನಸು ನನಸಾಗಿಸಿಕೊಂಡ ಸರ್ಫರಾಜ್, ಬ್ಯಾಟಿಂಗ್ನಲ್ಲೂ ಮಿಂಚಿದ್ರು. ಆದ್ರೆ, ಬ್ಯಾಡ್ ಲಕ್ ಶತಕದ ಕನಸು ನನಸಾಗಲಿಲ್ಲ.
ನಂಬರ್ 311.. ಸರ್ಫರಾಜ್ ಖಾನ್ರ ಟೆಸ್ಟ್ ಕ್ಯಾಪ್ ನಂಬರ್. ಟೆಸ್ಟ್ ಕ್ಯಾಪ್ ಪಡೆದ ಈ ಕ್ಷಣ ಸರ್ಫರಾಜ್ ಖಾನ್ ಪಾಲಿನ ಅವಿಸ್ಮರಣೀಯ ಕ್ಷಣ. ಅಷ್ಟೇ ಅಲ್ಲ, ವರ್ಷಾನುಗಟ್ಟಲೆ ಅವಕಾಶಕ್ಕಾಗಿ ಕಾದು ಕುಳಿತಿದ್ದ ಮುಂಬೈಕರ್ನ ಕನಸು ನನಸಾದ ಕ್ಷಣ. ಮೂರ್ನಾಲ್ಕು ವರ್ಷಗಳ ಹಿಂದೆಯೇ ಟೀಮ್ ಇಂಡಿಯಾ ಈ ಮುಂಬೈಕರ್ಗೆ ಈ ಕ್ಯಾಪ್ ಸಿಗಬೇಕಿತ್ತು. ಆದ್ರೆ, ಲೇಟಾದ್ರೂ ಸರ್ಫರಾಜ್ಗೆ, ನಿನ್ನೆ ತನ್ನ ಕನಸಿನ ಟೆಸ್ಟ್ ಕ್ಯಾಪ್ ಸಿಕ್ಕೇ ಬಿಡ್ತು.
ಅನಿಲ್ ಕುಂಬ್ಳೆಯಿಂದ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ಸರ್ಫರಾಜ್ ಮಾತ್ರವೇ ಅಲ್ಲ. ಈ ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾದ ತಂದೆ ನೌಶಾದ್ ಖಾನ್ ಹಾಗೂ ಪತ್ನಿ ರೊಮಾನಾ ಜಹೂರ್ ಕಣಲ್ಲಿ ನೀರು ಜಿನುಗಿತ್ತು. ಅತ್ತ ಟೆಸ್ಟ್ ಕ್ಯಾಪ್ ಸ್ವೀಕರಿಸಿದ ತಕ್ಷಣ ಸರ್ಫರಾಜ್ಗೆ ನೆನಪಾಗಿದ್ದು ಅಪ್ಪ. ಹೌದು! ತನ್ನ ಜೀವನಕ್ಕೆ ಬೆಂಬಲವಾಗಿ ನಿಂತಿದ್ದ ಅಪ್ಪನ ಬಳಿ ಓಡೋಡಿ ಬಂದ ಸರ್ಫರಾಜ್, ತಂದೆಗೆ ಪ್ರೀತಿಯ ಅಪ್ಪುಗೆ ನೀಡಿದ್ರು. ಟೆಸ್ಟ್ ಕ್ಯಾಪ್ ತಂದೆ ಕೈಗೆ ನೀಡಿದ್ರು. ಆ ಹೆಮ್ಮೆಯ ಕ್ಷಣ ಬಿಕ್ಕಿ ಬಿಕ್ಕಿ ಆಳುತ್ತಲೇ ಟೆಸ್ಟ್ ಕ್ಯಾಪ್ಗೆ ಮುತ್ತಿಟ್ಟ ತಂದೆ ನೌಶದ್, ಹೃದಯ ತುಂಬಿತ್ತು. ಈ ಕ್ಷಣ ನೋಡುಗರ ಕಣ್ಣಂಚಲ್ಲಿ ನೀರು ತರಿಸಿತ್ತು. ಈ ವೇಳೆ ಅಲ್ಲೇ ಇದ್ದ ಪತ್ನಿ ರೊಮಾನಾ ಜಹೂರ್, ತಡೆತಲಾಗದೇ ಬಿಕ್ಕಿ ಬಿಕ್ಕಿ ಅತ್ತರು. ಸರ್ಫರಾಜ್, ಪತ್ನಿಯ ಕಣ್ಣೀರು ವರೆಸಿದ್ದು ಎಲ್ಲರ ಮನ ಕಲುಕಿತ್ತು.
ಮೂರ್ನಾಲ್ಕು ವರ್ಷಗಳ ಕಾಲ ಒಂದೇ 1 ಅವಕಾಶಕ್ಕಾಗಿ ಕಾದಿದ್ದ ಸರ್ಫರಾಜ್, ಸಿಕ್ಕ ಅವಕಾಶವನ್ನ ಸಮರ್ಪಕವಾಗಿ ಬಳಸಿಕೊಂಡರು. ಮೊದಲ ಪಂದ್ಯ ಎಂಬ ಗುಂಗಿಲ್ಲದೇ ನಿರ್ಭಯವಾಗಿ ಬ್ಯಾಟ್ ಬೀಸಿದ ಪರಿ ಅಚ್ಚರಿಗೊಳಿಸಿತ್ತು. ಇಂಗ್ಲೆಂಡ್ ತಂಡದ ಅಟ್ಯಾಕಿಂಗ್ ಸ್ಟ್ರೈಲ್ ಆಫ್ ಕ್ರಿಕೆಟ್ಗೆ ಆಕ್ರಮಣಕಾರಿ ಬ್ಯಾಟಿಂಗ್ ಉತ್ತರ ನೀಡಿದ್ರು. ಕೇವಲ 48 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ್ರು. ಆದ್ರೆ, ದುರಾದೃಷ್ಟದ ರೀತಿಯಲ್ಲಿ ರನೌಟ್ ಬಲೆಗೆ ಸಿಲುಕಿ ವಿಕೆಟ್ ಒಪ್ಪಿಸಿದ್ರು.
ಸರ್ಫರಾಜ್ ಡೆಬ್ಯೂ ಕ್ಷಣ ತಂದೆ ನೌಶಾದ್ ಖಾನ್ ಹಾಗೂ ಪತ್ನಿ ರೊಮಾನಾ ಜಹೂರ್ರನ್ನ ಮಾತ್ರವೇ ಅಲ್ಲ, ಟೀಮ್ ಇಂಡಿಯಾ ನಾಯಕ ರೋಹಿತ್ ಮನಸನ್ನು ಕರಗಿಸಿತ್ತು. ಬಿಕ್ಕಿ ಬಿಕ್ಕಿ ಕಣ್ಣೀರಾಕುತ್ತಿದ್ದ ನೌಶಾದ್ ಖಾನ್ ಹಾಗೂ ಪತ್ನಿ ಬಳಿ ತೆರಳಿದ ರೋಹಿತ್, ಪ್ರೀತಿಯ ಅಪ್ಪುಗೆ ನೀಡುವ ಸಮಾಧಾನ ಪಡಿಸಿದ್ದು ವಿಶೇಷವಾಗಿತ್ತು.