Janataa24 NEWS DESK
ಮಾದಿಹಳ್ಳಿಯ ಶ್ರೀ ರಾಮಕೃಷ್ಣ ಮಠ ಬದರಿಕಾಶ್ರಮ ವಿದ್ಯಾ ಶಾಲೆಯಲ್ಲಿ ವ್ಯಾಸಂಗ ಮಾಡಿ 10 ನೇ ತರಗತಿಯ CBSE ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಸನ್ಮಾನ.
ತುರುವೇಕೆರೆ: ತಾಲ್ಲೂಕಿನ ಮಾದಿಹಳ್ಳಿಯ ಶ್ರೀ ರಾಮಕೃಷ್ಣ ಮಠ ಬದರಿಕಾಶ್ರಮ ವಿದ್ಯಾ ಶಾಲೆಯಲ್ಲಿ ವ್ಯಾಸಂಗ ಮಾಡಿ 10 ನೇ ತರಗತಿಯ ( ಸಿ.ಬಿ.ಎಸ್.ಸಿ ಸೆಲಬಸ್) ನಲ್ಲಿ ಅತಿ ಹೆಚ್ಚು 85% ಅಂಕ ಗಳಿಸಿದ ದೀಕ್ಷಾಳನ್ನು ತುರುವೇಕೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಪ್ರವಾಸಿಮಂದಿರದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಸರಳ ಕಾರ್ಯಕ್ರಮದಲ್ಲಿ 2024-25 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ( ಸಿ.ಬಿ.ಎಸ್.ಸಿ.) ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಾಧನೆಮಾಡಿದ ವಿದ್ಯಾರ್ಥಿನಿ ದೀಕ್ಷಾ ರವರನ್ನು ಸನ್ಮಾನಿಸಲಾಯಿತು ಇವರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಯಾಗಿರುವ ಸಚಿನ್ ಹಾಗೂ ಗಿರಿಜಾ ರವರ ಪುತ್ರಿ ಯಾಗಿದ್ದಾರೆ.
ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಸಮಾಜದಲ್ಲಿನ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುವುದು ಪತ್ರಕರ್ತರ ಮಕ್ಕಳು ಸಾಧನೆಗೈದಾಗ ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿ ಮುಂದಿನ ದಿನಗಳಲ್ಲಿ ಪತ್ರಕರ್ತ ಕುಟುಂಬದ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅಭಿನಂದಿಸುವ ಕೆಲಸವನ್ನು ನಿರಂತರವಾಗಿ ಸಂಘ ಮಾಡಲಿದೆ ಎಂದರು.
ಹಿರಿಯ ಪತ್ರಕರ್ತರಾದ ಸತ್ಯ ನಾರಾಯಣ್ ರವರು ಮಾತನಾಡಿ ಪತ್ರಕರ್ತರ ಮಕ್ಕಳು ಶೈಕ್ಷಣಿಕವಾಗಿ ಮುಂದುವರೆದು ಉನ್ನತ ಹುದ್ದೆಯತ್ತ ತಮ್ಮ ಚಿತ್ತವಿರಲಿ ಎಂದು ಮತ್ತು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಶುಭ ಹಾರೈಸುವ ಮೂಲಕ ಉತ್ತಮ ಮಾರ್ಗದರ್ಶನವನ್ನು ನೀಡಿದರು.
ಹಿರಿಯ ಪತ್ರಕರ್ತರಾದ ಎಸ್ ನಾಗಭೂಷಣ್ ರವರು ಮಾತನಾಡಿ ನನ್ನ ತಂದೆ ಸಮಾಜದಲ್ಲಿ ಹಿರಿಯ ಪತ್ರಕರ್ತರಾಗಿದ್ದರು ದಿನ ಕಳೆದಂತೆ ಸಮಾಜದಲ್ಲಿ ನನ್ನ ಮಗನೂ ಸಹ ಪತ್ರಕರ್ತನಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ, ನನ್ನ ಪತ್ರಿಕಧರ್ಮ ಅಭಿವೃದ್ಧಿಯನ್ನು ಕಂಡು ಹೆಮ್ಮೆ ಪಡುತ್ತಿದ್ದರು ಎಂದು ಕೆಲಕಾಲ ತಮ್ಮ ತಂದೆಯನ್ನು ನೆನೆದು ಭಾವುಕರಾದರು, ವಿದ್ಯಾರ್ಥಿನಿ ದೀಕ್ಷಾಳಿಗೆ ಶೈಕ್ಷಣಿಕವಾಗಿ ಬೆಳೆಯಲು ಉತ್ತಮ ಸಲಹೆ, ಮತ್ತು ಶುಭ ಹಾರೈಕೆಯನ್ನು, ಮುಂದೆ ಒಳ್ಳೆಯ ಸ್ಥಾನಮಾನದಲ್ಲಿ ನಿನ್ನನ್ನು ಕಾಣಬೇಕು ಎಂದು ತಿಳಿಸಿದರು.
ಕುಮಾರಿ ದೀಕ್ಷಾ ಮಾತನಾಡಿ ನನ್ನ ಈ ಸಾಧನೆಗೆ ಶಾಲೆಯ ಶಿಕ್ಷಕರು, ಪೋಷಕರು ಕಾರಣರಾಗಿದ್ದು, ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿರುವುದು ಸಂತೋಷತಂದಿದೆ ಹಾಗೂ ಇನ್ನೂ ಚನ್ನಾಗಿ ಓದಲು ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಅಧ್ಯಯನ ಮಾಡಿ ಫೈಲಟ್ ಆಗಬೇಕೆಂಬ ಆಸೆಯಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಎಂ.ಬಿ.ಹರೀಶ್, ಧರಣೀಶ್,ಸುರೇಶ್ ಬಾಬು, ಮನೋಹರ್, ಪಾಂಡುರಂಗಯ್ಯ,ಶ್ರೀಕಾಂತರಾಜ್ ಅರಸು,ಭರತ್ ರಂಗಸ್ವಾಮಿ, ಸ್ವರ್ಣ ಕುಮಾರ್ ,ದಲಿತ ಮುಖಂಡ ರಂಗಸ್ವಾಮಿ ಸೇರಿದಂತೆ ಮುಂತಾದವರಿದ್ದರು.
ವರದಿ: ಮಂಜುನಾಥ್ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
https://youtu.be/ioBwxkXfLqo?si=i1AACfgQuqhFUQV0
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.