Document

POCSO:  ಪೋಕ್ಸೊ ಪ್ರಕರಣದಡಿಯಲ್ಲಿ ಅಮೃತಹಳ್ಳಿ ಠಾಣೆಯ PSI ಪ್ರವೀಣ್ ಅರೆಸ್ಟ್

JANATAA24 NEWS DESK 

POCSO:  ಪೋಕ್ಸೊ ಪ್ರಕರಣದಡಿಯಲ್ಲಿ ಅಮೃತಹಳ್ಳಿ ಠಾಣೆಯ PSI ಪ್ರವೀಣ್ ಅರೆಸ್ಟ್

 

ಬೆಂಗಳೂರು: ರಕ್ಷಕನೇ ಭಕ್ಷಕನಾದ ಎಂಬ ಮಾತಿನಂತೆ, ಕರ್ತವ್ಯದ ಹೆಸರಿನಲ್ಲಿ ಅಪ್ರಾಪ್ತ ಬಾಲಕರ ಮೇಲೆ ಅತ್ಯಂತ ವಿಕೃತವಾಗಿ ದೌರ್ಜನ್ಯ ಎಸಗಿದ ಅಮೃತಹಳ್ಳಿ ಠಾಣೆಯ ಪಿಎಸ್‌ಐ (PSI) ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇಲಾಖೆಯ ಘನತೆಗೆ ಧಕ್ಕೆ ತರುವಂತಹ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇಡೀ ನಗರವನ್ನು ಬೆಚ್ಚಿಬೀಳಿಸಿದೆ.

ಏನಿದು ಪ್ರಕರಣ?

ಕೆಲ ತಿಂಗಳ ಹಿಂದೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಲವು ಅಪ್ರಾಪ್ತ ಬಾಲಕರನ್ನು ವಿಚಾರಣೆಗಾಗಿ ಕರೆತರಲಾಗಿತ್ತು. ಆದರೆ, ಪಿಎಸ್‌ಐ ಪ್ರವೀಣ್ ಈ ಬಾಲಕರನ್ನು ಠಾಣೆಯಲ್ಲಿ ಇರಿಸುವ ಬದಲು ಖಾಸಗಿ ಸ್ಥಳವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಬಾಲಕರ ಮೇಲೆ ಬೆಲ್ಟ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ, ಅತೀವ ವಿಕೃತಿ ಮೆರೆದಿದ್ದಾರೆ.

Pocso

ವಿಕೃತಿಯ ವಿಡಿಯೋ ವೈರಲ್:

ವಿಚಾರಣೆಯ ನೆಪದಲ್ಲಿ ಓರ್ವ ಅಪ್ರಾಪ್ತ ಆರೋಪಿಯಿಂದ ಇನ್ನೊಬ್ಬ ಆರೋಪಿಯ ಬಾಯಿಗೆ ಮ*ರ್ಮಾಂಗ ಇರಿಸುವಂತೆ ಒತ್ತಾಯಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಈ ಇಡೀ ವಿಕೃತ ಘಟನೆಯನ್ನು ಪಿಎಸ್‌ಐ ಪ್ರವೀಣ್ ಸ್ವತಃ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಇತ್ತೀಚೆಗೆ ಈ ವಿಡಿಯೋ ವೈರಲ್ ಆಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಸತ್ಯಾಂಶ ಹೊರಬಿದ್ದಿದೆ.

 

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಪ್ರವೀಣ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆ ಹಾಗೂ ಅಸಭ್ಯ ವರ್ತನೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ಪಿಎಸ್‌ಐ ಪ್ರವೀಣ್‌ನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *