Janataa24 NEWS DESK
Gubbi:ತುಮಕೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ– ವಿ ಸೋಮಣ್ಣ.
ಗುಬ್ಬಿ : ತುಮಕೂರು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ರೈಲ್ವೆ ಕಾಮಗಾರಿ ನಡೆಯುತ್ತಿದ್ದು ತುಮಕೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇನೆ. ತಾವೆಲ್ಲರೂ ನನ್ನನ್ನು ಗೆಲ್ಲಿಸಿದ್ದಕ್ಕೆ ಅದರ ಋಣವನ್ನು ತೀರಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ ಸೋಮಣ್ಣ ತಿಳಿಸಿದರು.
ತಾಲ್ಲೂಕಿನ ನಿಟ್ಟೂರು -ಮೈಸೂರು ಸಂಪರ್ಕಿಸುವ ಮುಖ್ಯ ರಸ್ತೆಯ ಪುರ ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು
ಗುಬ್ಬಿ ತಾಲೂಕಿನಲ್ಲಿ ಅತ್ಯಂತ ಹೆಚ್ಚು ರೈಲ್ವೆ ಕಾಮಗಾರಿಗಳು ನಡೆಯುತ್ತಿದ್ದು ತಾವು ನೀಡಿದಂತಹ 27000 ಮತ ದಾನದ ಅಂತರ ದಿಂದ ಗೆಲ್ಲಿಸಿದ್ದೀರಾ ಅದರ ಋಣವನ್ನ ತೀರಿಸುವ ಭಾರ ನನ್ನ ಮೇಲೆತ್ತು. ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಗೆ ಅವಕಾಶ ನೀಡಿದ ಪರಿಣಾಮವಾಗಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲು ಅನುಕೂಲವಾಗಿದೆ 127 ಕೋಟಿ ಕೇಂದ್ರ ಸರಕಾರದಿಂದ ಗುಬ್ಬಿ ಎನ್ ಎಚ್ 206 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆ ಮಾಡುತ್ತಿದ್ದೂ ಇದರಿಂದ ಇಡೀ ಗುಬ್ಬಿ ಪಟ್ಟಣ ಸೇರಿದಂತೆ ತಾಲೂಕು ಸಹ ಅಭಿವೃದ್ಧಿಯಾಗುತ್ತಿದೆ.
ದೇಶದಲ್ಲಿ ಅತ್ಯಂತ ಹೆಚ್ಚು ರೈಲ್ವೆ ಕಾಮಗಾರಿಯನ್ನು ಗುಬ್ಬಿ ತಾಲೂಕಿಗೆ ನೀಡಲಾಗಿದ್ದು ರೈಲ್ವೆ ಅಂಡರ್ ಪಾಸ್ ರೈಲ್ವೆ ಮೇಲ್ ಸೇತುವೆ ಸೇರಿದಂತೆ 15 ಕಾಮಗಾರಿಗಳು ಚಾಲನೆಯಲ್ಲಿವೆ ಎಂದರು. ಬಯಲು ಮುಕ್ತ ಶೌಚಾಲಯ, ಶುದ್ಧ ಕುಡಿಯುವ ನೀರಿಗೆ ನಮ್ಮ ಕೇಂದ್ರ ಸರ್ಕಾರವು ಅತ್ಯಂತ ಹೆಚ್ಚಿನ ಒಲವು ತೋರಿದ್ದು ಪ್ರತಿ ಗ್ರಾಮದಲ್ಲಿಯೂ ಸಹ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದೇವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ನಮಗೆ ಕೆಲಸ ಮುಖ್ಯವೆ ಹೊರತು ಯಾವುದೇ ರಾಜಕೀಯವಲ್ಲ, ನಾನು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಹೊರತು ರಾಜಕೀಯಕಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಂಜೆ 5:00ಗಂಟೆ ಗೆ ನಿಟ್ಟೂರು ರೈಲ್ವೆ ನಿಲ್ದಾಣದಲ್ಲಿ ಚಿಕ್ಕಮಗಳೂರು -ಯಶವಂತಪುರ ಎಕ್ಸ್ಪ್ರೆಸ್ ರೈಲಿನ ನಿಲುಗಡೆಗೆ ಹಸಿರು ನಿಶಾನೆ ನೀಡಿದರು.
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಹಲವು ಅಧಿಕಾರಿಗಳು, ಬಿಜೆಪಿ ಜಿಲ್ಲಾ ಅಧ್ಯಕ್ಷ ಹೆಬ್ಬಾಕ ರವಿ,ಮುಖಂಡರಾದ ಚಂದ್ರಶೇಖರ ಬಾಬು, ಎಸ್ ಡಿ ದಿಲೀಪ್ ಕುಮಾರ್, ಚಂದ್ರಶೇಖರ್ ಬಾಬು ಗ್ರಾಮ ಪಂಚಾಯತಿ ಅಧ್ಯಕ್ಷ ಲತಾ, ಜಿ ಎನ್ ಬೆಟ್ಟಸ್ವಾಮಿ,ದಿಶಾ ಸಮಿತಿಯ ಸದಸ್ಯರಾದ ಹುಚ್ಚಯ್ಯ, ಡಾ.ನವ್ಯಾಬಾಬು, ಗ್ರಾಮ ಪಂಚಾಯತಿ ಸದಸ್ಯರು ಗಳು ಸೇರಿದಂತೆ ಹಲವು ಮುಖಂಡರು ಗ್ರಾಮಸ್ಥರು ಸಾರ್ವಜನಿಕರು ರೈಲ್ವೆ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.