Janataa24 NEWS DESK
Tumkur: ತುರುವೇಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪೂರ್ವಭಾವಿ ಸಭೆ.
ತುರುವೇಕೆರೆ ಸಮುದಾಯ ಭವನದಲ್ಲಿ ಪೂರ್ವಭಾವಿ ಸಭೆ ಆಯೋಜನೆ.
ಪೂರ್ವಭಾವಿ ಸಭೆಯಲ್ಲಿ ಗೃಹಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್ ಭಾಗಿಯಾಗಿದ್ದರು.

ಇದೇ ವೇಳೆ ಗೃಹ ಮಂತ್ರಿ ಜಿ ಪರಮೇಶ್ವರ್(G Parameshwar)ಅವರು ಮಾತನಾಡಿ, ಈ ತಾಲೂಕಿನಲ್ಲಿ ಈ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಯಾದಂತ ಮುಧ್ದ ಹನುಮೆಗೌಡ ಅವರಿಗೆ ಅತಿ ಹೆಚ್ಚು ಮತಗಳನ್ನ ನೀವುಗಳು ನೀಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಅದರ ಜೊತೆಗೆ ಸಂವಿಧಾನವನ್ನ ಬದಲಾವಣೆ ಮಾಡುತ್ತೇನೆಂದು ಹೊರಟ ಅವಿವೇಕಿ, ನಾಲಾಯಕ್ ಎಂಬ ಬಿಜೆಪಿ ಮುಖಂಡ ಸಂವಿಧಾನ ಬದಲಾವಣೆ ಮಾಡುವವರೆಗೂ ನಾವೇನು ಕುಳಿತುಕೊಂಡು ಸುಮ್ಮನೆ ಇರುತ್ತೇವೆ ಎಂದು ತಿಳಿದುಕೊಂಡು ಬಿಟ್ಟಿದ್ದಾನೆ, ಅದು ಯಾವುದೇ ಕಾರಣಕ್ಕೂ ಸಾಧ್ಯವೇ ಇಲ್ಲ ಎಂದು ಗುಡುಗಿದರು.
ಮುಂದುವರೆದು ಮಾತನಾಡಿದ ಅವರು ತುರುವೇಕೆರೆ ತಾಲೂಕಿನ ಕುಣಿಕೆನಹಳ್ಳಿ ಹಾಗೂ ಬಾಣಸಂದ್ರ ಗ್ರಾಮಗಳ ಸುತ್ತಮುತ್ತ ಕೋಬಾಲ್ಟ್ ಮತ್ತು ನಿಕ್ಕಲ್ ಗಣಿಗಾರಿಕೆಯ(Mining) ವಿರುದ್ಧ ಈಗಾಗಲೇ ಹಲವು ರೈತರು, ಧರಣಿಯನ್ನು ಸಹ ತುರುವೇಕೆರೆ ತಾಲೂಕಿನಲ್ಲಿ ಮಾಡಿದ್ದಾರೆ, ಇದರ ಬಗ್ಗೆ ಈಗಾಗಲೇ ಮಾಹಿತಿಯನ್ನ ಪಡೆದುಕೊಂಡಿದ್ದು ಇದಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಅವರ ಜೊತೆ ಚರ್ಚೆಯನ್ನ ನಡೆಸಿ ಮಾಹಿತಿಯನ್ನು ತೆಗೆದುಕೊಳ್ಳುತ್ತೇನೆ ಎಂದರು.
ಲೋಕಸಭಾ ಚುನಾವಣಾ(LokaSabha Election) ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದ ಹನುಮೇಗೌಡ, ಮುಖಂಡರಾದ ಮುರುಳಿಧರ ಹಾಲಪ್ಪ, ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್, ಪಾವಗಡ ಶಾಸಕ ವೆಂಕಟೇಶ್, ತಿಪಟೂರು ಶಾಸಕ ಷಡಕ್ಷರಿ, ಭಾಗಿಯಾಗಿದ್ದರು.
ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ನೇತೃತ್ವದಲ್ಲಿ ಈ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಿದ್ದು, ತಾಲೂಕಿನ ಕಾಂಗ್ರೆಸ್ ಮುಖಂಡರುಗಳಾದ ಎನ್. ಆರ್. ಜಯರಾಮ್, ಸುಬ್ರಮಣಿ ಶ್ರೀಕಂಠೇಗೌಡ, ಬಿ.ಎಸ್. ವಸಂತ್ ಕುಮಾರ್, ಶ್ರೀಮತಿ ಗೀತಾ ರಾಜಣ್ಣ.ಇನ್ನೂ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇನ್ನು ಈ ಸಭೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಬಂದಿದ್ದ ಘಟಾನುಘಟಿ ನಾಯಕರುಗಳಿಗೆ ಉರಿದುಂಬಿಸಿದರು.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/cng-bike-bajaj-made-the-first-cng-bike-in-the-countr/
https://www.janataa24.com/love-story-an-inter-district-love-story-ends-in-trag/
https://www.janataa24.com/election-update-964/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv