Janataa24 NEWS DESK
Gubbi: A Tribal Community Deprived of Basic Amenities For 45 years.
ಗುಬ್ಬಿ: ಪಟ್ಟಣದ ಪೊಲೀಸ್ ಠಾಣೆ ಹಿಂಭಾಗ ಬುಡಕಟ್ಟು( ಹಂದಿ ಜೋಗರ ) ಸಮುದಾಯದವರು ಸುಮಾರು 40 -45ವರ್ಷಗಳಿಂದ ವಾಸ ಮಾಡುತ್ತಾ ಬಂದಿದ್ದು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ತಾಲೂಕು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನ ಮುರಿಯುತ್ತಿದ್ದಾರೆ ಎಂದು ಬುಡಕಟ್ಟು ಸಮುದಾಯದವರು ಕಣ್ಣೀರಿಟ್ಟು ಆಕ್ರಂದಿಸುವಂತಹ ಮನ ಕಲಕುವಂತಹ ಘಟನೆ ನಡೆಯಿತು.
ಬುಡಕಟ್ಟು ಜನಾಂಗದ ಮುಖಂಡ ಮಾರಯ್ಯ ಮಾತನಾಡಿ ಸರಿ ಸುಮಾರು 45 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಾ ಬಂದಿದ್ದು ನಮಗೆ ಇಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆ, ಚರಂಡಿ, ಮನೆಗಳು ಮಾತ್ರ ಮರೀಚಿಕೆ ಯಾಗಿವೆ.
ನಮ್ಮ ಈ ನೋವನ್ನು 2018ರಲ್ಲಿ ಮಾನ್ಯ ಜಿಲ್ಲಾಧಿಕಾರಿ ಮೋಹನ್ ರವರಿಗೆ ಮನವಿ ಮಾಡಿದ್ದೆವು.
ನಮ್ಮ ಬೇಡಿಗೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಶೀಘ್ರವಾಗಿ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ನಿರ್ಮಾಣ ಮಾಡಿಕೊಡಲು ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದರು. ಅವರ ಆದೇಶದಂತೆ ಸಾತೇನಹಳ್ಳಿ ಬಳಿ ಎರಡು ಎಕರೆ ಪ್ರದೇಶ ಜಾಗ ಗುರುತಿಸಿದ್ದೇವೆ ಎಂದು ತಾಲೂಕು ದಂಡಾಧಿಕಾರಿಗಳು ತಿಳಿಸಿದ್ದರು. ಆದರೆ2018ನೇ ಇಸವಿಯಿಂದ ಇಲ್ಲಿಯವರೆಗೂ ಸೈಟು ಹಂಚಿಕೆಯಾಗಲಿ ಅಥವಾ ನಿವೇಶನ ನಿರ್ಮಾಣ ಮಾಡುವ ಗೋಜಿಗೆ ಹೋಗದೆ ಅಧಿಕಾರಿಗಳು ಮಾತ್ರ ನಮಗೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ನಮಗೆ ನಮ್ಮ ನಿವೇಶನ ಗುರುತಿನ ಪಕ್ಕದಲ್ಲಿ ತಾತ್ಕಾಲಿಕವಾಗಿ ಗುಡಿಸಲು ಹಾಕಿಕೊಂಡು ವಾಸ ಮಾಡಲು ಅಧಿಕಾರಿಗಳು ಅನವು ಮಾಡಿಕೊಡಬೇಕು ಹಲವು ಸಾಂಕ್ರಾಮಿಕ ರೋಗಗಳಿಗೆ ಹೆದರಿ ದಿನೇ ದಿನೇ ಜೀವ ಕೈಯಲ್ಲಿ ಹಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಬಸ್ ನಿಲ್ದಾಣ ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ರಾತ್ರಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆಎಂದು ದುಃಖಿಸಿದರು.
ಗ್ರಾಮದ ಮಹಿಳೆ ಗುಂಡಮ್ಮ ಮಾತನಾಡಿ ಸರಿಸುಮಾರು ನಾಲ್ಕುನೂರು ಜನರು ಈ ಜಾಗದಲ್ಲಿ ವಾಸಿಸುತ್ತಿದ್ದು ಮಳೆಗಾಲ ಪ್ರಾರಂಭವಾದರೆ ನಮ್ಮ ಗುಡಿಸಲುಗಳಿಗೆ ಮಳೆಯ ನೀರು ನುಗ್ಗುತಿದೆ. ನೀರಿನ ಜೊತೆ ವಿಷಪೂರಿತ ವಿಷ ಜಂತುಗಳು ಸೇರಿದಂತೆ ಅಲವು ತ್ಯಾಜ್ಯಗಳು ಬರುತ್ತಿವೆ ಅಡುಗೆ ಮಾಡಲು ಸಾಧ್ಯವಾಗದೆ ಮಕ್ಕಳು ಮತ್ತು ನಾವು ಉಪವಾಸ ಇರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ತಾಲೂಕು ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮ ನೋವಿಗೆ ಸ್ಪಂದಿಸಬೇಕು ಎಂದು ದುಃಖಿತರಾದರು.
ಈ ಸಂದರ್ಭದಲ್ಲಿ ಕರಿಯ,ವೆಂಕಟೇಶ್,ಮಾರಯ್ಯ ವಿ, ಗುರುವಯ್ಯ, ಮಾರಕ್ಕ,ಮೀನಾಕ್ಷಿ,ಶಂಕರ ಸೇರಿದಂತೆ ಹಲವಾರು ಸಂತ್ರಸ್ತರು ಹಾಜರಿದ್ದರು.
ತಾಲೂಕು ಆಡಳಿತ ಅಧಿಕಾರಿಗಳ ವರ್ಗ ಬುಡಕಟ್ಟು ಸಮುದಾಯಗಳಿಗೆ ಸ್ಪಂದಿಸುತ್ತಿದೆ.
ಜಾಗ ಹಂಚಿಕೆಯಾಗಿದ್ದು ನಿವೇಶನ ಮತ್ತು ಮೂಲಭೂತ ಸೌಕರ್ಯಗಳನ್ನು ಆದಷ್ಟು ಶೀಘ್ರವಾಗಿ ನಿರ್ಮಾಣ ಮಾಡಲಾಗುವುದು.
–ತಾಲೂಕು ದಂಡಾಧಿಕಾರಿಗಳು ಬಿ. ಆರತಿ.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.