Pavagada: ಮಕ್ಕಳ ಘೋಷಣೆಯಂತೆ ಇರಲಿ ಸಸಿಗಳ ಜೀವನ: ವಿದ್ಯಾಸಾಗರ್.

Janataa24 NEWS DESK 

 

Pavagada: ಮಕ್ಕಳ ಘೋಷಣೆಯಂತೆ ಇರಲಿ ಸಸಿಗಳ ಜೀವನ- ವಿದ್ಯಾಸಾಗರ್.

 

ಪಾವಗಡ: ಪರಿಸರವನ್ನು ರಕ್ಷಿಸಲು ವಿದ್ಯಾರ್ಥಿ ದೆಸೆಯಿಂದಲೇ ಶಾಲಾ ಮಕ್ಕಳು ಮುಂದಾಗಬೇಕೆಂದು ಸುರಪನೇನಿ ಪೌಂಡೇಷನ್‌ ಸಂಸ್ಥೆಯ ಸಂಸ್ಥಾಪಕ ವಿದ್ಯಾಸಾಗ‌ರ್ ಕರೆ ನೀಡಿದರು.

 

ಮಂಗಳವಾರ ತಾಲೂಕಿನ ನಾಗಲಮಡಿಕೆ ಗ್ರಾಮದ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೊಡ್ಡಕೆರೆ ಆವರಣದಲ್ಲಿ ನಾಗಲಮಡಿಕೆ ಗ್ರಾ.ಪಂ, ಅರಣ್ಯ ಇಲಾಖೆ,

 

ಶ್ರೀಗುರುಕುಲ ವಿದ್ಯಾಸಂಸ್ಥೆ ಸಹಯೋಗದಲ್ಲಿ ಪರಿಸರ ರಕ್ಷಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕಗಿಡ ನೆಡುವ ಪರಿಸರ ಜಾಗೃತಿಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 

ಬಯಲು ಸೀಮೆ ಪಾವಗಡದಲ್ಲಿ ಹಸಿರು ಕ್ರಾಂತಿ ಮಾಡಲು ಸಂಘ ಸಂಸ್ಥೆಗಳೊಂದಿಗೆ ಅಧಿಕಾರಿಗಳು ಕೈ ಜೋಡಿಸಬೇಕಿದೆ, ಉತ್ತಮ ಪರಸರಕ್ಕೆ ಗಿಡಮರಗಳೇ ಆಧಾರ, ರೈತರು ತಮ್ಮ ಜಮೀನು ಹಾಗೂ ಮನೆ ಬಳಿ ಗಿಡ ಮರಗಳನ್ನು ಬೆಳೆಸುವ ಸಂಪ್ರದಾಯ ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿದೆಸೆಯಲ್ಲೇಗಿಡ ನೆಡುವುದು, ಅವುಗಳ ಪೋಷಣೆ ಮಾಡುವ ಕುರಿತು ತಿಳಿದು ಇತರರನ್ನೂ ಪ್ರೇರೇಪಿಸಬೇಕು ಎಂದರು.

 

ವಲಯ ಅರಣ್ಯ ಇಲಾಖೆಯ ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ತಮ್ಮಊರಿನಲ್ಲಿ ಗಿಡ ನೆಟ್ಟು ಪೋಷಿಸುವುದನ್ನು ರೂಢಿಸಿಕೊಳ್ಳಬೇಕೆಂದರು.

 

ಹಿರಿಯ ಪತ್ರಕರ್ತ ಸತ್ಯಲೋಕೇಶ್‌ ಮಾತನಾಡಿ ಪರಿಸರವನ್ನು ಉಳಿಸಿದರೆ ಪ್ರಾಣಿಪಕ್ಷಿಗಳನ್ನು ಉಳಿಸದಂತೆ, ಮಕ್ಕಳನ್ನು ಬೆಳೆಸಿದ ರೀತಿಯಲ್ಲಿ ಸಸಿಗಳನ್ನು ಬೇಳೆಸಬೇಕು ಎಂದರು.

 

ಶ್ರೀ ಗುರುಕುಲ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎನ್.ಸಿ.ನಾಗಭೂಷಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ, ಗ್ರಾ.ಪಂ ಸಿಬ್ಬಂದಿಗಳು ಹಾಗೂ ಗುರುಕುಲ ಶಾಲೆಯ ವಿದ್ಯಾರ್ಥಿಗಳು 350ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ನೀರೆರದರು, ಹಾಗೂ ಕೆರೆಯ ಸುತ್ತಲಿನ ಆವರಣದಲ್ಲಿ ವಿವಿಧ ಬಗೆಯ ಸೀಡ್ ಬಾಲ್‌ಗಳನ್ನು ಎಸೆದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

 

ಈ ವೇಳೆ ನಾಗಲಮಡಿಕೆ ಪಿ.ಡಿ.ಒ. ಹನುಮಂತಪ್ಪ, ಅರಣ್ಯ ಇಲಾಖೆಯ ಅಶೋಕ್, ಲಕ್ಷಣ, ನಾರಾಯಣ ಸೇರಿದಂತೆ ಸಿಬ್ಬಂದಿಗಳು, ಟ್ರಸ್ಟ್‌ನ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.

 

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

Leave a Reply

Your email address will not be published. Required fields are marked *