Pavagada: ಪಾವಗಡದಲ್ಲಿ ಮೇವು ನೀರಿಗೆ ಬರವಿದೆ ಹೊರತು ಜೂಜು ಮಟ್ಕಾ ದಂಧೆಗಲ್ಲ.

Janataa24 NEWS DESK

Pavagada : ಪಾವಗಡದಲ್ಲಿ ಮೇವು ನೀರಿಗೆ ಬರವಿದೆ ಹೊರತು ಜೂಜು ಮಟ್ಕಾ ದಂಧೆಗಲ್ಲ.

“ನಮ್ಮ ಹೆಮ್ಮೆ ನಮ್ಮ ಪಾವಗಡ”

ಪಾವಗಡ: ಗಡಿ ಭಾಗದ ಹಳ್ಳಿಗಳಲ್ಲಿ ತಲೆಯೆತ್ತಿರುವ ಇಸ್ಪೀಟ್ ಮಟ್ಕಾ(Matka) ದಂಧೆ. ರಾಜಾರೋಷವಾಗಿ ಪ್ರಮುಖ ರಸ್ತೆ ಬದಿಯಲ್ಲಿ ಕುಳಿತು ಮಟ್ಕಾ ಬರೆಯುತಿರುವ ಬಿಡ್ಡರ್ ಗಳು. ಪ್ರತಿ ದಿನ ಲಕ್ಷಗಟ್ಟಲೆ ಗಡಿಭಾಗದ ಗ್ರಾಮಗಳಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ. ತಾಲೂಕಿನ ಅರಸೀಕೆರೆ ಮಧ್ಯೆ ಗಡಿಭಾಗ ಲಿಂಗದಹಳ್ಳಿ ದುಮ್ಮತ್ಮರಿ, ವೈ ಎನ್ ಹೊಸಕೋಟೆ, ಚಿಕ್ಕಹಳ್ಳಿ. ಇತರೆ ಹಳ್ಳಿಗಳಲ್ಲಿ ತಲೆಯೆತ್ತಿರುವ ಇಸ್ಪೀಟ್ ಮಟ್ಕಾ ದಂಧೆ.

ಪಾವಗಡ ಸಾಮಾನ್ಯ ಜನರು ಉದ್ಯೋಗ, ವ್ಯಾಪಾರ ನಷ್ಟವಾಗಿ ಖರ್ಚಿಗೆ ಕಾಸಿಲ್ಲ ಎಂದು ಪರದಾಡುತ್ತಿದ್ದಾರೆ. ಆದರೆ ಬೆಟ್ಟಿಂಗ್‌, ಮಟ್ಕಾ, ಜೂಜುಕೋರರು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ಯಾವ ಚಿಂತೆಯೂ ಇಲ್ಲದೆ ಭರ್ಜರಿ ಹಣ ಮಾಡುತ್ತಿದ್ದು, ಮಟ್ಕಾ ದಂಧೆಯನ್ನು ಮಟ್ಟಹಾಕಲು ಪೊಲೀಸರು ಮಾಹಿತಿ ತಂತ್ರಜ್ಞಾನದ ಮೊರೆ ಹೋಗಿದ್ದರು ಸಹ ಪ್ರಯೋಜನವಿಲ್ಲ.

ಈ ಹಿಂದೆ ಇದ್ದಂತಹ ಸಿಪಿಐ ಅಜಯ್ ಸಾರಥಿ ಹದಿ ಹರೆಯದ ಕಾಲೇಜು ಮಕ್ಕಳನ್ನು ಹಾಕಿಕೊಂಡು ಪ್ರಮುಖ ಬೀದಿಗಳಲ್ಲಿ ಮಟ್ಕಾ ದಂಧೆ ಹೋಗಲಾಡಿಸಲು ನಾನಾ ರೀತಿಯ ಜಾತಾಗಳು ಮಾಡಿ ಜನರ ಅರಿವು ಮೂಡಿಸಿ ವಿಶೇಷ ವಾಗಿ“ನಮ್ಮ ಹೆಮ್ಮೆ ನಮ್ಮ ಪಾವಗಡ” ಎಂಬುದಾಗಿ ಸ್ಲೋಗನ್ ಒಂದು ಇಟ್ಟು ಆಟೋ ಗಳಿಗೆ ಇತರೆ ಜಾಲತಾಣದಲ್ಲಿ ಅರಿವು ಮೂಡಿಸುತ್ತಿದ್ದು ಸಾಮಾನ್ಯ ಜನರಿಗೆ ತಿಳಿದ ವಿಷಯ.

ಇತ್ತೀಚೆಗೆ ಕೂಲಿ ಕೆಲಸ ಮಾಡುವವರು ಯುವಕರು ಬೆಟ್ಟಿಂಗ್ ಜೂಜು ಮಟ್ಕಾದಿಂದ ನಷ್ಟವಾಗಿ ಬಹಳಷ್ಟು ಜನ ಊರು ಬಿಟ್ಟು, ಪ್ರಾಣ ಬಿಟ್ಟ ಘಟನೆಗಳು ಸಂಭವಿಸಿವೆ. ಕಳೆದ ಎರಡು ದಿನಗಳ ಹಿಂದೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಶೈಲಾಪುರ ಗ್ರಾಮದ ತೋಟದಲ್ಲಿ ಇಸ್ಪೀಟ್ ಆಡುತ್ತಿದ್ದ ಗುಂಪು ಒಂದು ಹಿಡಿದಿರುವ ಪ್ರಕರಣ ಬಳಕೆಗೆ ಬಂದಿದೆ.

ತುಮುಕೂರು ಜಿಲ್ಲೆಯ ಪಾವಗಡದಲ್ಲಿ ಇತ್ತೀಚೆಗೆ ಮಿತಿಮೀರಿದ ಮಟ್ಕಾ ದಂಧೆಯನ್ನು ಪೊಲೀಸರು(Police) ಒಂದು ಹಂತಕ್ಕೆ ನಿಯಂತ್ರಣಕ್ಕೆ ತಂದಿದ್ದರು. ಆದರೆ, ದಂಧೆಕೋರರು ಮಾತ್ರ ಪೊಲೀಸರ ಕಣ್ಣು ತಪ್ಪಿಸಿ ತಂತ್ರಜ್ಞಾನದ ಮೂಲಕ ದಂಧೆಯನ್ನು ಮುಂದುವರಿಸಿದ್ದರು. ಪ್ರತ್ಯೇಕ ಆ್ಯಪ್ಗಳನ್ನು ಕ್ರಿಯೇಟ್ ಮಾಡಿಕೊಂಡು ತಮ್ಮ ಗ್ರಾಹಕರ ಮೊಬೈಲ್ಗೆ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇದೀಗ ಆನ್ಲೈನ್ ಮಟ್ಕಾ ದಂಧೆಯನ್ನು ಮಟ್ಟಹಾಕಲು ತುಮಕೂರಿನ ಪೊಲೀಸರು ಮಾಹಿತಿ ತಂತ್ರಜ್ಞಾನದ ಮೊರೆ ಹೋಗಿದ್ದು, ಇದಕ್ಕಾಗಿ ನುರಿತ ತಂತ್ರಜ್ಞರನ್ನು ಸಂಪರ್ಕಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದಷ್ಟೇ ಪಾವಗಡದಲ್ಲಿ ಮಟ್ಕಾ ದಂಧೆಕೋರ ಮತ್ತು ಆತನ ಸಹಚರರನ್ನು ಹಾಗೂ ಸಹೋದರನ್ನು ಪೊಲೀಸರು ಬಂಧಿಸಿ, ಅಪಾರ ಪ್ರಮಾಣದ ಹಣ ಮತ್ತು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದೀಗ ಮತ್ತೆ ಮಟ್ಕಾ ದಂಧೆಕೋರರು ಆನ್ಲೈನ್ ಮೂಲಕ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಇದಕ್ಕೆ ಬ್ರೇಕ್ ಹಾಕಲು ಸಿದ್ಧರಾಗಬೇಕು.

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

HD Devegowda : ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ದ ಚುನಾವಣಾ ಅಯೋಗಕ್ಕೆ ದೇವೆಗೌಡರು ದೂರು.

Leave a Reply

Your email address will not be published. Required fields are marked *