Mandya: ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಭರ್ಜರಿ ರೋಡ್ ಶೋ.

Janataa24 NEWS DESK

Mandya: ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಭರ್ಜರಿ ರೋಡ್ ಶೋ.

ಮಂಡ್ಯ: ಸಕ್ಕರೆಯನಗರ ಮಂಡ್ಯದಲ್ಲಿ ಲೋಕಸಭೆಯ ಮೆಗಾ ಫೈಟ್ ಇಂದು ಜೋರಾಗಿದ್ದು. ನಟ ದರ್ಶನ್(Darshan) ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಅಕಾಡಕ್ಕಿಳಿದು ಭರ್ಜರಿಯಾದ ರೋಡ್ ಶೋ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಕಾಂಗ್ರೆಸ್ ನ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ಹಾಕುವಂತೆ ನೇರವಾಗಿ ಕರೆ ಕೊಟ್ಟಿದ್ದಾರೆ.

ಈ ದಿನದವರೆಗೂ ಮಂಡ್ಯ ಲೋಕಸಭಾ(Lokasabha)ಅಕಾಡವು ಅಷ್ಟಕ್ಕಷ್ಟೇ ಆಗಿದ್ದು ಇಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಆಗಮನದ ಬಳಿ ಚುನಾವಣೆಯ ಕಣ ರಣಕಣವಾಗಿ ಮಾರ್ಪಟ್ಟಿದೆ.ನಟ ದರ್ಶನ್(Darshan) ಅನ್ನು ನೋಡಲು ಜನರು ಮುಗಿಬಿದ್ದಿದ್ದು ರಸ್ತೆಗಳು ಜಾಮ್, ರೋಡ್ ಶೋ ಉದ್ದಗಲಕ್ಕೂ ಜನಸಾಗರ ಬಿಲ್ಡಿಂಗ್ ಗಳ ಮೇಲೆ ನಿಂತು ಜನರು ಶಿಳ್ಳೆ ಚಪ್ಪಾಳೆಯ ಮೂಲಕ ಭಾರಿ ಬೆಂಬಲವನ್ನು ಸೂಚಿಸಿದ್ದಾರೆ.

ಇನ್ನು ಕಳೆದ ಬಾರಿ ಸುಮಲತಾ ಬೆನ್ನಿಗೆ ನಿಂತಿದ್ದ ದರ್ಶನ್ ಅವರು ಹಳ್ಳಿ ಹಳ್ಳಿ ಸುತ್ತಿ ಪ್ರಚಾರ ನಡೆಸಿದ್ದರು. ಈ ಬಾರಿ ಕಾಂಗ್ರೆಸ್(Congress) ಅಭ್ಯರ್ಥಿ ಪರ ದರ್ಶನ್ ಕ್ಯಾಂಪೇನ್ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೂ ಮಳವಳ್ಳಿಯಲ್ಲಿ ರೋಡ್ ಶೋ ನಡೆಸಿಸಿದ್ದು. ಹಲಗೂರು, ಹಾಡ್ಲಿ‌ ಸರ್ಕಲ್, ಮಳವಳ್ಳಿ ಟೌನ್, ಬೆಳಕವಾಡಿ, ಬಿ.ಜಿ.ಪುರ, ಪೂರಿಗಾಲಿ, ಕಿರುಗಾವಲು, ಟಿ.ಕಾಗೇಪುರ ಸೇರಿದಂತೆ ಹಲವು ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ಮುಂದುವರೆದಿದೆ. ಕಳೆದ ಬಾರಿ ಮಗನ ವಿರುದ್ಧ ಚುನಾವಣೆ ನಡೆಸಿ ಸುಮಲತಾ ರವರನ್ನು ಗೆಲ್ಲಿಸಿಕೊಂಡಿದ್ದ ದರ್ಶನ್ ಇದೀಗ ಕುಮಾರಸ್ವಾಮಿ(Kumaraswamy)ಯವರ ವಿರುದ್ಧ ನೇರವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.

https://www.janataa24.com/fire-accident-coirr-factory-worth-more-than-one/

ತಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Leave a Reply

Your email address will not be published. Required fields are marked *