Accident: ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನಿ ನಡುವೆ ಬೀಕರ ರಸ್ತೆ ಅಪಘಾತ ಮೂವರು ಸ್ಥಳದಲ್ಲೇ ಸಾವು

ದಾವಣಗೆರೆ: ಕೆಎಸ್‌ಆರ್‌ಟಿಸಿ((KSRTC) ಬಸ್ ಹಾಗೂ ಓಮಿನಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮೂವರು ಸ್ಥಳದಲ್ಲಿ ಸಾವನ್ನಪ್ಪಿರುತ್ತಾರೆ ಮತ್ತು ನಾಲ್ವರ ಸ್ಥಿತಿ ಗಂಭೀರವಾಗಿರುತ್ತದೆ.
ಶಿಕಾರಿಪುರದ ಕಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ(KSRTC) ಬಸ್ ಮತ್ತು ಶಿವಮೊಗ್ಗ ಕಡೆಯಿಂದ ಹೊರಟಿದ್ದ ಓಮಿನಿ(Omni) ಕಾರಿನ ನಡುವೆ ಅಪಘಾತ ಸಂಭವಿಸಿರುತ್ತದೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಬಳಿ ಅಪಘಾತ ಸಂಭವಿಸಿದ. ನಂಜುಂಡಪ್ಪ, ರಾಕೇಶ್, ದೇವರಾಜ್ ಮೃತ ದುರ್ದೈವಿಗಳು. ಒಂದು ಮಗು ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಕೆಲವರನ್ನು ತಾಲೂಕು ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ.
ಇನ್ನೂ ಕೆಲವರನ್ನು ಶಿವಮೊಗ್ಗದ ಮೆಗ್ಗಾನ್(MEGGAN) ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಎಲ್ಲರೂ ಹೊನ್ನಾಳಿ ತಾಲೂಕಿನ ಅರಬಘಟ ಮೂಲದವರು ಎಂದು ತಿಳಿದುಬಂದಿದೆ. ನ್ಯಾಮತಿ ಪೊಲೀಸ(Police)ರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
https://www.janataa24.com/fire-accident-coirr-factory-worth-more-than-one/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en