Janataa24 NEWS DESK
Mandya: ಮತದಾನದ ನಂತರ ಜೆಡಿಎಸ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸುಮಲತಾ ಅಂಬರೀಶ್.|After voting, Sumalata Ambarish expressed her displeasure with JDS.|

ಮಂಡ್ಯ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ(HD devegowda) ಹೇಳಿಕೆಯಿಂದ ನನಗೆ ಬಹಳಷ್ಟು ನೋವು ತಂದಿದೆ. ಜೆಡಿಎಸ್(JDS)ನವರು ನನ್ನನ್ನು ಪ್ರಚಾರಕ್ಕೂ ಕರೆದಿಲ್ಲ ಎಂದು ಮತದಾನದ ನಂತರ ಸಂಸದೆ ಸುಮಲತಾ ಅವರು ಅಸಮಾಧಾನ ಹೊರಹಾಕಿದ್ದಾರೆ.
ದೊಡ್ಡರಸಿನಕೆರೆ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು(HD Devegowdru) ಹಿರಿಯರು. ಅವರ ಬಗ್ಗೆ ನನಗೆ ಗೌರವ ಇದೆ. ಇನ್ನೊಂದು ರೀತಿ ಉತ್ತರ ಹೇಳೋಕೆ ಇಷ್ಟವಿಲ್ಲ. ಎಲ್ಲೋ ಅವರಿಗೆ ಸರಿಯಾದ ಮಾಹಿತಿ ಕೊಡದಿದ್ದಕ್ಕೆ ಈ ರೀತಿಯಾದ ಹೇಳಿಕೆ ಕೊಟ್ಟಿರಬಹುದು. ಖಂಡಿತ ಅವರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ.
ಕಳೆದ 5 ವರ್ಷದಲ್ಲಿ ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸಿಕೊಂಡು ಬಂದೆ. ನನಗೆ, ಅಂಬರೀಶ್ ಅವರಿಗೆ, ಬೆಂಬಲ, ಪಡೆ, ಶಕ್ತಿ ಈ ಜಿಲ್ಲೆಯಲ್ಲಿ ಇದ್ದೇ ಇದೆ ಎಂದು ಹೇಳಿದ್ದಾರೆ.ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಮಹದಾಸೆ ನನ್ನದು ಏನೇ ಸಮಸ್ಯೆ ಇದ್ದರೂ ಮತ್ತೊಮ್ಮೆ ಮೋದಿಗಾಗಿ ಗೆದ್ದಂತಹ ಸ್ಥಾನವನ್ನು ತ್ಯಾಗ ಮಾಡಿದ್ದೇನೆ. ಅಂಬರೀಶ್ ಅವರ ಸೇನೆ ಹಾಗೂ ಬೆಂಬಲಿಗರು ನನ್ನ ಪ್ರಕಾರ ಬಿಜೆಪಿ(BJP), ಎನ್ಡಿಎಗೆ ಸೇರಿದಂತೆ. ನನ್ನ ಜೊತೆಗಿದ್ದ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಿದ್ದಾರೆ.
ಇವತ್ತಿನ ದಿನದವರೆಗೆ ಜೆಡಿಎಸ್(JDS) ಪಕ್ಷದ ನಾಯಕರು ಯಾವುದೇ ಸಭೆಗೆ ನನ್ನನ್ನು ಕರೆದಿಲ್ಲ. ಸಭೆಗೆ ಬಂದು ಜಾಯಿನ್ ಆಗಿ ಎಂದು ಕೇಳಿಲ್ಲ. ಜಿಲ್ಲೆಯ ಯಾವುದಾದ್ರೂ ತಾಲೂಕಿಗೆ, ಗ್ರಾಮಕ್ಕೆ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ಒಂದು ವೇಳೆ ಕರೆದರೂ ನಾನು ಬೇಡ ಅಂತ ಹೇಳಿದ್ದರೇ, ಅಂಥಹ ರೆಕಾರ್ಡ್ ಇದ್ದರೇ ಕೊಡಿ ಅಂತ ಜೆಡಿಎಸ್ನವರನ್ನ ಕೇಳಿ. ನೀವು ಇಲ್ಲದೇ ಎಲೆಕ್ಷನ್ ಮಾಡಬೇಕು ಎನ್ನುವುದು ಅವರಲ್ಲಿನ ಕೆಲವರಲ್ಲಿ ಇದ್ದಿದ್ದರಿಂದ ಈ ರೀತಿ ಮಾಡಿರಬಹುದು.
ನಮ್ಮ ಕಾರ್ಯಕರ್ತರನ್ನ ನಾನು ಸಮಾಧಾನ ಮಾಡಿಕೊಂಡು ಬಂದಿದ್ದೇನೆ. ನಮ್ಮವರಲ್ಲಿ ಕೆಲವರು ಫೋನ್ ಮಾಡಿ ನಮ್ಮ ವೋಟ್ ಅವರಿಗೆ ಲೆಕ್ಕಕ್ಕೆ ಇಲ್ವಾ ಅಂತ ಕೇಳಿದ್ದಾರೆ. ಪ್ರಚಾರಕ್ಕೆ ಬನ್ನಿ ಎಂದು ಯಾರೋಬ್ಬರು ಕರೆದಿಲ್ಲ ಎಂದು ಹೇಳಿದ್ದಾರೆ.
https://www.janataa24.com/fire-accident-coirr-factory-worth-more-than-one/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv