Janataa24 NEWS DESK
Kolar: ದಲಿತ ಸಾಹಿತಿ ಹಾಗೂ ಚಿಂತಕ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಹಲ್ಲೆ.

ದಲಿತ ಸಂಘರ್ಷ ಸಮಿತಿ( ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ. ರಿ ನಂ ೪೭/೭೪-೭೫ )ತುರುವೇಕೆರೆ ತಾಲ್ಲೂಕು ಶಾಖೆ , ವತಿಯಿಂದ ತೀವ್ರ ಖಂಡನೆ.
ತುರುವೇಕೆರೆ: ಕೋಲಾರದ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಸ್ಥಾನದಲ್ಲಿ ಧ್ವನಿವರ್ಧಕವನ್ನು ಜೋರಾಗಿ ಹಾಕಿದ್ದರಿಂದ ,ಓದಲು ತೊಂದರೆಯಾಗುತ್ತಿದೆ ಮೈಕ್ ಸೌಂಡ್ ಕಡಿಮೆ ಮಾಡಿ ಎಂದು ಮನವಿ ಮಾಡಲು ಹೋಗಿದ್ದ, ಸಾಹಿತಿ ,ರಂಗಕರ್ಮಿ, ಮತ್ತು ಹೋರಾಟಗಾರ, ಕೋಟಿಗಾನಹಳ್ಳಿ ರಾಮಯ್ಯ(Kotiganahalli Ramaiah) ಮತ್ತು ಅವರ ಪುತ್ರ ಮೇಘಾವರ್ಷ ಮೇಲೆ ಗ್ರಾಮದ ಕಿಡಿಗೇಡಿಗಳಾದ ಮಂಜುನಾಥ, ಬೈರಪ್ಪ ,ಹಾಗೂ ಸುಬ್ಬು ಎಂಬುವವರು ಬೇಕೆಂದೇ ತಗಾದೆ ತೆಗೆದು ಅಮಾನವೀಯವಾಗಿ ಹಲ್ಲೆ ಮಾಡಿದ್ದರೆ.
ಇದರ ಹಿನ್ನೆಲೆ ತುರುವೇಕೆರೆ ಪಟ್ಟಣದಲ್ಲಿ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ದಲಿತ ಮತ್ತು ಜನಪರ ಚಳುವಳಿಯ ಹೋರಾಟಗಾರ, ಸಾಹಿತಿ, ಹಾಗೂ ಚಿಂತಕರಾಗಿರುವ ಕೋಟಿಗಾನಹಳ್ಳಿ ರಾಮಯ್ಯನವರ(Kotiganahalli Ramaiah)ಮೇಲೆ ಹಲ್ಲೆ ಮಾಡಿರುವುದನ್ನು ನಮ್ಮ ತುರುವೇಕೆರೆ ದಲಿತ ಸಂಘರ್ಷ ಸಮಿತಿ , ತಾಲೂಕು ಶಾಖೆ ಖಂಡಿಸುತ್ತದೆ,
ಕೂಡಲೇ ಹಲ್ಲೇ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಇಂತಹವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವುದು ಹಲವು ಅನುಮಾನ ಮೂಡಿಸುತ್ತದೆ. ಆದ್ದರಿಂದ ರಾಮಯ್ಯನವರ ಮೇಲೆ ಹಲ್ಲೆ ನಡೆಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಸೂಕ್ತ ತನಿಖೆ ನಡೆಸಬೇಕೆಂದು ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ಸಂಚಾಲಕ ದಂಡಿನ ಶಿವರ ಕುಮಾರ್ ಮನವಿ ಮಾಡಿದರು.
ವರದಿ: ಮಂಜುನಾಥ್ ತುರುವೇಕೆರೆ.
https://www.janataa24.com/accident-bikara-road-accident-between
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en