Janataa24 NEWS DESK
ಸುಸೂತ್ರವಾಗಿ ನಡೆದ ನವೋದಯ ಆರನೇ ತರಗತಿಯ ಪ್ರವೇಶ ಪರೀಕ್ಷೆ.

ಪಾವಗಡ: ಪಟ್ಟಣದ ಎರಡು ಪರೀಕ್ಷಾ ಕೇಂದ್ರದಲ್ಲಿ ಶನಿವಾರದಂದು ನಡೆದ ಪ್ರವೇಶ ಪರೀಕ್ಷೆ ಕೇಂದ್ರಗಳಾದ ಜೂನಿಯರ್ ಕಾಲೇಜ್ ಹಾಗೂ ಜ್ಞಾನಭೊದಿನಿ ಪ್ರೌಢಶಾಲೆಯಲ್ಲಿ ನಡೆದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ತಿಳಿಸಿದರು.
ಒಟ್ಟು ವಿದ್ಯಾರ್ಥಿಗಳು ನೊಂದಣಿ 474. ಪರೀಕ್ಷೆ ಬರೆದ ವಿದ್ಯಾರ್ಥಿಗಳು 400.ಪರೀಕ್ಷೆಗೆ ಗೈರುಹಾಜರಿ ವಿದ್ಯಾರ್ಥಿಗಳು ಸಂಖ್ಯೆ 72.
ಹೊದ ವರ್ಷ ನವೋದಯ ಪರೀಕ್ಷೆ ಕೇಂದ್ರ ದಲ್ಲಿ ಶಿಕ್ಷಕರೆ ಕೆಲ ಮಕ್ಕಳಿಗೆ ಪರೀಕ್ಷೆ ಕೇಂದ್ರ ದಲ್ಲಿ ಸಹಾಯ ಮಾಡಲಾಗಿತ್ತು ಎಂಬುದಾಗಿ ಪರೀಕ್ಷೆ ಬರೆದಂತಹ ವಿದ್ಯಾರ್ಥಿಗಳೇ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಮಾದ್ಯಮ ಗಳಲ್ಲಿ ವರದಿ ಸಹ ಆಗಿತ್ತು.ಅದೇ ವಿಷಯ ವಾಗಿ ಈ ಬಾರಿಯ ಪರೀಕ್ಷೆಯಲ್ಲಿ ಯಾವುದೇ ಗೊಂದಲ ಉಂಟಾಗ ಬಾರದು ಎಂಬುದಾಗಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ವತಃ ಪರೀಕ್ಷಾ ಕೇಂದ್ರಗಳು ಇದ್ದು ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವಲ್ಲಿ ಯಶಸ್ಸು ಗಳಿಸಿದ್ದಾರೆ.
ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ನಿರ್ವಹಣೆ ಮಾಡಲು ದೈಹಿಕ ಶಿಕ್ಷಕರನ್ನು ನೇಮಿಸಿಕೊಂಡು ಪರೀಕ್ಷೆ ಉತ್ತಮವಾಗಿ ನಡೆಸಿಕೊಟ್ಟಿದ್ದಾರೆ ಹಾಗೂ ಸಹಕರಿಸಿದ್ದಾರೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಣಾಮ್ಮ ತಿಳಿಸಿದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ