Janataa24 NEWS DESK

ಸೋಲಾರ್ ಕಂಪನಿಗಳಿಂದ ಲಕ್ಷಾಂತರ ತೆರಿಗೆ ಬಾಕಿ ನಿದ್ದೆಗೆ ಜಾರಿದ ಅಧಿಕಾರಿಗಳು: ಆಮ್ ಆದ್ಮಿ ಪಕ್ಷದ ರಾಮಾಂಜಿನಪ್ಪ ಉಗ್ರ ಪ್ರತಿಭಟನೆ ಎಚ್ಚರಿಕೆ.
ಪಾವಗಡ: ಸೋಲಾರ್ ಕಂಪನಿಗಳು ತೆರಿಗೆಯನ್ನು ಪಾವತಿಸಿದೆ ಲಕ್ಷಾಂತರ ರೂಗಳು ಬಾಕಿ ಇದ್ದರೂ ಸಹ ಸಂಬಂದಿಸಿದ ಗ್ರಾಪ ಪಂಚಾಯಿತಿ ಪಿ.ಡಿ.ಓ.ಗಳು ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ ಅರೋಪಿಸಿದ್ದಾರೆ.
ಮಂಗಳವಾರ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಆಮ್ ಆದ್ಮಿ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು 2015-16 ನೇ ಸಾಲಿನÀಲ್ಲಿ ಎಷ್ಯಾದಲ್ಲಿಯೆ ಅತಿ ದೊಡ್ಡ ಸೋಲಾರ್ ಪಾರ್ಕ ತಿರುಮಣಿ ಮತ್ತು ವಳ್ಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿದ್ದು ಕೆ.ಎಸ್.ಪಿ.ಡಿ.ಸಿ.ಎಲ್ ನಿಂದ ಖಾಸಗಿ ಕಂಪನಿಗಳಿಗೆ ವಿದ್ಯತ್ ಉತ್ಪಾದನೆಗೆ ಗುತ್ತಿಗೆ ನೀಡಿದ್ದು, ಅದರೆ ಇಲ್ಲಿಯವರೆಗೂ ಕನಿಷ್ಟ 10 ಖಾಸಗಿ ಸೋಲಾರ್ ಕಂಪನಿಗಳು ಕಳೆದ 10 ವರ್ಷಗಳಿಂದ ಗ್ರಾಮಪಂಚಾಯಿತಿಗಳಿಗೆ ತೆರಿಗೆ ಪಾವತಿಸದೆ ಬೃಹತ್ ಗೋಲ್ ಮಾಲ್ ಮಾಡಲಾಗಿದೆ ಈ ಬಗ್ಗೆ ಯಾವುದೆ ಅಧಿಕಾರಿಗಳು ತೆರಿಗೆ ವಸೂಲಿ ಮಾಡುವಲ್ಲಿ ಅಸಕ್ತಿ ತೋರಿಸುತ್ತಿಲ್ಲಾ ಎಂದು ದೂರಿದರು.
ವಳ್ಳೂರು ಗ್ರಾಮಪಂಚಾಯಿತಿಗೆ ಇಲ್ಲಿಯವರೆಗೂ 20 ಲಕ್ಷö್ಮ ತೆರಿಗೆ ವಸೂಲಿಯಾಗಬೇಕಾಗಿದ್ದು, ಈ.ಲೆಕ್ಕಾಚಾರದಲ್ಲಿ ಮೂರು ಪಂಚಾಯಿತಿಗಳಾದ ವಳ್ಳೂರು, ತಿರುಮಣಿ, ನಾಗಲಮಡಿಕೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಟ 1 ಕೋಟಿಗೂ ಅಧಿಕ ತೆರಿಗೆ ಬಾಕಿ ಇದೆ ಈ ಹಣ ವಸೂಲಿಯಾದರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ರಸ್ತೆ , ಚರಂಡಿ, ಬೀದಿದೀಪ, ಅಂಗನವಾಡಿಗಳಿಗೆ, ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬಹುದಾಗಿದೆ, ಬಿ.ಕೆ. ಹಳ್ಳಿ. ಕೋಟಗುಡ್ಡ, ವೆಂಕಟಾಪುರ ಗ್ರಾಮಪಂಚಾಯಿತಿಗಳಲ್ಲಿಯೂ ಸಹಸೋಲಾರ್ ಪಾರ್ಕ ನಿರ್ಮಾಣ ವಾಗಿದ್ದು, ಈ ಪಂಚಾಯಿತಿಗಳಲ್ಲಿಯೂ ಸಹ ತೆರಿಗೆ ವಸೂಲಿ ಯಾಗಿಲ್ಲಾ ಎಂದು ಬೇಸರ ವ್ಯಕ್ತ ಪಡಿಸಿದರು.
ಹೀಗಲಾದರೂ ಸಂಬಂದಪಟ್ಟ ಜಿಲ್ಲಾಪಂಚಾಯಿತಿ ಸಿ.ಇ.ಒ. ಪಾವಗಡ ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿ, ಗಮನ ಹರಿಸಿ ತೆರಿಗೆ ವಸೂಲಿಗೆ ಕ್ರಮಕೈಗೊಳ್ಳಬೇಕು ಇಲ್ಲವಾದ ಪಕ್ಷದಲ್ಲಿ ಸೋಲಾರ್ ಕಂಪನಿಗಳ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೆಚ್ಚರಿಸಿದ್ದಾರೆ. ಈ ವೇಳೆ ಪಕ್ಷದ ಕಾರ್ಯಕರ್ತರಾದ ಮರಿದಾಸನಹಳ್ಳಿ ವೀರಕ್ಯಾತಪ್ಪ,ಕೆಂಚಪ್ಪ, ಗೋವಿಂದಪ್ಪ ಮತ್ತಿತರಿದ್ದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ