HDK: ಚುನಾವಣಾ ಖರ್ಚಿಗಾಗಿ ಕುಮಾರಸ್ವಾಮಿಗೆ 500ರೂ ಹಣ ಕೊಟ್ಟ ಕಾರ್ಯಕರ್ತ

 

 

Janataa24 NEWS DESK 

HDK: ಚುನಾವಣಾ ಖರ್ಚಿಗಾಗಿ ಕುಮಾರಸ್ವಾಮಿಗೆ 500ರೂ ಹಣ ಕೊಟ್ಟ ಕಾರ್ಯಕರ್ತ

Jds party member 500 rupees donated to hdk in mandya

ಮಂಡ್ಯ: ರಂಗೇರಿದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಾಜಕೀಯ ಚಟುವಟಿಕೆ ಬರದಿಂದ ಸಾಗುತ್ತಿದೆ. ಮಂಡ್ಯ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿರುವ ಮಾಜಿ ಸಿಎಂ. ಹೆಚ್ ಡಿ ಕುಮಾರಸ್ವಾಮಿ(Kumaraswamy)ಗೆ ಚುನಾವಣಾ ಖರ್ಚಿಗಾಗಿ ಕಾರ್ಯಕರ್ತರೊಬ್ಬರು 500ರೂ ದುಡ್ಡು ಕೊಟ್ಟು ಗಮನ ಸೆಳೆದಿರುವ ಘಟನೆ ನಡೆದಿದೆ.

 

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಬರದಿಂದ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಪ್ರಚಾರ ನಿಮಿತ್ತವಾಗಿ ಮಂಡ್ಯದ ಖಾಸಗಿ ಹೋಟೆಲ್(Hotel) ಗೆ ಹೆಚ್ ಡಿ ಕುಮಾರಸ್ವಾಮಿ ಅವರು ಸೋಮವಾರ ಆಗಮಿಸಿದ್ದರು.

 

ಮಂಡ್ಯ ಲೋಕಸಭಾ(Lokasabha) ಚುನಾವಣೆಯ ಪ್ರಚಾರಕ್ಕಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯಗೆ ಆಗಮಿಸಿದ್ದ ಸಂದರ್ಭದಲ್ಲಿ, ಹೆಚ್ ಡಿ ಕೆ ಕಾಲಿಗೆ ಬಿದ್ದು ಹನಕೆರೆ ಗ್ರಾಮದ ಜೋಗಪ್ಪ ತನ್ನ ಕಿಸೆಯಿಂದ ತೆಗೆದ 500ರೂ ವನ್ನು ಕುಮಾರಸ್ವಾಮಿ ಅವರಿಗೆ ನೀಡಿ ನೀವು ಕ್ಯಾಬಿನೆಟ್ ಮಿನಿಸ್ಟರ್ ಆಗಬೇಕು ಎಂದು ಹಾರೈಸಿದ್ದಾರೆ.

 

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ರಾಜ್ಯದ ಗಮನ ಸೆಳೆದಿದೆ. ಒಂದು ಕಡೆ ಬಿಜೆಪಿ ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಯಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಕಣಕ್ಕಿಳಿದಿದ್ದಾರೆ ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಸ್ಪರ್ಧೆಯಲ್ಲಿದ್ದಾರೆ.

 

 

https://www.janataa24.com/complaint-filed-against-actor-shivraj-kr-pete-for-verbal-abuse-of-bengaluru-woman/

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

 

Leave a Reply

Your email address will not be published. Required fields are marked *