Janataa24 NEWS DESK
IPL2025: ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ RCB ಅಭಿಮಾನಿಗಳ ಮಾರಣಹೋಮ.


ಸತತ 18 ವರ್ಷಗಳ ನಂತರ ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ 10 ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಚಿನ್ನಸ್ವಾಮಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಭಾರೀ ಅನಾಹುತ ಆಗಿದೆ. ದುರಂತದಲ್ಲಿ ಮೃತರ ಸಂಖ್ಯೆ ಏರಿಕೆ ಆಗುತ್ತಲೇ ಇದ್ದು, ಮತ್ತಷ್ಟು ನೋವಿನ ಆತಂಕ ಎದುರಾಗಿದೆ.
Ipl2025: ಕಾಲ್ತುಳಿತಕ್ಕೂ ಮೊದಲು ಆಗಿದ್ದೇನು..?
ಸೆಲೆಬ್ರೇಷನ್ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಫ್ಯಾನ್ಸ್ ಬಂದಿದ್ದರು
ಮೈದಾನದ ಒಳಪ್ರವೇಶ ವಿಚಾರದಲ್ಲಿ ಸಿಬ್ಬಂದಿ ನಡುವೆ ಕೆಲವು ಗೊಂದಲ ಆಗಿದೆ
ಕೊನೆಗೆ ಸ್ಟೇಡಿಯಂ ತುಂಬಿದ ಬಳಿಕ ಮೈದಾನದ ಗೇಟ್ ಬಂದ್ ಮಾಡಲಾಗಿದೆ
ಪಾಸ್ ಇಲ್ಲದೇ ಬಂದಿದ್ದ ಸಾವಿರಾರು ಅಭಿಮಾನಿಗಳನ್ನು ಹೊರಗೆ ನಿಲ್ಲಿಸಲಾಗಿತ್ತು
ಆರ್ಸಿಬಿ ಅಭಿಮಾನಿಗಳಿಗೆ ಮೈದಾನದ ಒಳಗೆ ನಡೆಯುವ ಸಂಭ್ರಮ ನೋಡಬೇಕಿತ್ತು
ಹೇಗಾದರೂ ಮಾಡಿ ಚಿನ್ನಸ್ವಾಮಿ ಮೈದಾನದ ಒಳಗೆ ಹೋಗಲೇಬೇಕು ಅಂತಾ ಕಸರತ್ತು
ಕೊನೆ ಮೂಮೆಂಟ್ನಲ್ಲಿ ಅಭಿಮಾನಿಗಳು ಗೋಡೆ, ಕಾಂಪೌಂಡ್ ಹತ್ತಿದ್ದಾರೆ
ಇನ್ನು ಕೆಲವು ಆರ್ಸಿಬಿ ಅಭಿಮಾನಿಗಳು ಪಾಸ್ ಇಲ್ಲದೇ ಒಳಗೆ ನುಗ್ಗಿದ್ದಾರೆ
ಈ ವೇಳೆ ನೂಕುನುಗ್ಗಲು ಸಂಭವಿಸಿದೆ, ನೋಡು ನೋಡುತ್ತಿದ್ದಂತೆ ಕಾಲ್ತುಳಿತ
ಪೊಲೀಸರು, ಮೈದಾನದ ಸಿಬ್ಬಂದಿಯ ನಿಯಂತ್ರಣಕ್ಕೆ ಸಿಗದೇ ಅನಾಹುತ ಆಗಿದೆ
ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ತಂಡವು ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ವಿಧಾನಸೌಧದ ಮುಂಭಾಗದಲ್ಲಿ ಆರ್ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ, ಫ್ಯಾನ್ಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದರು. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ. ಕಾಲ್ತುಳಿತ ಸಂದರ್ಭದಲ್ಲಿ ಆಟಗಾರರು ವಿಧಾನಸೌಧದ ಕಾರ್ಯಕ್ರಮದಲ್ಲಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.