Document

Gubbi: ಸಮ್ಮಿಶ್ರ ಸರ್ಕಾರದಲ್ಲಿ ಲಿಂಕ್ ಕೆನಾಲ್ ವಿರೋಧಿಸಿ ಪಕ್ಷದಿಂದ ಹೊರ ನಡೆದಿದ್ದೇ–ಎಸ್ ಆರ್ ಶ್ರೀನಿವಾಸ್.

JANATAA24 NEWS DESK 

 

Gubbi: ಸಮ್ಮಿಶ್ರ ಸರ್ಕಾರದಲ್ಲಿ ಲಿಂಕ್ ಕೆನಾಲ್ ವಿರೋಧಿಸಿ ಪಕ್ಷದಿಂದ ಹೊರ ನಡೆದಿದ್ದೇ–ಎಸ್ ಆರ್ ಶ್ರೀನಿವಾಸ್.

Gubbi

ಗುಬ್ಬಿ: ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ 2018 ರ ಸಮ್ಮಿಶ್ರ ಸರ್ಕಾರದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಅನುಮೋದನೆ ನೀಡಿದಾಗ ಅದನ್ನು ವಿರೋಧಿಸಿ ನಾನು ಹೊರ ನಡೆದಿದ್ದೆ‌. ಈಗಲೂ ಲಿಂಕ್ ಕೆನಾಲ್ ವಿರೋಧಿಸುತ್ತೇನೆ ಎಂದು ಶಾಸಕಎಸ್ ಆರ್ ಶ್ರೀನಿವಾಸ್ ತಿಳಿಸಿದರು.

 

ತಾಲೂಕಿನ ಚೇಳೂರು ಹೋಬಳಿಯ ಅಂಕಸಂದ್ರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು

 

ಕಾಂಗ್ರೆಸ್ ಮತ್ತು ಜೆ ಡಿ ಎಸ್ ಸಮಿಶ್ರ ಸರ್ಕಾರವಿದ್ದಾಗ ಹೆಚ್ ಡಿ ಕುಮಾರಸ್ವಾಮಿ ಅವರು ಇದಕ್ಕೆ ಅನುಮೋದನೆ ನೀಡಿದರು ಆಗ ನಾನು ಇದನ್ನು ವಿರೋಧಿಸಿದ್ದೆ ನಂತರ ಬಿಜೆಪಿ ಸರ್ಕಾರವು ಈ ಯೋಜನೆಯನ್ನು ಕೈ ಬಿಟ್ಟು ನಾಲಾ ಅಗಲೀಕರಣ ದುರಸ್ತಿ ಕಾಮಗಾರಿಯನ್ನು ನಡೆಸಿತು.

ಲಿಂಕ್ ಕೆನಾಲ್ ಗೆ ನನ್ನ ಸಂಪೂರ್ಣ ವಿರೋಧವಿದ್ದು ನಾನು ಸರ್ಕಾರದ ಒಂದು ಭಾಗವಾದ್ದರಿಂದ ಬೀದಿಗೆ ಇಳಿದು ಹೋರಾಟ ಮಾಡಲು ಆಗುವುದಿಲ್ಲ. ಎಲ್ಲಿ ಮಾತನಾಡಬೇಕೊ ಅಲ್ಲಿ ಮಾತನಾಡುತ್ತೇನೆ. ಜೆ ಸಿ ಮಧುಸ್ವಾಮಿಯವರು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಕಾನೂನು ಹೋರಾಟ ಮಾಡುತ್ತಿರುವುದನ್ನು ಸ್ವಾಗತಿಸುತ್ತೇನೆ ಎಂದ‌ ಅವರು ನಾನು ಯಾವುದೇ ಸಚಿವ ಸ್ಥಾನಕ್ಕೆ ಲಾಬಿ ನಡೆಸಿಲ್ಲ ಮುಖ್ಯಮಂತ್ರಿಗಳು ನೀನು ನನ್ನ ಮನೆ ಮಗ ಎಂದಿದ್ದಾರೆ ಹಾಗಾಗಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

 

ಈ‌ ಸಂದರ್ಭದಲ್ಲಿ ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್, ಮುಖಂಡರಾದ ಕೆ ಆರ್ ಗೌಡ, ಹನುಮಂತರಾಜು, ಶಿವಣ್ಣ, ಮಂಚಲದೂರೆ ರಮೇಶ್, ರಂಗನಾಥಪ್ಪ, ಬೊಮ್ಮಣ್ಣ, ಸಣ್ಣರಂಗಯ್ಯ, ಕಾಂತರಾಜು, ಶ್ರೀನಿವಾಸ್, ಸೇರಿದಂತೆ ಇತರರು ಹಾಜರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

https://www.janataa24.com/iasipskas-who-stood-as-the-godfather-of-the/

 

 

https://www.janataa24.com/miscreants-uprooted-40-coconut-trees-turuvekere/

 

 

https://www.janataa24.com/operation-sindor-pok-9-terrorist/

 

Document

Leave a Reply

Your email address will not be published. Required fields are marked *