ನಲಗಾನಹಳ್ಳಿಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಅದ್ದೂರಿಯಾಗಿ ಸಂವಿಧಾನ ಜಾಗೃತಿ ಜಾಥ ನಡೆಸಿ ಮುಕ್ತಾಯ ಸಮಾರಂಭ ಮುಗಿಸಿ
ತಾಲ್ಲೂಕಿನ ಶುಕ್ರವಾರದಂದು ಜಾಥದ ಕೊನೆ ದಿನವಾದ ತಾಲೂಕಿನ ಅರಸೀಕೆರೆ, ಮಂಗಳವಾಡ .ಕೆ.ಟಿ.ಹಳ್ಳಿ ಬ್ಯಾಡ್ನೂರು. ಕನ್ನೆಮೇಡಿ ಪಂಚಾಯತಿ ನಂತರ ಕೊನೆಯ ನೆಲೆಗಾನಹಳ್ಳಿಯಲ್ಲಿ ಗ್ರಾಮಸ್ಥರು ಅಧಿಕಾರಿಗಳು ಅದ್ದೂರಿಯಾಗಿ ಗ್ರಾಮಸ್ಥರು ಹಾಗೂ ಮಕ್ಕಳು ಶಾಲಾ ಮಕ್ಕಳು ಅಂಗನವಾಡಿ ಕಾರ್ಯಕರ್ತರು ಬರಮಾಡಿಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿ ಗಮನಳೆಯಿತ್ತು ಜಾಥ ಗ್ರಾಮ ಪಂಚಾಯಿತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಗೆ ಶುಕ್ರವಾರ ವಿವಿಧ ವೇಷಭೂಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಸ್ವಾಗತ ದೊರೆಯಿತು.
ನಲಗಾನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ
ಅಧ್ಯಕ್ಷ ವೆಂಕಟೇಶಪ್ಪ ಮಾತನಾಡಿ ನಮ್ಮ ಸಂವಿಧಾನವು ನಮ್ಮ ದೇಶದ ಶ್ರೇಷ್ಠ ಗ್ರಂಥ ಹಾಗ ರಕ್ಷಾ ಕವಚವಾಗಿದೆ. ನಮಗೆ ಎಲ್ಲಾ ಹಕ್ಕುಗಳನ್ನು ಹಾಗೂ ಕರ್ತವ್ಯಗಳನ್ನು ಕೊಟ್ಟಿದೆ. ನಮ್ಮ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸರ್ವರಲ್ಲೂ ಸಮಾನತೆ ಕಾಪಾಡಲು ಪೂರಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ವಿ.ಎಸ್.ವಿಶ್ವನಾಥ್ ಗೌಡ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮುರುಳೀಧರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಇ.ಮಲ್ಲಿಕಾರ್ಜುನ್, ಗ್ರಾ.ಪಂ.ಅಧ್ಯಕ್ಷೆ ವೆಂಕಟೇಶಪ್ಪ ಆರ್, ಉಪಾಧ್ಯಕ್ಷ ದುಗ್ಗಮ್ಮ. ಸದಸ್ಯರಾದ ಲಿಂಗ ನಾಯಕ .ಅಂಬುಜಾಕ್ಷಿ ಕುರುಬರಹಳ್ಳಿ .ದುಗ್ಗಪ್ಪ ನೆಲಗನಹಳ್ಳಿ. ಕಾಂತಮ್ಮ ನಲಗಾನಹಳ್ಳಿ. ಮುಖಂಡ ಕೋಟೇಶ್ವರ ರೆಡ್ಡಿ. ಪಿಡಿಒ ಈಶ್ವರ್ ಪ್ರಸಾದ್ . ಕಾರ್ಯದರ್ಶಿ ರಾಮಾಂಜಿನಮ್ಮ ಬಿಲ್ ಕಲೆಕ್ಟರ್ ಸುಬ್ಬರಾಯಪ್ಪ ಹಾಗೂ ಗ್ರಾ.ಪಂ.ಸದಸ್ಯರು, ಸಂಘಟನೆಗಳ ಮುಖಂಡರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ವರದಿ :ಇಮ್ರಾನ್ ಉಲ್ಲಾ.ಪಾವಗಡ